Home Mangalorean News Kannada News ಸಚಿವ ರಮಾನಾಥ ರೈ ವಿರುದ್ದ ವಿಎಚ್ ಪಿ ಬಜರಂಗದಳ ಪ್ರತಿಭಟನೆ; ಬಂಧನ

ಸಚಿವ ರಮಾನಾಥ ರೈ ವಿರುದ್ದ ವಿಎಚ್ ಪಿ ಬಜರಂಗದಳ ಪ್ರತಿಭಟನೆ; ಬಂಧನ

Spread the love

ಸಚಿವ ರಮಾನಾಥ ರೈ ವಿರುದ್ದ ವಿಎಚ್ ಪಿ ಬಜರಂಗದಳ ಪ್ರತಿಭಟನೆ; ಬಂಧನ

ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸುವಂತೆ ದಕ ಜಿಲ್ಲಾ ಎಸ್ಪಿಯವರಿಗೆ ನಿರ್ದೇಶನ ನೀಡಿದ್ದರೆನ್ನಲಾದ ವಿಚಾರ ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಕಾರ್ಯಕರ್ತರು ಮಂಗಳೂರಿನ ಪಿವಿಎಸ್ ವ್ರತ್ತದಲ್ಲಿ ಸೋಮವಾರ ರಸ್ತೆ ತಡೆ ನಡೆಸಿದರು.

ನಗರದ ಪಿವಿಎಸ್ ವೃತ್ತದ ಬಳಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಸಚಿವರ ವಿರುದ್ದ ಘೋಷಣೆಗಳನ್ನು ಕೂಗಿದರು. ಈ ವೇಳೆ ಪ್ರತಿಭಟನಾಕಾರರನ್ನು ಪೋಲಿಸರು ಬಂಧಿಸಿದರು.

ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮೊಕದ್ದಮೆ‌ ದಾಖಲಿಸಿ ಜೈಲಿಗೆ ಕಳುಹಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಜಿಲ್ಲೆಯ ಎಸ್‌ಪಿ ಭೂಷಣ್ ಜಿ. ಬೊರಸೆ ಅವರಿಗೆ ತಾಕೀತು ಮಾಡುತ್ತಿರುವ ವಿಡಿಯೊ ದೃಶ್ಯಾವಳಿ ಭಾನುವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.


Spread the love

Exit mobile version