ಸಚಿವೆ ನಿರ್ಮಲಾ ಸೀತಾರಾಮನ್ ಅರ್ಥಶಾಸ್ತ್ರ ಬಿಟ್ಟು ಜ್ಯೋತಿಷ್ಯ ಹೇಳಲಿ – ವಿಶ್ವಾಸ್ ಅಮೀನ್

Spread the love

ಸಚಿವೆ ನಿರ್ಮಲಾ ಸೀತಾರಾಮನ್ ಅರ್ಥಶಾಸ್ತ್ರ ಬಿಟ್ಟು ಜ್ಯೋತಿಷ್ಯ ಹೇಳಲಿ – ವಿಶ್ವಾಸ್ ಅಮೀನ್

ಉಡುಪಿ: ಆರ್ಥಿಕ ದುಸ್ತಿಗೆ ದೇವರೇ ಕಾರಣ ಎಂದ ನಿರ್ಮಲಾ ಸೀತಾರಾಮನ್ ಅರ್ಥಶಾಸ್ತ್ರ ಬಿಟ್ಟು ಜ್ಯೋತಿಷ್ಯ ಶಾಸ್ತ್ರ ಹೇಳುವುದು ಉತ್ತಮ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಹೇಳಿದ್ದಾರೆ.

ಕೇಂದ್ರದ ನರೇಂದ್ರ ಮೋದಿ ಸರ್ಕಾರವು ರಾಜ್ಯದಲ್ಲಿದ್ದ ಮೌಲ್ಯ ವರ್ದಿತ ತೆರಿಗೆ (VAT) ಟ್ಯಾಕ್ಸನ್ನು ರದ್ದುಗೊಳಿಸಿ ದೇಶದಾದ್ಯಂತ ಏಕರೂಪ ತೆರಿಗೆ ಹೊಸ ನಿಯಮ GST (ಸರಕು ಮತ್ತು ಸೇವಾ ತೆರಿಗೆ) ಜಾರಿಗೆ ತಂದಿತು. ಕೇಂದ್ರದ ಈ ಹೊಸ ನೀತಿಯಿಂದಾಗಿ ರಾಜ್ಯದ ತೆರಿಗೆ ಆದಾಯಕ್ಕೆ ಆಗುವ ನಷ್ಟವನ್ನು ಭರಿಸುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿತ್ತು. ಈ ಬಾರಿಯ ಆರ್ಥಿಕ ವರ್ಷದಲ್ಲಿ ಕೊರಾನ ಲಾಕ್ಡೌನ್ ಕಾರಣದಿಂದ ಜಿ.ಎಸ್.ಟಿ ಸಂಗ್ರಹ ಸುಮಾರು 2.35 ಲಕ್ಷ ಕೋಟಿ ಕಡಿಮೆಯಾಗುವ ಸಂಭವನೀಯತೆ ಇರುವುದರಿಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯ ಸರ್ಕಾರಗಳಿಗೆ RBI ನಿಂದ ಸಾಲ ಪಡೆದು ನಂತರ ಮರುಪಾವತಿ ಮಾಡುವಂತೆ ಸೂಚನೆ ನೀಡಿದ್ದಾರೆ.

ಕೇಂದ್ರದ ಈ ಇಬ್ಬಗೆ ನೀತಿಗೆ ನಮ್ಮ ದಿಕ್ಕಾರವಿದೆ, ಈಗಾಗಲೆ ಕೇಂದ್ರ ಸರ್ಕಾರದ ಅವೈಜ್ಞಾನಿಕ ಲಾಕ್ಡೌನ್ ಕಾರಣದಿಂದಾಗಿ ಹಲವು ಮೂಲಗಳಿಂದ ರಾಜ್ಯದ ಬೊಕ್ಕಸಕ್ಕೆ ಬರುತ್ತಿದ್ದ ಆದಾಯದಲ್ಲಿ ಇಳಿಮುಖವಾಗಿದೆ. ರಾಜ್ಯದಲ್ಲಿ ಪ್ರವಾಹದಿಂದಾಗ ಜನರು ಮನೆ ಮಠ ಆಸ್ತಿ ಪಾಸ್ತಿ ಬೆಳೆದ ಬೆಳೆಗಳನ್ನು ಕಳೆದುಕೊಂಡು ರಾಜ್ಯವು ಕೋಟ್ಯಾಂತರ ರೂಪಾಯಿ ನಷ್ಟದಲ್ಲಿದೆ.

ಕೊರಾನ ಹಾಗೂ ಪ್ರವಾಹ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಮೇಲೆ ಸಾಲದ ಬರೆಯನ್ನು ಎಳೆಯುವುದು ಕೇಂದ್ರಕ್ಕೆ ರಾಜ್ಯದ ಜನರ ಮೇಲೆ ಕಾಳಜಿಯೇ ಇಲ್ಲ ಎಂದು ತೋರಿಸುತ್ತಿದೆ. ಈಗಿನ ಆರ್ಥಿಕ ದುಸ್ತಿಗೆ ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಯೇ ಕಾರಣವಾಗಿದೆ. ನೋಟ್ ಅಮಾನ್ಯೀಕರಣ ಮತ್ತು ಸರಿಯಾದ ಯೋಜನೆಯೇ ಇಲ್ಲದೆ ಲಾಕ್ಡೌನ್ ಹೇರಿರುವುದು ಇದಕ್ಕೆ ದೇವರ ಕಾರಣವೇ ಅಥವಾ ನಿಮ್ಮ ಸ್ವಯಂ ಕೃತ ಅಪರಾಧವೇ…? ದೇಶಕಂಡ ಅತ್ಯಂತ ದುರ್ಬಲ ವಿತ್ತಸಚಿವೆ ಆರ್ಥಿಕ ನೀತಿಯ ಬಗ್ಗೆ ಎಳ್ಳಷ್ಟೂ ಜ್ಙಾನವಿಲ್ಲದ ನಿರ್ಮಲಾ ಸೀತಾರಾಮನ್ ಅವರು ದೇಶವನ್ನು ದಿವಾಳಿ ಹಂತಕ್ಕೆ ತಲುಪಿಸಿದ್ದಾರೆ.

ದೇಶದ ಆರ್ಥಿಕತೆಯು ಕುಸಿಯಲು ದೇವರೇ ಕಾರಣವೆಂದು ಮೂಢರಂತೆ ಬೇಜವಾಬ್ದಾರಿಯಿಂದ ಹೇಳಿಕೆಯನ್ನು ನೀಡಿದ ನಿರ್ಮಲಾ ಸೀತಾರಾಮನ್ ಬಗ್ಗೆ ಕನಿಕರ ಉಂಟಾಗುತ್ತಿದೆ, ಇಂತಹ ಅಯೋಗ್ಯ ನಿಷ್ಪ್ರಯೋಜಕ ಅರ್ಥ ಶಾಸ್ತ್ರದ ಜ್ನಾನವೇ ಇಲ್ಲದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ದೇವರುದಿಂಡಿರು ಎಂದು ಜ್ಯೋತಿಷ್ಯ ಶಾಸ್ತ್ರ ಆರಂಭಿಸುವುದು ಉತ್ತಮ ಎನ್ನುವ ಸಲಹೆಯನ್ನು ವಿಶ್ವಾಸ್ ಅಮೀನ್ ನೀಡಿದ್ದಾರೆ.


Spread the love