Home Mangalorean News Kannada News ಸಂಸದ ವೀರಪ್ಪ ಮೊಯ್ಲಿ ಧರ್ಮಸ್ಥಳಕ್ಕೆ ಭೇಟಿ

ಸಂಸದ ವೀರಪ್ಪ ಮೊಯ್ಲಿ ಧರ್ಮಸ್ಥಳಕ್ಕೆ ಭೇಟಿ

Spread the love

ಸಂಸದ ವೀರಪ್ಪ ಮೊಯ್ಲಿ ಧರ್ಮಸ್ಥಳಕ್ಕೆ ಭೇಟಿ

ಧರ್ಮಸ್ಥಳ: ಸಂಸದ ಎಂ. ವೀರಪ್ಪ ಮೊಯ್ಲಿ ಭಾನುವಾರ ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಧರ್ಮಸ್ಥಳದ ಆಶ್ರಯದಲ್ಲಿ ಉಜಿರೆಯಲ್ಲಿ ನಡೆಸಲ್ಪಡುವ ರತ್ನಮಾನಸ ವಿದ್ಯಾರ್ಥಿ ನಿಲಯದ “ಒಲವು” ವಾರ್ಷಿಕ ಸಂಚಿಕೆಯನ್ನು ಭಾನುವಾರ ಧರ್ಮಸ್ಥಳದಲ್ಲಿ ಅವರು ಬಿಡುಗಡೆಗೊಳಿಸಿದರು.

ರತ್ನಮಾನಸದಲ್ಲಿ ಶಾಲಾ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ನೀಡುತ್ತಿದ್ದು ಮೊಯಿಲಿಯವರು ಈ ಬಗ್ಯೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಮಾಲತಿ ಮೊಯ್ಲಿ ಉಪಸ್ಥಿತರಿದ್ದರು. ದೇವರ ದರ್ಶನದ ಬಳಿಕ ಅವರು ಕಾರ್ಕಳಕ್ಕೆ ಪ್ರಯಾಣ ಮುಂದುವರೆಸಿದರು.


Spread the love

Exit mobile version