ಸಂಸದರೇ ಹಾಗೂ ಶಾಸಕರೇ ಗಾಡ ನಿದ್ರೆಯಿಂದ ಎದ್ದೇಳಿ – ಕೆ. ವಿಕಾಸ್ ಹೆಗ್ಡೆ

Spread the love

ಸಂಸದರೇ ಹಾಗೂ ಶಾಸಕರೇ ಗಾಡ ನಿದ್ರೆಯಿಂದ ಎದ್ದೇಳಿ – ಕೆ. ವಿಕಾಸ್ ಹೆಗ್ಡೆ

ಕುಂದಾಪುರ: ಪ್ರಥಮ ಮಳೆಗೆ ಕುಂದಾಪುರದ ಶಾಸ್ತ್ರೀ ವೃತ್ತದಿಂದ ಕೋಟೇಶ್ವರದ ತನಕ ಸರ್ವಿಸ್ ರಸ್ತೆಗಳು ಅಲ್ಲಲ್ಲಿ ಹೊಳೆಯಂತೆ ಆಗಿವೆ. ಇದು ಇಂದು ನಿನ್ನೆಯ ಸಮಸ್ಯೆಯಲ್ಲಾ ಅದೆಷ್ಟೋ ವರ್ಷಗಳಿಂದ ಕುಂದಾಪುರದ ಜನತೆ ಹಾಗೂ ವಾಹನ ಸವಾರರು, ಪಾದಚಾರಿಗಳು, ಸರ್ವಿಸ್ ರಸ್ತೆಯ ಇಕ್ಕೆಲಗಳಲ್ಲಿನ ವ್ಯಾಪಾರಸ್ಥರು, ನಿವಾಸಿಗಳು ಹೇಳತೀರದ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಆದರೆ ಈ ಸಮಸ್ಯೆಯನ್ನು ಪರಿಹರಿಸುವ ಜವಾಬ್ದಾರಿಯನ್ನು ಹೊತ್ತಿರುವ ಸಂಸದರು ಹಾಗೂ ಶಾಸಕರು ಮಾತ್ರ ಗಾಡ ನಿದ್ರೆಗೆ ಜಾರಿದಂತೆ ಇದೆ.

ಮಳೆಗಾಲ ಪ್ರಾರಂಭವಾದ ಮೇಲೆ ಕಾಟಾಚಾರಕ್ಕೆ ಅಲ್ಲಲ್ಲಿ ತೇಪೆ ಹಾಕುವ ಕೆಲಸ ಮಾಡುವುದಕ್ಕಿಂತ ಈಗಾಗಲೇ ಏಲ್ಲಿ ಸಮಸ್ಯೆಗಳಿದೆ ಆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡುವುದು ಉತ್ತಮ. ಅಧಿವೇಶನದಲ್ಲಿ ಜನರ ಇಂತಹ ಸಮಸ್ಯೆಗಳನ್ನು ಪರಿಹಾರ ಮಾಡುವ ಬಗ್ಗೆ ಸರ್ಕಾರದ ಗಮನ ಸೆಳೆಯುವುದನ್ನು ಬಿಟ್ಟು ಕೋಳಿ ಅಂಕಕ್ಕೆ ಅನುಮತಿ ಕೊಡಿ ಎನ್ನುವ ಶಾಸಕರಗಳನ್ನು ಆಯ್ಕೆ ಮಾಡಿದರೆ, ಸುಳ್ಳಿನಲ್ಲೇ ಗೋಪುರವನ್ನು ಕಟ್ಟುವ ಸಂಸದರನ್ನು ಆಯ್ಕೆ ಮಾಡಿದರೆ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಿಲ್ಲಾ ಎನ್ನುವುದಕ್ಕೆ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಒಂದು ಜ್ವಲಂತ ಉದಾಹರಣೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments