ಸಂತ ಕ್ರಿಸ್ಟೋಫರ್ ಎಸೋಸಿಯೇಷನ್ ಅಧ್ಯಕ್ಷರಾಗಿ ಲೀನಾ ಡಿಸೋಜ ಆಯ್ಕೆ
ವಾಹನ ಚಾಲಕ ಮಾಲಿಕರ ಸಂತ ಕ್ರಿಸ್ಟೋಫರ್ ಎಸೋಸಿಯೆಷನ್ 52-53 ನೇ ಸಾಲಿನ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಜರುಗಿತು.
ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜರವರು ಲೆಕ್ಕ ಪತ್ರವನ್ನು ಮಂಡಿಸಿ ಕಾರ್ಯದರ್ಶಿ ನೈಜಿಲ್ ಪಿರೇರ ರವರು ವಾರ್ಷಿಕ ವರದಿಯನ್ನು ಮಂಡಿಸಿದರು. ನಂತರ ಗೌರವ ಅಧ್ಯಕ್ಷರಾದ ಸುಶೀಲ್ ನೊರೊನ್ಹ ರವರು 52-53 ನೇ ಸಾಲಿನ ಪಧಾಧಿಕಾರಿಗಳ ಚುನಾವಣೆ ನಡೆಸಿದರು. ಎಸೋಸಿಯೇಷನ್ ಚರಿತ್ರೆಯಲ್ಲಿ ಮೊದಲ ಬಾರಿಗೆ ಮಹಿಳೆ ಲೀನಾ ಡಿಸೋಜ ಅಧ್ಯಕ್ಷರಾಗಿ ಆಯ್ಕೆ ಗೊಂಡರು.
ಅಧ್ಯಾತ್ಮಿಕ ನಿರ್ಧೆಶಕರು : ಅತೀ| ವಂ| ಜೆ. ಬಿ. ಕ್ರಾಸ್ತ
ಗೌರವ ಅಧ್ಯಕ್ಷರು : ಸುಶೀಲ್ ನೊರೊನ್ಹ
ಅಧ್ಯಕ್ಷರು : ಲೀನಾ ಡಿಸೋಜ
ಉಪಾಧ್ಯಕ್ಷರು : ಜೋನ್ ಬ್ಯಾಪ್ತಿಸ್ಟ್ ಗೊಮ್ಸ್
ಕಾರ್ಯದರ್ಶಿ : ನೈಜಿಲ್ ಪಿರೇರಾ
ಖಜಾಂಜಿ : ಅತೀ| ವಂ| ಜೆ. ಬಿ. ಕ್ರಾಸ್ತ
ಸಹ ಕಾರ್ಯದರ್ಶಿ : ಜುಲಿಯನ್ ಡಾಯಸ್
ಹಾಗೂ ಕಾರ್ಯಕಾರಿ ಸಮಿತಿಗೆ 45 ಸದಸ್ಯರನ್ನು ಆಯ್ಕೆ ಮಾಡಲಾಯಿತು