ಸಂಸದೆ ಶೋಭಾರನ್ನು ಹುಡುಕಿಕೊಡಿ ; ಚಿಕ್ಕಮಗಳೂರು ಐಟಿ ಸೆಲ್ ವತಿಯಿಂದ ಕಚೇರಿಗೆ ಮುತ್ತಿಗೆ
ಚಿಕ್ಕಮಗಳೂರು: ಉಡುಪಿ – ಚಿಕ್ಕಮಗಳೂರು ಸಂಸದೆ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿ ಕಳೆದು ಹೋಗಿರುವ ಸಂಸದರನ್ನು ಹುಡುಕಿಕೊಡಿ ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಜಿಲ್ಲಾಧ್ಯಕ್ಷ ಕಾರ್ತಿಕ್ ಜಿ. ಚೆಟ್ಟಿಯಾರ್ ನೇತೃತ್ವದಲ್ಲಿ ಸಂಸದರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕುವ ಮೂಲಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್ ಮೂರ್ತಿ ಮಾತನಾಡಿ ಜಿಲ್ಲೆಯ ರೈತರು, ಕಾಫಿಬೆಳೆಗಾರು ಹಲವಾರು ಸಮಸ್ಯೆಗಳಿಂದ ಕಂಗಾಲಿದ್ದು ಲೋಕಸಭೆಯಲ್ಲಿ ಚಕಾರವೆತ್ತದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡರು ಮಾತನಾಡಿ ಶೋಭಾ ಕರಂದ್ಲಾಜೆ ಹೋದ ಸ್ಥಳಗಳಲ್ಲಿ ಅಮಾಯಕರು ಸಾಯುತ್ತಿದ್ದು, ಧನ್ಯಶ್ರೀ ಆತ್ಮಹತ್ಯೆ, ದಾನಮ್ಮನವರ ಬಗ್ಗೆ ಒಂದೇ ಒಂದು ಮಾತು ಸಹ ಮಾತನಾಡದೆ ಮೌನವಹಿಸಿದ್ದಾರೆ ಎಂದು ಹೇಳಿದರು.
ಪ್ರತಿಭಟನೆಯ ಬಳಿಕ ಸಂಸದರ ಕಚೇರಿಗೆ ಮುತ್ತಿಗೆ ಹಾಕಲು ಹೋದ ಕಾಂಗ್ರೆಸ್ ಕಾರ್ಯಕರ್ತರನ್ನು ಪೋಲಿಸರು ತಡೆದರು. ಪ್ರತಿಭಟನೆಯಲ್ಲಿ ಝಮೀರ್ ಪಾಶ, ಕಿರಣ್, ಭರತ್ ಚೈತ್ರ, ಶ್ವೇತಾ, ಬಿಂದೂ, ಮೇಘನಾ, ದೀಕ್ಷಿತ್, ಜಿಲ್ಲಾ ಸೇವಾದಳದ ಅಧ್ಯಕ್ಷ ಸಿಲ್ವೆಸ್ಟರ್, ಹಾಗೂ ಇತರರು ಉಪಸ್ತಿತರಿದ್ದರು.
Yenta du maaraayre. He gella maatanaaduvudu nimage shobe koduttado?