ಸಕಾಲ ಯೋಜನೆಯಡಿ ಅರ್ಜಿ ಸ್ವೀಕಾರ ಕಡ್ಡಾಯ – ಅಪರ ಜಿಲ್ಲಾಧಿಕಾರಿ
ಮಂಗಳೂರು : ಸಕಾಲ ಯೋಜನೆಯ ಪ್ರಗತಿ ರ್ಯಾಂಕ್‍ನಲ್ಲಿ ಜಿಲ್ಲೆಯು ಈ ಹಿಂದೆ 27 ಸ್ಥಾನದಲ್ಲಿತು, ಆದರೆ ಪ್ರಸ್ತುತ ಅವಧಿಯಲ್ಲಿ ದ.ಕ ಜಿಲ್ಲೆಯು ಉತ್ತಮ ಸಾಧನೆ ತೋರಿ 12ನೇ ಸ್ಥಾನ ಪಡೆದುಕೊಂಡಿದೆ. ಇದೇ ರೀತಿಯಲ್ಲಿ ಎಲ್ಲಾ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಸಹಕಾರ ನೀಡಿದಲ್ಲಿ ಮುಂದಿನ ದಿನದಲ್ಲಿ ಜಿಲ್ಲೆಯು ಉತ್ತಮ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಎಮ್.ಜೆ ರೂಪಾ ಸಭೆಗೆ ಹೇಳಿದರು.
ಮಂಗಳವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಕಾಲ ಯೋಜನೆ ಅಡಿಯಲ್ಲಿ ಅತ್ಯಂತ ಕಡಿಮೆ ಅರ್ಜಿ ಸ್ವೀಕೃತಿಯ ಬಗ್ಗೆ ಹಾಗೂ ಸಕಾಲ ಯೋಜನೆಯ ಸಮರ್ಪಕ ಅನುಷ್ಟಾನದ ಕುರಿತು ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೆಲವು ಇಲಾಖೆಗಳು ಉತ್ತಮವಾದ ಸಾಧನೆಯನ್ನು ಮಾಡುತ್ತಿವೆ ಆದರೆ ಇನ್ನೂ ಕೆಲವು ಇಲಾಖೆಗಳು ಈ ಸಾಧನೆ ತೋರುವಲ್ಲಿ ವಿಫಲವಾಗಿವೆ, ಅಂತಹ ಇಲಾಖೆಯ ವಿರುದ್ಥ ಜಿಲ್ಲಾಡಳಿತ ಶೋಕಸ್ ನೋಟಿಸ್ ನೀಡಲಾಗುತ್ತದೆ ಎಂದು ಎಚ್ಚರಿಸಿದರು.
ಸಕಾಲ ಯೊಜನೆಯನ್ನು ಒಳಗೊಂಡಿರುವ ಎಲ್ಲಾ ಇಲಾಖೆಗಳು ಮುಂದಿನ ದಿನದಲ್ಲಿ ಕಡ್ಡಾಯವಾಗಿ ಸಕಾಲ ಯೋಜನೆಯ ಅಡಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಿ ಹಾಗೆಯೇ ನಿಗದಿತ ಸಮಯದಲ್ಲಿ ಸಾರ್ವಜನಿಕರಿಗೆ ಸೇವೆಯನ್ನು ನೀಡಬೇಕು. ತಹಶೀಲ್ದಾರರು ತಾಲೂಕು ಮಟ್ಟದಲ್ಲಿ ಯೋಜನೆಯ ಬಗ್ಗೆ ಅಗತ್ಯವಾಗಿ ಸಭೆಯನ್ನು ನಡೆಸಬೇಕು ಎಂದು ಸೂಚಿಸಿದರು. ಈ ಮೊದಲು ಜಿಲ್ಲೆಯು ರ್ಯಾಂಕ್‍ನಲ್ಲಿ ಹಿಂದೆ ಉಳಿಯಲು ಹಲವು ಇಲಾಖೆಗಳು ಸಕಾಲದಲ್ಲಿ ಅರ್ಜಿಯನ್ನು ಸ್ವೀಕರಿಸಿದೆ ಇದ್ದು, ಇತ್ಯರ್ಥವಾಗದೇ ಅರ್ಜಿಗಳು ಬಾಕಿ ಉಳಿದಿದ್ದವು ಆದ್ದರಿಂದ ಉನ್ನತ ಮಟ್ಟದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.
ಸಿಬ್ಬಂದಿ ವರ್ಗ, ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.