Home Mangalorean News Kannada News ಸಂಸದ ನಳಿನ್ ಅವರಿಂದ ಕೇಂದ್ರ ರೈಲ್ವೆ ಸಚಿವರ ಭೇಟಿ

ಸಂಸದ ನಳಿನ್ ಅವರಿಂದ ಕೇಂದ್ರ ರೈಲ್ವೆ ಸಚಿವರ ಭೇಟಿ

Spread the love

ಸಂಸದ ನಳಿನ್ ಅವರಿಂದ ಕೇಂದ್ರ ರೈಲ್ವೆ ಸಚಿವರ ಭೇಟಿ

ಮಂಗಳೂರು: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ  ನಳಿನ್ ಕುಮಾರ್ ಕಟೀಲ್ ಇವರು ಕೇಂದ್ರ ರೈಲ್ವೇ ಸಚಿವರಾದ ಪಿಯೂಶ್ ಗೋಯಲ್ ಹಾಗೂ   ಕೇಂದ್ರ ರೈಲ್ವೇ ರಾಜ್ಯ ಸಚಿವರಾದ ಸುರೇಶ್ ಅಂಗಡಿಯವರನ್ನು ನವದೆಹಲಿಯಲ್ಲಿ ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈಲ್ವೇ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

ಪ್ರಮುಖ ಬೇಡಿಕೆಗಳು:
1. ಮಂಗಳೂರು ರೈಲ್ವೆ ವಿಭಾಗ ಮಂಜೂರು ಬಗ್ಗೆ.
2. ಮಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ 3 ಮತ್ತು 4ನೇ ಪ್ಲಾಟ್ ಫಾರಂ ನಿರ್ಮಾಣ ಕಾರ್ಯ ತ್ವರಿತಗೊಳಿಸುವುದು, ರೈಲುನಿಲ್ದಾಣಕ್ಕೆ ಹೊಸ ಕಟ್ಟಡ ಮಂಜೂರು ಮಾಡುವುದು ಹಾಗೂ ಇತರ ಮೂಲಸೌಕರ್ಯ ಅಭಿವೃದ್ಧಿ.
3. ಬೆಂಗಳೂರು ಮಂಗಳೂರು ನಡುವೆ “ಸೇವಾ ರೈಲು” ಪ್ರಾರಂಭಿಸುವುದು.
4. ಮಂಗಳೂರು – ಪುಣೆ ಮಧ್ಯೆ ಹೊಸ ರೈಲು ಸೇವೆ ಪ್ರಾರಂಭಿಸುವುದು.
5. ಗೇಜ್ ಪರಿವರ್ತನೆಯ ಸಂದರ್ಭದಲ್ಲಿ ರದ್ದಾಗಿದ್ದ ಮಂಗಳೂರನ್ನು ಹಾಸನ-ಅರಸೀಕೆರೆ ಮೂಲಕ ಹುಬ್ಬಳ್ಳಿ ಮೀರಜ್.ನ್ನು ಸಂಪರ್ಕಿಸುತ್ತಿದ್ದ ಮಹಾಲಕ್ಷ್ಮಿ ಎಕ್ಸಪ್ರೆಸ್ ರೈಲನ್ನು ಪುನರಾರಂಭಿಸುವುದು.
6. ಕಾಸರಗೋಡು – ಮೂಕಾಂಬಿಕಾ ರೋಡ್ ರೈಲನ್ನು ಪುನರಾರಂಭಿಸುವುದು ಹಾಗೂ ಗುರುವಾಯೂರ್ ವರೆಗೆ ವಿಸ್ತರಿಸುವುದು.
7. ಮಂಗಳೂರಿನಿಂದ ಉತ್ತರ ಭಾರತದ ಪ್ರಸಿದ್ದ ಯಾತ್ರಾಸ್ಥಳಗಳಾದ ವಾರಣಾಶಿ, ಪ್ರಯಾಗ್ ರಾಜ್ ಹಾಗೂ ಗೋರಖಪುರ ಮಧ್ಯೆ ಹೊಸ ರೈಲು ಪ್ರಾರಂಭಿಸುವುದು.
8. ವಿಜಯಪುರ – ಮಂಗಳೂರು ಜಂಕ್ಷನ್ ತತ್ಕಾಲ್ ರೈಲನ್ನು ಸೂಪರ್ ಫಾಸ್ಟ್ ರೈಲನ್ನಾಗಿ ಪರಿವರ್ತಿಸಿ ಹೈದರಾಬಾದ್ ವರೆಗೆ ವಿಸ್ತರಿಸುವುದು.
9. ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲನ್ನು ನಿತ್ಯ ಓಡಿಸುವುದು.
10. ಸುಬ್ರಹ್ಮಣ್ಯ-ಸಕಲೇಶಪುರ ಹಳಿ ದ್ವಿಪಥ ಕಾಮಗಾರಿ ಕೈಗೆತ್ತಿಕೊಳ್ಳುವುದು.
11. ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದು.
12. ಮಂಗಳೂರು – ತಿರುಪತಿ ಮಧ್ಯೆ ಹೊಸ ರೈಲು ಪ್ರಾರಂಭಿಸುವುದು.
13. ಹೌರಾ-ವಾಸ್ಕೋ ಮಧ್ಯೆ ಸಂಚರಿಸುವ ಅಮರಾವತಿ ಎಕ್ಸಪ್ರೆಸ್ ರೈಲನ್ನು (ಮಂಗಳೂರು-ಹುಬ್ಬಳ್ಳಿ-ಧಾರವಾಡ-ಹೊಸಪೇಟೆ-ಬಳ್ಳಾರಿಯನ್ನು ಸಂಪರ್ಕಿಸಲು) ಮಂಗಳೂರಿಗೆ ವಿಸ್ತರಿಸುವುದು. ಸೇರಿದಂತೆ ಇನ್ನೂ ಹಲವು ಬೇಡಿಕೆಗಳನ್ನು ಪೂರೈಸುವಂತೆ ಮಾನ್ಯ ಸಚಿವರುಗಳಿಗೆ ಸಂಸದರು ಮನವಿ ಮಾಡಿದರು.


Spread the love

Exit mobile version