ಸಂತ ಆಂತೋನಿ ಆಶ್ರಮ-ಜೆಪ್ಪು ವಾರ್ಷಿಕ ಮಹೋತ್ಸವ-ಮೂರನೇ ದಿನದ ನವೇನ ಪ್ರಾರ್ಥನೆ

Spread the love

ಸಂತ ಆಂತೋನಿ ಆಶ್ರಮ-ಜೆಪ್ಪು ವಾರ್ಷಿಕ ಮಹೋತ್ಸವ-ಮೂರನೇ ದಿನದ ನವೇನ ಪ್ರಾರ್ಥನೆ

ಮಂಗಳೂರು : ಸಂತ ಆಂತೋನಿಯವರ ವಾರ್ಷಿಕ ಮಹೋತ್ಸವಕ್ಕೆ ತಯಾರಿಯಾಗಿ ನಡೆಯುತ್ತಿರುವ ಮೂರನೇ ದಿನದ ನವೇನ ಪ್ರಾರ್ಥನೆಯಂದು ಮಂಗಳೂರು ಧರ್ಮಪ್ರಾಂತ್ಯದ ಸಮಾಲೋಚನಾ ಕೇಂದ್ರದ ನಿರ್ದೇಶಕರಾದ ಫಾ. ಅರುಣ್ ಲೋಬೊರವರು ಬಲಿ ಪೂಜೆಯನ್ನು ಅರ್ಪಿಸಿದರು.

ಈ ಭಾನುವಾರ ಕಥೋಲಿಕರು ಪ್ರಪಂಚಾದಾದ್ಯಂತ ಯೇಸು ಸ್ವಾಮಿ ಸ್ವರ್ಗರೋಹಣವಾದ ಹಬ್ಬ ಆಚರಣೆ ಮಾಡುತ್ತಾರೆ. ಫಾ. ಅರುಣ್‍ರವರು, ‘ಯೇಸು ಸ್ವಾಮಿಯ ಸ್ವರ್ಗರೋಹಣದ ಹಬ್ಬ ಎಂದರೆ ಯೇಸು ಸ್ವಾಮಿ ಮರಣದಿಂದ ಪುನರ್‍ಜೀವ ಹೊಂದಿದ ನಾಲ್ವತ್ತನೆಯ ದಿನ ಸ್ವರ್ಗಕ್ಕೆ ಏರಿ ಹೋದರು. ಯೇಸು ಸ್ವಾಮಿಯ ಸ್ವರ್ಗಾರೋಹಣ ಈ ಪ್ರಪಂಚದಲ್ಲಿ ಇರುವ ಎಲ್ಲಾ ಮಾನವರಿಗೆ ಒಂದು ಭರವಸೆಯ ಹಬ್ಬ. ಮನುಷ್ಯನ ಜೀವನ ಮರಣದೊಂದಿಗೆ ಕೊನೆಗೊಳ್ಳುವುದಿಲ್ಲ ಬದಲಾಗಿ ಮೃತ್ಯು ಅನಂತ ಜೀವನಕ್ಕೆ ಹಾದು ಹೋಗುವ ದಾರಿಯಾಗಿರುತ್ತದೆ ಎಂದು ಹೇಳಿದರು. ಇವತ್ತು ಮಕ್ಕಳಿಗಾಗಿ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿಎಲ್ಲಾ ಮಕ್ಕಳು ಸ್ವಾಮಿ ಯೇಸುವಿನ ಆದರ್ಶವನ್ನು ಕಣ್ಣ ಮುಂದೆ ಇಟ್ಟು ಈ ಪ್ರಪಂಚದ ಜೀವನವನ್ನು ಪರಲೋಕವನ್ನು ಪಡೆಯುವ ಉದ್ದೇಶದಿಂದ ಜೀವಿಸಬೇಕೆಂದು ಕರೆಕೊಟ್ಟರು.

ಆಶ್ರಮದ ಸಹಾಯಕ ನಿರ್ದೇಶಕರಾದ ಫಾ. ರೋಶನ್ ಡಿ’ಸೋಜ ಜಪಸರ ಪ್ರಾರ್ಥನೆ ನಡೆಸಿ ಕೊಟ್ಟರು. ನಿರ್ದೇಶಕರಾದ ಫಾ.ಒನಿಲ್ ಡಿ’ಸೋಜರವರು ನವೇನ ಪ್ರಾರ್ಥನೆ ನೆರವೇರಿಸಿದರು. ಫಾ.ತೃಶಾನ್ ಡಿ’ಸೋಜ ಮತ್ತು ನೂರಾರು ಭಕ್ತಾಧಿಗಳು ನವೇನ ಭಕ್ತಿಯಲ್ಲಿ ಪಾಲ್ಗೊಂಡರು.


Spread the love