ಸಂಸ್ಕಾರ ಭಾರತಿ ಮಂಗಳೂರು ಆಶ್ರಯದಲ್ಲಿ ಗುರುವಂದನಾ ಕಾರ್ಯಕ್ರಮ
ಮಂಗಳೂರು : ಸಂಸ್ಕಾರ ಭಾರತಿ ಮಂಗಳೂರು ಆಶ್ರಯದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಗುರುವಂದನಾ ಕಾರ್ಯಕ್ರಮ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕಲಾವಿದರನ್ನು ಅವರವರ ನಿವಾಸಕ್ಕೆ 29-7-2018ರಂದು ತೆರಳಿ, ಅಭಿನಂದಿಸಿ ಸತ್ಕರಿಸಲಾಯಿತು.
ಭಜನೆ ಹಾಡುವುದರಲ್ಲಿ ನಿಸ್ಸಿಮರಾದ ರಮೇಶ್ ಎ. ಕೊಟ್ಟಾರಿ, ಚಿತ್ರಕಲಾವಿದ ಹಾಡುಗಾರ ಸೋಮನಾಥ ಆಚಾರ್ಯ, ಸಮಾಜ ಸೇವೆಯಲ್ಲಿ ದಶಕಗಳ ಸೇವೆ ಸಲ್ಲಿಸುತ್ತಿರುವ ಮನೋಹರ ತುಳಜಾರಾಂ, ಎಣ್ಣೆ ತೆಗೆಯುವ
ಕಲಕಸುಬಿನೊಂದಿಗೆ ಕೃಷಿ ಕಾಯಕ ನಡೆಸುತ್ತಿರುವ ಸದಾನಂದ ಮೊಯಿಲಿ, ದರ್ಶನ ಪಾತ್ರಿಯಾಗಿ ಎಳವೆಯಿಂದಲೇ ಸೇವೆ ಸಲ್ಲಿಸುತ್ತಿರುವ ಮಾಧವ ಪಾತ್ರಿ ಇವರುಗಳ ನಿವಾಸಕ್ಕೆ ನಿಟ್ಟೆ ವಿದ್ಯಾ ಸಂಸ್ಥೆ ನೀಡಿದ ನಗದು ಪುರಸ್ಕಾರ ಸನ್ಮಾನಪತ್ರ ಶಾಲು ಫಲವಸ್ತು ಹಾರದೊಂದಿಗೆ ಅಭಿನಂದಿಸಲಾಯಿತು.
ಸಂಸ್ಕಾರ ಭಾರತಿ ಸಂರಕ್ಷಕರಾದ ಕುಂಬ್ಳೆ ಸುಂದರರಾವ್, ಸಂಸ್ಕಾರ ಭಾರತಿ ಮಂಗಳೂರು ಘಟಕದ ಅಧ್ಯಕ್ಷರಾದ ಪುರುಷೋತ್ತಮ ಭಂಡಾರಿ, ಪ್ರಾಂತ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಉಳ್ಳಾಲ ಮೋಹನ್ ಕುಮಾರ್, ವಿಶ್ವಹಿಂದೂ ಪರಿಷತ್ ನ ಎಂ. ಬಿ. ಪುರಾಣಿಕ್, ಸಂಸ್ಕಾರ ಭಾರತಿ ಮಾಜಿ ಅಧ್ಯಕ್ಷ ಸುರೇಶರಾಜ್, ದ. ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಸಂಸ್ಕಾರ ಭಾರತಿ ಉಪಾಧ್ಯಕ್ಷ ಚಂದ್ರಶೇಖರ ನಾವಡ, ಮಣಿ ಅಕಾಡೆಮಿಯ ನಿತ್ಯಾನಂದ ರಾವ್, ಸಂಸ್ಕಾರ ಭಾರತಿ ಮಂಗಳೂರು ಪದಾಧಿಕಾರಿಗಳಾದ ನಾಗರಾಜ್ ಶೆಟ್ಟಿ, ಧನಪಾಲ್ ಶೆಟ್ಟಿಗಾರ್, ಗಣೇಶ್ ಕುಮಾರ್, ರಘುವೀರ್ ಗಟ್ಟಿ, ಮಾಧವ ಭಂಡಾರಿ, ಕಿರಣ್, ಚಂದ್ರಕಾಂತ್, ಸುಜೀರ್ ವಿನೋದ್, ನೃತ್ಯ ವಿಧುಷಿಗಳಾದ ಶಾರದಾ ಮಣಿ ಶೇಖರ್, ಶ್ರೀಲತಾ ನಾಗರಾಜ್, ರಾಜಶ್ರೀ ಉಳ್ಳಾಲ್ ಮತ್ತು ನಿರ್ಮಲ ಮುಂತಾದವರು ಉಪಸ್ಥಿತರಿದ್ಧರು.