Home Mangalorean News Kannada News ಸಂಸದ ನಳಿನ್ ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆ: ಜಿಲ್ಲಾ ಜೆಡಿಎಸ್, ಯುವ ಘಟಕ ಖಂಡನೆ

ಸಂಸದ ನಳಿನ್ ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆ: ಜಿಲ್ಲಾ ಜೆಡಿಎಸ್, ಯುವ ಘಟಕ ಖಂಡನೆ

Spread the love
RedditLinkedinYoutubeEmailFacebook MessengerTelegramWhatsapp

ಸಂಸದ ನಳಿನ್ ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆ: ಜಿಲ್ಲಾ ಜೆಡಿಎಸ್, ಯುವ ಘಟಕ ಖಂಡನೆ

ಮಂಗಳೂರು: ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಎರಡು ತಿಂಗಳ ಹಿಂದೆ ನಡೆದ ಬಿಜೆಪಿ ಕಾರ್ಯಕರ್ತ ಕಾರ್ತಿಕ್ ರಾಜ್ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ಎಚ್ಚರಿಕೆ ನೀಡಿದ್ದು ಸರಿಯಲ್ಲ ಇದನ್ನು ಜಿಲ್ಲಾ ಜೆಡಿಎಸ್ ಹಾಗೂ ಜಿಲ್ಲಾ ಯುವ ಜೆಡಿಎಸ್ ತೀವ್ರವಾಗಿ ಖಂಡಿಸಿದೆ.

jds-youth-wing
ಈ ಕುರಿತು ಮಾಧ್ಯಮಗಳಿಗೆ ಜಂಟಿ ಹೇಳಿಕೆ ನೀಡಿರುವ ಜಿಲ್ಲಾ ಜೆ ಡಿ ಎಸ್ ಅಧ್ಯಕ್ಷರಾದ ಮಹಮ್ಮದ್ ಕುಂಞ ಹಾಗೂ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷರಾದ ಅಕ್ಷಿತ್ ಸುವರ್ಣ ಅವರು ಜನಪ್ರತಿನಿಧಿಯಾದವರು ಜನರನ್ನು ಒಗ್ಗೂಡಿಸುವ ಕೆಲಸ ಮಾಡಬೇಕೇ ಹೊರತು ಬಿಕ್ಕಟ್ಟನ್ನು ಸೃಷ್ಟಿಸುವ ಕೆಲಸ ಮಾಡಬಾರದು. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರ ಬೇಜವಬ್ದಾರಿ ಹೇಳಿಕೆ ಖಂಡನೀಯ. ಉದ್ರೇಕಕಾರಿ ಹೇಳಿಕೆ ನೀಡಿ ಜನರನ್ನು ಕೇರಳಿಸುವುದು ಸರಿಯಲ್ಲ ಎಂದು ಅವರು ಹೇಳದ್ದಾರೆ.


Spread the love

Exit mobile version