Home Mangalorean News Kannada News ಸಂತ ಆಂತೋನಿ ಆಶ್ರಮ ಜೆಪ್ಪು : ಕ್ರಿಸ್ತ ನಮನ 2019

ಸಂತ ಆಂತೋನಿ ಆಶ್ರಮ ಜೆಪ್ಪು : ಕ್ರಿಸ್ತ ನಮನ 2019

Spread the love
RedditLinkedinYoutubeEmailFacebook MessengerTelegramWhatsapp

ಸಂತ ಆಂತೋನಿ ಆಶ್ರಮ ಜೆಪ್ಪು : ಕ್ರಿಸ್ತ ನಮನ 2019

ಸಂತ ಅಂತೋನಿ ಆಶ್ರಮ ಜೆಪ್ಪು ವತಿಯಿಂದ  ಜೆಪ್ಪು ಆಶ್ರಮದಲ್ಲಿ ‘ಕ್ರಿಸ್ತ ನಮನ 2019’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಗೆ ನೂತನವಾಗಿ ಆರಿಸಿ ಬಂದ ಸದಸ್ಯರಿಗೆ ಸನ್ಮಾನಿಸಲಾಯ್ತು.

 ಲ್ಯಾನ್ಸಲೆಟ್ ಪಿಂಟೊ, ಶ್ರೀಮತಿ ಜೆಸಿಂತ ಆಲ್ಫ್ರೆಡ್,  ನವೀನ್ ಡಿ’ಸೋಜ, ಶ್ರೀ ಅಬ್ದುಲ್ ರವುಫ್, ಶ್ರೀ ವಿನಯ್ ರಾಜ್, ಶ್ರೀ ಭರತ್ ಕುಮಾರ್ ಎಸ್. ಮತ್ತು ಶ್ರೀ ಶೈಲೇಶ್ ಬಿ. ಶೆಟ್ಟಿ ಸನ್ಮಾನಿಸಲ್ಪಟ್ಟ ಪಾಲಿಕೆಯ ಸದಸ್ಯರು. ಮಹಾನಗರ ಪಾಲಿಕೆಗೆ ಮತ್ತು ಸಂತ ಆಂತೋನಿ ಆಶ್ರಮಕ್ಕೆ ನೀಡುವ ಸೇವೆಯನ್ನು ಸ್ಮರಿಸಿ ಈ ಸನ್ಮಾನ ಮಾಡಲಾಯ್ತು. ಸನ್ಮಾನಿತರ ಪರವಾಗಿ ಶ್ರೀಮತಿ ಜೆಸ್ಸಿಂತ ಆಲ್ಫ್ರೆಡ್‍ರವರು ಸಂತ ಆಂತೋನಿ ಆಶ್ರಮದಿಂದ ಬಡಬಗ್ಗರ ಸೇವೆಯನ್ನು ಶ್ಲಾಘಿಸಿ ಮುಂದಕ್ಕೂ ತಮ್ಮಿಂದ ಬೇಕಾದ ಸೇವೆಯನ್ನು ನೀಡಲು ತಾವು ಸದಾ ಸಿದ್ದರಿದ್ದೇವೆ ಎಂಬ ಆಶ್ವಾಸನೆ ನೀಡಿದರು.

ಡಾ. ಶ್ರೀವರ್ಮ ಹೆಗ್ಗಡೆ, ಆನ್ನಪೂರ್ಣ ದಾಸ; ಪೆÇ್ರ. ಅಬ್ದುಲ್ ನೂರನಿ, ಅಲ್ ಮದೀನ ಮಂಜನಾಡಿ; ಡಾ. ಜುಲಿಯಾನ್ ಸಲ್ದಾನ, ಆರ್.ಎಮ್.ಒ. ವೆನ್ಲಾಕ್ ಆಸ್ಪತ್ರೆ; ಶ್ರಿ ಕೃಷ್ಣರಾಜ್ ಕೆ. ಮೆಸ್ಕಾಂ ಕಾರ್ಯನಿರ್ವಾಹದ ಅಭಿಯಂತರರು; ಶ್ರೀ ಗೋಪಾಲ್ ಭಟ್, ಸಂಚಾರ ನಿರೀಕ್ಷಕರು; ಶಾಂತಲಾ ಗಟ್ಟಿ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ; ಮಂಜುಳ, ಪೆÇೀಲಿಸ್ ಸಬ್-ಇನ್‍ಸ್ಪೆಕ್ಟರ್; ಫಾ. ಸಿಪ್ರಿಯನ್ ಪಿಂಟೊ, ಸಂತ ಜೋಸೆಫ್ ದೇವಾಲಯ ವಾಮಂಜೂರು; ಫಾ. ಫ್ರಾನ್ಸಿಸ್ ಡಿ’ಸೋಜ, ಸಂತ ಜೋಸೆಫ್ ಸೆಮಿನರಿ ಜೆಪ್ಪು; ಫಾ. ರೋಶನ್ ಡಿ’ಸೋಜ, ಫಾ. ತೃಶಾನ್ ಡಿ’ಸೋಜ ಸಹಾಯಕ ನಿರ್ದೇಶಕರು ಮತ್ತು ಜೆಪ್ಪು ಸುತ್ತುಮುತ್ತಲಿನ ಧರ್ಮಭಗಿನಿಯರು ಹಾಗೂ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸಂಸ್ಥೆಯ ನಿರ್ದೇಶಕರಾದ ಫಾ. ಒನಿಲ್ ಡಿ’ಸೋಜ ಪ್ರಾಸ್ತವಿಕವಾಗಿ ಮಾತಾನಾಡಿ ಎಲ್ಲರನ್ನು ಸ್ವಾಗತಿಸಿದರು. ಸಂಸ್ಥೆಯ ಸಹಾಯಕ ನಿರ್ದೇಶಕರಾದ ಫಾ. ತೃಶಾನ್ ಡಿ’ಸೋಜ ವಂದಿಸಿದರು. ಕು. ಶೈನಿ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಕೊನೆಗೆ ‘ಮೊಗಾಚಿ ಲಾರ್ಹಾ’ ಖ್ಯಾತಿಯ ಶ್ರೀ ವಿನ್ಸೆಂಟ್ ಫೆರ್ನಾಂಡಿಸ್ ಮತ್ತು ತಂಡದವರು ಕ್ರಿಸ್ಮಸ್ ಹಾಡುಗಳನ್ನು ಹಾಡಿ ಎಲ್ಲರನ್ನು ರಂಜಿಸಿದರು.


Spread the love

Exit mobile version