Home Mangalorean News Kannada News ಸಂಸ್ಕೃತಿಯೊಂದಿಗೆ ಮಾನವ ಧರ್ಮವಿದ್ದಾಗ ಬದುಕು: ಪ್ರಕಾಶ್ ರೈ

ಸಂಸ್ಕೃತಿಯೊಂದಿಗೆ ಮಾನವ ಧರ್ಮವಿದ್ದಾಗ ಬದುಕು: ಪ್ರಕಾಶ್ ರೈ

Spread the love

ಸಂಸ್ಕೃತಿಯೊಂದಿಗೆ ಮಾನವ ಧರ್ಮವಿದ್ದಾಗ ಬದುಕು: ಪ್ರಕಾಶ್ ರೈ

ಮಂಗಳೂರು: ನುಡಿಯಂತೆ ಧರ್ಮ, ಆಚಾರ ವಿಚಾರ, ಸಂಸ್ಕೃತಿಯೂ ಬದುಕು. ಇವೆಲ್ಲದರ ಜತೆ ಮಾನವ ಧರ್ಮ ಇದ್ದಾಗ ಮಾತ್ರ ಅದು ನೈಜ ಬದುಕಾಗುತ್ತದೆ. ಮಾನವ ಧರ್ಮ, ಮಾನವೀಯತೆ ಇಲ್ಲದಿದ್ದಾಗ ಅದು ಕೇವಲ ಶಬ್ಧವಾಗುತ್ತದೆ ಎಂದು ಖ್ಯಾತ ಚಲನಚಿತ್ರ ನಟ ಪ್ರಕಾಶ್ ರೈ ಅಭಿಪ್ರಾಯಿಸಿದ್ದಾರೆ.

ನಂತೂರಿನ ಶಾಂತಿಕಿರಣ ಸಭಾಂಗಣದಲ್ಲಿ ಇಂದು ‘ಜನನುಡಿ’ ಐದನೆ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

 ಜನನುಡಿಯಂತಹ ಈ ರೀತಿಯ ವೇದಿಕೆಗಳಲ್ಲಿ ಕೇಳಿಸಿಕೊಳ್ಳುವುದು ಒಳ್ಳೆಯದು. ನ್ಯಾಯಮೂರ್ತಿಗಳ ಮಾತು ಒಳ್ಳೆಯ ಹಾಡು ಕೇಳಿ, ಕಾದಂಬರಿಯನ್ನ, ಒಳ್ಳೆಯ ಭಾಷಣವನ್ನ ಕೇಳಿದ ನಂತರ ಮೆಲುಕು ಹಾಕುವ ಸ್ಥಿತಿಯಲ್ಲಿ ಇದ್ದೇನೆ. ಈ ರೀತಿಯ ಪ್ರಬುದ್ದರು, ಒಂದು ವ್ಯವಸ್ಥೆಯಲ್ಲಿ ಇದ್ದವರು, ಸಂವಿದಾನದ ವ್ಯವಸ್ಥೆಯನ್ನ ಅರ್ಥ ಮಾಡಿಕೊಂಡವರು, ಜನರಿಂದ, ಜನಪರವಾದ ಇಂತಹ ಸಭೆಗಲ್ಲಿ ಭಾಗವಹಿಸಿ ಹಂಚಿಕೊಳ್ಳೋದು ನಮ್ಮ ಭಾಗ್ಯ. ಮತ್ತು, ಒಳ್ಳೆಯದಕ್ಕೆ, ಮನುಷ್ಯತ್ವಕ್ಕೆ, ಮಾನವೀಯತೆಗೆ, ಸಮಾನ ಸಮಾಜಕ್ಕೆ ನಂಬಿಕೆ ಇದೆ ಎಂಬ ಹುಮ್ಮಸ್ಸನ ಅವರು ಕೊಡುತ್ತಾರೆ. ಧನ್ಯವಾದಗಳು.

ಇತ್ತೀಚೆಗೆ ಬಹಳ ಜನ ನನ್ನ ಜಪ ಮಾಡ್ತಾರೆ. ಈಗಲೂ ಕೆಲವರು ಹೊರಗೆ ಜಪ ಮಾಡಿದ್ರಂತೆ. ಪಾಪ, ಹೋದಲೆಲ್ಲಾ ಬರೋದು, ಪೋಲಿಸರಿಂದ ಬೈಸಿಕೊಳ್ಳೋದು, ಜನರಿಂದ ಬೈಸಿಕೊಳ್ಳೋದು, ಇದರಿಂದ ಅವರಿಗೆ ಏನು ಸಿಗುತ್ತೋ… ಮುಂಚೆನೇ ಗೊತ್ತಿದ್ರೆ ಪೊಲೀಸರಿಗೆ ಹೇಳ್ತಿದ್ದೆ, ಅವರು ಒಳಗೆ ಬಿಡಿ ಸಂವಾದ ಮಾಡೋಣ ಅಂತಿದ್ದೆ. ಏಕೆಂದ್ರೆ ನಮಗೆ ದ್ವೇಷಿಸೋದು ಗೊತ್ತಿಲ್ಲ. ನಮಗೆ ಮುಂಚೆಯಿಂದಲು ಸಂವಾದದಲ್ಲಿ ಆಸಕ್ತಿ. ಕೇಳಿಸಿಕೊಳ್ಳೋಲ್ಲ ಅಂದ್ರೆ ಏನು ಮಾಡೋದು…. ಇರ್ಲಿ.

ಜನನುಡಿಯಲ್ಲಿ ಬಹಳ ಇಷ್ಟಪಟ್ಟಿದ್ದು ನುಡಿಯು ಸಿರಿಯಲ್ಲ ಬದುಕು ಎಂಬುದು. ಬಹಳ ಅರ್ಥ ಪೂರ್ಣ. ಸತ್ಯ ಕೂಡ. ಕನ್ನಡ, ತಮಿಳು, ಹಿಂದಿಯಾಗಲಿ ಬರೀ ಭಾಷೆ ಅಲ್ಲ. ನಾವು ಮನುಷ್ಯರು, ನಮ್ಮ ಆಶಯಗಳು, ಅದು ಬದುಕು. ನುಡಿಯಂತೆ ಧರ್ಮವೂ ಬದುಕೇ, ಆಚಾರ, ವಿಚಾರಗಳು ಬದುಕೇ. ನಮ್ಮ ಸಂಸ್ಕೃತಿಗಳೂ ಬದುಕೇ. ಇದೆಲ್ಲರದರ ನಡುವೆ ಮಾನನ ಧರ್ಮ ಇದ್ದರೆ ಮಾತ್ರ ಬದುಕು ಆಗುತ್ತೆ. ಆ ಥರದ ಮಾನವೀಯತೆ, ಮಾನವ ಧರ್ಮ ಇಲ್ಲದ್ದು ಬರೀಶಬ್ಧವಾಗುತ್ತೆ. ಹೊರಗೆ ಬಂದು ಹೋದ್ರಲ್ಲಾ … ಅವರ ಥರ.

ನಾನು ಬರುವಾಗ ನನ್ನ ಚಾಲಕ ಕೇಳ್ದ. ನಿಮ್ಮ ಧೈರ್ಯ ಮೆಚ್ಚುತ್ತೇನೆ ಅಂದ. ಧೈರ್ಯ ಇರೋದು ನನಗಲ್ಲ, ಸುಳ್ಳು ಹೇಳಿಕೊಂಡು ದೇಶವನ್ನ ಆಳಬಹುದು ಅಂದ್ಕೊತಾರಲ್ಲಾ ಅವರಿಗೆ ಧೈರ್ಯ ಬೇಕು. ನಾಚಿಕೆ, ಮಾನ, ಮರ್ಯಾದೆ ಇಲ್ಲದೇ, ಸುಳ್ಳು ಹೇಳಿಕೊಂಡು ಬದುಕಿ, ಮುಂದೆ ಯಾವತ್ತೋ ಒಂದು ದಿನ ಇದೇ ಜನರಿಂದ ಪಾಠ ಕಲೀತೀವಿ ಅಂತ ಗೊತ್ತಿದ್ರೂ ಇರ್ತಾರಲ್ಲಾ ಅವರಿಗೆ ಧೈರ್ಯ ಬೇಕು. ಅಲ್ವೇ.

ಇದು ಕೋಪದ ಮಾತಲ್ಲ. ಆತಂಕದ ಮಾತು. ಇವತ್ತು ದೇಶದಲ್ಲಿ ಧರ್ಮವನ್ನು ಇಟ್ಟುಕೊಂಡು ರಾಜಕೀಯ ಮಾಡುವುದರ ವಿರುದ್ಧ ಇದ್ದೀನಿ. ಆದರೆ ಧರ್ಮದ ವಿರೋಧಿ ಅಲ್ಲ ಎಂದರೆ ಕೇಳೋಲ್ಲ ಇವರು.

ಶಬರಿಮಲೆಯಂತಹ ಜನರ ನಂಬಿಕೆ. ಶಬರಮಲೆಯಂತಹ ಜನರ ನಂಬಿಕೆಯನ್ನು ಇವತ್ತು ಕೇಂದ್ರವನ್ನು ಆಳುತ್ತಿರುವ ಪಕ್ಷದ ಒ ಪ್ರಸಿಡೆಂಟ್ ತನ್ನ ಸದಸ್ಯರಿಗೆ, ಇದು ಗೋಲ್ಡನ್ ಆಪರ್ಚುನಿಟಿ, ಇದನ್ನು ಬಳಸಿ ಕೇರಳ ರಾಜ್ಯದಲ್ಲಿ ರಾಜಕೀಯ ಪಕ್ಷವಾಗಿ ಬೆಳೆಯಬಹುದು. ವಿಪಕ್ಷಗಳು ಟ್ರಾಪ್ ನಲ್ಲಿ ಸಿಲುಕಿದ್ದಾರೆ ಎಂದು ಹೇಳುತ್ತಾರೆ. ಇಷ್ಟು ಕೆಟ್ಟ ಆಲೋಚನೆ, ಮಾತು ಕೇಳ್ತಾ ಸುಮ್ಮನೆ ಕುಳಿತಿದ್ದೀವಿ.

ಧರ್ಮ ನಿಮ್ಮ ವೈಯಕ್ತಿಕ ವಿಚಾರಗಳು. ಅದು ನಿಮಗೆ ಉದ್ಯೋಗ ಕೊಡೋಲ್ಲ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡೋಲ್ಲ. ಸಮಾಜವನ್ನು ವೈಜ್ಞಾನಿಕವಾಗಿ ಬೆಳೆಸೋಲ್ಲ. ಇದನ್ನು ಅರ್ಥ ಮಾಡಿಕೊಳ್ಳದೇ ನಿಮ್ಮ ಅತಿ ಪ್ರೀತಿಯನ್ನು ಉಳಿಸಿಕೊಂಡು ಸುಳ್ಳು ಹೇಳಿಕೊಂಡು ಬದುಕುತ್ತಾರಲ್ಲಾ ಅವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

ಜನನುಡಿ ಎನ್ನುವ ಈ ಕಾರ್ಯಕ್ರಮ ನಮ್ಮ ಬದುಕನ್ನ, ನಮ್ಮ ಜನನುಡಿಯಂತಹ ವೇದಿಕೆಗಳು ಯಾಕೆ ಹುಟ್ಟುತ್ತವೆ ಗೊತ್ತೇ.. ಪ್ರಕೃತಿಯನ್ನು ಕಾಪಾಡುವಷ್ಟು ಮನುಷ್ಯ ದೊಡ್ಡವನಲ್ಲ. ಮನುಷ್ಯ ಇಲ್ಲದೇ ಕೂಡ ಪ್ರಕೃತಿ ಇರುತ್ತೆ. ಹಾಗೆಯೇ ಒಂದು ಸಮಾಜ ಈ ರೀತಿಯ ಕಿಡಿಗೇಡಿಗಳಿಂದ ಹಾಳಾಗುತ್ತಾ ನಮ್ಮನ್ನು ಅಳಿಸುತ್ತೆ. ಅಂತಹ ಅಳಿವಿನ ಅಳಿಸುವ ಶಕ್ತಿಗಳು ದೊಡ್ಡದಾಗಾಗ ಪ್ರಕೃತಿಯ  ನಮ್ಮಂಥವರನ್ನ ಒಂದು ಮಾಡುತ್ತೆ. ಅಂತಹ ಹುಳುಗಳನ್ನ, ಕಿಡಿಗೇಡಿಗಳನ್ನ ಎದುರಿಸುವಂತಹ, ಅಳಿಸುವಂತಹ ಮತ್ತು ಮನುಷ್ಯತ್ವವನ್ನ ಉಳಿಸುವುದಕ್ಕೆ ವಿ ಆರ್ ದ ಹೆಲ್ತಿ ವೈರಸ್ ಇನ್ ದಿಸ್ ಕಂಟ್ರಿ. ಈ ಥರದವರು ಸೇರೋದಕ್ಕೆ, ಒಂದು ಕಡೆ ಬರೋದಕ್ಕೆ, ಈ ಥರದ ಆಲೋಚನೆಗಳು ಹತ್ತು ಜನರನ್ನ ತಲುಪೋದಕ್ಕೆ ಜನನುಡಿಯಂತಹ ವೇದಿಕೆ ವೇದಿಕೆಯಾಗಲಿ.


Spread the love

Exit mobile version