ಸಚಿವ ಪ್ರಮೋದ್ ಮಧ್ವರಾಜ್ ವಿವಿಧ ಭಾಗಗಳಿಗೆ ನರ್ಮ್ ಬಸ್ ಗಳಿಗೆ ಚಾಲನೆ
ಉಡುಪಿ,: ಉಪ್ಪೂರು ಭಾಗದಲ್ಲಿ ಸಂಚರಿಸಿಸುವ ನರ್ಮ್ ಬಸ್ ಗಳಿಗೆ ರಾಜ್ಯದ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸೋಮವಾರ ಉಪ್ಪೂರಿನಲ್ಲಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಉಪ್ಪೂರು ಬಾಗದ ನಾಗರೀಕರ ಬಹುದಿನ ಬೇಡಿಕೆಯಾದ ಸರಕರಿ ಬಸ್ ಸೌಲಭ್ಯವನ್ನು ಈ ಮೂಲಕ ಒದಗಿಸಲಾಗಿದೆ, ವಿದ್ಯಾರ್ಥಿಗಳಿಗೆ ಈ ಬಸ್ ನಲ್ಲಿ ರಿಯಾಯತಿ ದರದಲ್ಲಿ ಪ್ರಯಾಣಕ್ಕೆ ಅವಕಾಶವಿದ್ದು, 1-7 ತರಗತಿಯ ಮಕ್ಕಳು ವಾರ್ಷಿಕ 130, 8 ರಿಂದ 10 ಯ ಹೆಣ್ಣು ಮಕ್ಕಳು 400 ಹಾಗೂ ಗಂಡು ಮಕ್ಕಳು 600 , ಪಿಯುಸಿ ವಿದ್ಯಾರ್ಥಿಗಳು 1100 ಹಾಗೂ ಪದವಿ ವಿದ್ಯಾರ್ಥಿಗಳು 1300 ರ ಪಾಸ್ ಮೂಲಕ 10 ತಿಂಗಳು ಪ್ರಯಾಣಿಸಬಹುದಾಗಿದ್ದು, ಅಂಧರಿಗೆ, ಅಂಗವಿಕಲರಿಗೆ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕøತರಿಗೆ ಉಚಿತ ಪ್ರಯಾಣ ಸೌಲಭ್ಯವಿದೆ ಎಂದರು.
ಜಿಲ್ಲೆಯಲ್ಲಿ ಖಾಸಗಿ ಬಸ್ ಸೌಲಭ್ಯ ಇಲ್ಲದ ಮಾರ್ಗದಲ್ಲಿ ಹಾಗೂ ಖಾಸಗಿ ಸೇವೆ ಉತ್ತಮವಾಗಿಲ್ಲದ ಮಾರ್ಗದಲ್ಲಿ ನರ್ಮ್ ಬಸ್ ಸೌಲಭ್ಯ ಒದಗಿಸಲಗಿದೆ, ಜನರ ಬೇಡಿಕೆಗೆ ಅನುಗುಣವಾಗಿ ಬಸ್ ಸೌಲಭ್ಯ ಒದಗಿಸಲಾಗುವುದು , ಪರಾರಿ ಸೇತುವೆ ಮತ್ತು ಶೀಂಬ್ರ ಪೆರಂಪಳ್ಳಿ ಸೇತುವೆ ಡಿಸೆಂಬರ್ 31 ರ ಒಳಗೆ ಪೂರ್ಣಗೊಳ್ಳಲಿದ್ದು, ಉಪ್ಪೂರಿನಿಂದ ಮಣಿಪಾಲಕ್ಕೆ ಕೇವಲ 5 ನಿಮಿಷದಲ್ಲಿ ಪ್ರಯಾಣಸಿಬಹುದಾಗಿದ್ದು, ಉಪ್ಪೂರಿನ ಸಮಗ್ರ ಅಭಿವೃದ್ದಿ ಆಗಲಿದೆ ಎಂದು ಸಚಿವರು ತಿಳಿಸಿದರು.
ಮಲ್ಪೆ ಪಡುಕೆರೆ ನಡುವೆ ನರ್ಮ ಬಸ್ಸಿಗೆ ಚಾಲನೆ
ಮಲ್ಪೆಯಿಂದ ಪಡುಕೆರೆ ನಡುವೆ ಸಂಚರಿಸಲಿರುವ 3 ನರ್ಮ್ ಬಸ್ಸುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸೋಮವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಸೇತುವೆ ಇಲ್ಲದ ಕಾರಣ ಪಡುಕೆರೆಗೆ ಹಲವು ದಶಕಗಳಿಂದ ಬಸ್ ಸಂಚಾರ ವ್ಯವಸ್ಥೆ ಸಾಧ್ಯವಾಗಿರಲಿಲ್ಲ ಇದೀಗ ಸೇತುವೆ ನಿರ್ಮಾಣವಾದ ನಂತರ ನರ್ಮ ಬಸ್ಸುಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಈ ವೇಳೆ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್ ರಾಜ್, ನಾರಾಯಣ ಕುಂದರ್, ಸತೀಶ್ ಅಮೀನ್ ಪಡುಕೆರೆ ಹಾಗೂ ಇತರರು ಉಪಸ್ಥಿತರಿದ್ದರು.
ಇದೇ ವೇಳೆ ಸಚಿವರು ಪಾವಂಜಿಗುಡ್ಡೆ- ಬಡಾನಿಡಿಯೂರು ನಡುವೆ ಕೂಡ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.