ಕರ್ನಾಟಕ ಸದನ ಕುತೂಹಲ – ಕ್ಷಣ ಕ್ಷಣ ಮಾಹಿತಿ
03:07 PM: ತಾಜ್ ವೆಸ್ಟೆಂಡ್ ಹೋಟೆಲ್ನಿಂದ ಹೊರಟ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ
02:59 PM: ಸ್ವಲ್ಪ ಹೊತ್ತಿನಲ್ಲೇ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಸಹ ವಿಧಾನಸೌಧಕ್ಕೆ ಆಗಮಿಸುವ ಸಾಧ್ಯತೆ
02:51 PM: ವಿಧಾನಸೌಧಕ್ಕೆ ಆಗಮಿಸುತ್ತಿದ್ದಂತೆ ಪ್ರತಾಪ್ ಗೌಡಗೆ ವಿಪ್ ನೀಡಿದ ಡಿ.ಕೆ. ಶಿವಕುಮಾರ್
02:40 PM: ಭದ್ರತೆಯಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಪ್ರತಾಪ್ ಗೌಡ
02:40 PM: ಪ್ರತಾಪ್ ಗೌಡ ಕಾಂಗ್ರೆಸ್ ಪರ ಮತ ಚಲಾಯಿಸುತ್ತಾರೆ: ಡಿ.ಕೆ. ಶಿವಕುಮಾರ್ ಹೇಳಿಕೆ
Pratap Gowda Patil has come. He will take oath as an MLA then he will vote for the Congress. He will not betray Congress party: DK Shivakumar, Congress #KarnatakaFloorTest pic.twitter.com/a8LbKCYoyc
— ANI (@ANI) May 19, 2018
02:39 PM: ವಿಧಾನಸಭೆಯಲ್ಲಿ ಭಾವನಾತ್ಮಕವಾಗಿ ಭಾಷಣ ಮಾಡಿದ ನಂತರ ಯಡಿಯೂರಪ್ಪ ಅವರು ಎಲ್ಲ ಶಾಸಕರೊಡನೆ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ
02:33 PM: ಗೋಲ್ಡ್ಫಿಂಚ್ ಹೋಟೆಲ್ನಿಂದ ಹೊರಬಂದ ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ ಪಾಟೀಲ್
02:22 PM: ಗೋಲ್ಡ್ಫಿಂಚ್ ಹೋಟೆಲ್ನಿಂದ ತೆರಳಿದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್
02:20 PM: ಇಬ್ಬರು ಕಾಂಗ್ರೆಸ್ ಶಾಸಕರು ತಂಗಿದ್ದಾರೆ ಎನ್ನಲಾಗಿರುವ ಹೋಟೆಲ್ ಹೊರಗೆ ಭದ್ರತೆ ಹೆಚ್ಚಿಸಲಾಗಿದೆ
02:07 PM: ಕೊನೆಗೂ ವಿಧಾನಸೌಧ ಪ್ರವೇಶಿಸಿದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಸಿದ್ದರಾಮಯ್ಯ ಜತೆ ಚರ್ಚೆ
01:59 PM: ಯಡಿಯೂರಪ್ಪ ರಾಜೀನಾಮೆ ಸಾಧ್ಯತೆ: ಬಿಎಸ್ವೈ ತವರು ಜಿಲ್ಲೆ ಶಿವಮೊಗ್ಗದಲ್ಲಿ ಆತಂಕದಲ್ಲಿ ಬಿಜೆಪಿ ಕಾರ್ಯಕರ್ತರು
01:56 PM: ರಾಜೀನಾಮೆಗೂ ಮುನ್ನ ಸುದೀರ್ಘ ಭಾಷಣ ಮಾಡಲಿರುವ ಯಡಿಯೂರಪ್ಪ: ಮೂಲಗಳಿಂದ ಮಾಹಿತಿ
01:56 PM: ವಿಶ್ವಾಸಮತದಲ್ಲಿ ಗೆಲುವು ಅನುಮಾನ: ಬಿಎಸ್ವೈ ರಾಜೀನಾಮೆ ಸಾಧ್ಯತೆ
01:55 PM: ಆನಂದ್ ಸಿಂಗ್, ಪ್ರತಾಪ್ ಗೌಡಗೆ ವಿಪ್ ನೀಡಲು ಹೋಟೆಲ್ಗೆ ತೆರಳಿರುವ ಡಿ.ಕೆ. ಶಿವಕುಮಾರ್
01:50 PM: ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಅವರನ್ನು ಹೇಗೆ ಬಿಟ್ಟಿದ್ದೀರಿ: ಮಾರ್ಷಲ್ಗಳಿಗೆ ಉಗ್ರಪ್ಪ ಪ್ರಶ್ನೆ
01:46 PM: ಮಾರ್ಷಲ್ಗಳ ಜತೆ ವಿಧಾನಪರಿಷತ್ನ ಕಾಂಗ್ರೆಸ್ ಸದಸ್ಯ ಉಗ್ರಪ್ಪ ಮಾತಿನ ಚಕಮಕಿ
01:45 PM: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ವಿಧಾನಸೌಧ ಪ್ರವೇಶಕ್ಕೆ ತಡೆ
01:28 PM: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಕಾಂಗ್ರೆಸ್ ಶಾಸಕರ ಜತೆ ಕುಶಲೋಪರಿ, ಮಾತುಕತೆ
01:25 PM: ವಿಧಾನಸಭೆ ಕಲಾಪ 3.30ಕ್ಕೆ ಮುಂದೂಡಿಕೆ
01:18 PM: ವಿಪ್ ನೀಡಲು ಬಂದಿದ್ದೇವೆ, ಭೇಟಿಗೆ ಅವಕಾಶ ಕೊಡಿ ಎಂದ ರೇವಣ್ಣ
01:18 PM: ಎಚ್.ಎಂ. ರೇವಣ್ಣ, ಡಿ.ಕೆ ಸುರೇಶ್ ಭೇಟಿಗೆ ಆನಂದ್ ಸಿಂಗ್, ಪ್ರತಾಪ್ ಗೌಡ ನಿರಾಕರಣೆ
01:17 PM: ವಿಶ್ವಾಸಮತದ ವಿರುದ್ಧ ಮತ ಹಾಕಲು ಕಾಂಗ್ರೆಸ್, ಜೆಡಿಎಸ್ನಿಂದ ಶಾಸಕರಿಗೆ ವಿಪ್ ಜಾರಿ
01:16 PM: ಡಿ.ಕೆ. ಸುರೇಶ್, ಎಚ್.ಎಂ. ರೇವಣ್ಣ ಜತೆ ಬರಲು ಆನಂದ್ ಸಿಂಗ್, ಪ್ರತಾಪ್ ಗೌಡ ನಿರಾಕರಣೆ
12:47 PM: ಗೋಲ್ಡ್ ಪಿಂಚ್ ಹೋಟೆಲ್ಗೆ ಡಿಜಿ, ಐಜಿಪಿ ಭೇಟಿ
12:46 PM: ಶಾಸಕರು ಹೋಟೆಲ್ನಲ್ಲಿರುವ ಮಾಹಿತಿ: ಹೋಟೆಲ್ಗೆ ಭೇಟಿ ನೀಡಿದ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ
12:40 PM: ಬಿಜೆಪಿಯ ಸೋಮಶೇಖರ್ ರೆಡ್ಡಿ ಅವರೂ ಬಂದಿಲ್ಲ: ಡಿ.ಕೆ. ಶಿವಕುಮಾರ್
12:38 PM: ಗೈರಾಗಿರುವ ಶಾಸಕರು ಶೀಘ್ರದಲ್ಲೇ ವಿಧಾನಸೌಧಕ್ಕೆ ಬರಲಿದ್ದಾರೆ: ಡಿ.ಕೆ. ಶಿವಕುಮಾರ್ ಹೇಳಿಕೆ
12:36 PM: ಗೈರಾಗಿರುವ ಶಾಸಕರನ್ನು ಕರೆತರಲು ತೆರಳಿದ ಕಾಂಗ್ರೆಸ್ ನಾಯಕ ಎಚ್.ಎಂ. ರೇವಣ್ಣ
12:34 PM: ನಮ್ಮ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸುತ್ತಿದೆ. ಗೈರಾಗಿರುವ ಇಬ್ಬರು ಶಾಸಕರೂ ಕಲಾಪಕ್ಕೆ ಬಂದ ಕೂಡಲೇ ಕಾಂಗ್ರೆಸ್ ಬೆಂಬಲಿಸಲಿದ್ದಾರೆ: ವೀರಪ್ಪ ಮೊಯಿಲಿ
12:28 PM: ಸಂಜೆ ನಾಲ್ಕು ಗಂಟೆಯೊಳಗೆ ಶಾಸಕರನ್ನು ಕರೆತರಲು ಅವಕಾಶ ನೀಡಿದ ಹಂಗಾಮಿ ಸ್ಪೀಕರ್ ಬೋಪಯ್ಯ
12:27 PM: ಗೈರಾಗಿರುವ ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್, ಪ್ರತಾಪ್ ಗೌಡ ಅವರನ್ನು ಕರೆತರಲು ತೆರಳಿದ ಕಾಂಗ್ರೆಸ್ ನಾಯಕರು
12:20 PM: ದೂರವಾಣಿ ಕರೆಯ ಆಡಿಯೊ ಕ್ಲಿಪ್ ಬಿಡುಗಡೆ
12:18 PM: ವಿಧಾನಪರಿಷತ್ನ ಕಾಂಗ್ರೆಸ್ ಸದಸ್ಯ ಉಗ್ರಪ್ಪ ಆರೋಪ
JD(S) MLAs HD Kumaraswamy & HD Revanna inside Vidhana Soudha in #Bengaluru. pic.twitter.com/WBvD0PechF
— ANI (@ANI) May 19, 2018
12:17 PM: ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಪತ್ನಿಗೆ ದೂರವಾಣಿ ಕರೆ ಮಾಡಿ ₹15 ಕೋಟಿ ಆಮಿಷ
12:15 PM: ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ ಆಮಿಷವೊಡ್ಡಿದ ಆರೋಪ
12:04 PM: ಕಲಬುರ್ಗಿ: ರಾಜ್ಯಪಾಲರ ಸಂವಿಧಾನ ವಿರೋಧಿ ನಡೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘರ್ಷ ಸಮಿತಿ ಮಹಾ ಒಕ್ಕೂಟದ ಪತ್ರಿಭಟನೆ.
12:03 PM: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿ.ಶ್ರೀರಾಮುಲು
12:02 PM: 3 ದಿನದ ಮುಖ್ಯಮಂತ್ರಿ ಶ್ರೀಯುತ ಯಡಿಯೂರಪ್ಪನವರ ಅಧಿಕಾರಾವಧಿ ಇಂದಿಗೆ ಕೊನೆ: ಸಿದ್ದರಾಮಯ್ಯ ಟ್ವೀಟ್
3 ದಿನದ ಮುಖ್ಯಮಂತ್ರಿ ಶ್ರೀಯುತ ಯಡಿಯೂರಪ್ಪನವರ ಅಧಿಕಾರಾವಧಿ ಇಂದಿಗೆ ಕೊನೆಗೊಳ್ಳಲಿದೆ. ಬಹುಮತವಿಲ್ಲದೆ ಸಂವಿಧಾನ ಬಾಹಿರವಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ನಾಡಿನ ಮತದಾರರ ಆಶಯಗಳಿಗೆ ವಿರುದ್ಧ.
ಇಂದು ಸಂಜೆ ಜನಾಭಿಪ್ರಾಯಕ್ಕೆ ಜಯ ದೊರೆಯಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ.— Siddaramaiah (@siddaramaiah) May 19, 2018
11:52 AM: ಕಲಾಪಕ್ಕೆ ಬಾರದ ಶಾಸಕರ ನಡೆ ಇನ್ನೂ ನಿಗೂಢ
11:51 AM: ಗೈರಾಗಿರುವ ಶಾಸಕರು ಮಧ್ಯಾಹ್ನದ ವೇಳೆಗೆ ಕಲಾಪಕ್ಕೆ ಹಾಜರಾಗುವ ಸಾಧ್ಯತೆ
11:43 AM: ಬಿಜೆಪಿಯ ಸುರೇಶ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಬಸವನಗೌಡ ಪಾಟೀಲ್, ಜೆಡಿಎಸ್ನ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ನ ರಾಮಲಿಂಗಾ ರೆಡ್ಡಿ ಒಳಗೊಂಡ ಸ್ಪೀಕರ್ ಪ್ಯಾನೆಲ್
11:41 AM: ಐವರು ಸದಸ್ಯರ ಸ್ಪೀಕರ್ ಪ್ಯಾನೆಲ್ ರಚಿಸಿದ ಹಂಗಾಮಿ ಸ್ಪೀಕರ್ ಬೋಪಯ್ಯ
11:40 AM: ಬಿಜೆಪಿಯ ಸುರೇಶ್ ಕುಮಾರ್, ಜೆಡಿಎಸ್ನ ಎಚ್.ಡಿ. ಕುಮಾರಸ್ವಾಮಿ ಅವರಿಂದ ಪ್ರಮಾಣವಚನ ಸ್ವೀಕಾರ
11:39 AM: ಸದನಕ್ಕೆ ಆಗಮಿಸಿದ ಎಚ್.ಡಿ. ರೇವಣ್ಣ
11:33 AM: ವಿಧಾನಸೌಧ ತಲುಪಿದರೂ ಇನ್ನೂ ಕಲಾಪಕ್ಕೆ ಬಾರದ ಎಚ್.ಡಿ. ರೇವಣ್ಣ
11:29 AM: ಹಂಗಾಮಿ ಸ್ಪೀಕರ್ ಬೋಪಯ್ಯ ಅವರಿಂದ ಶಾಸಕರಿಗೆ ಪ್ರತಿಜ್ಞಾವಿಧಿ ಬೋಧನೆ
11:27 AM: ಸದ್ಯ ಸದನದಲ್ಲಿರುವ ಶಾಸಕರ ಸಂಖ್ಯೆ. ಬಿಜೆಪಿ 104, ಕಾಂಗ್ರೆಸ್ 76, ಜೆಡಿಎಸ್ 37, ಇತರರು 2
11:24 AM: ಕಾಂಗ್ರೆಸ್ನ 78 ಶಾಸಕರ ಪೈಕಿ 76 ಶಾಸಕರು ಹಾಜರು
11:23 AM: ಬಿಜೆಪಿ, ಜೆಡಿಎಸ್ನ ಎಲ್ಲ ಶಾಸಕರು ಹಾಜರು
11:19 AM: ವಿಜಯನಗರ ಶಾಸಕ ಆನಂದ್ ಸಿಂಗ್, ಮಸ್ಕಿ ಶಾಸಕ ಪ್ರತಾಪ್ ಗೌಡ ಗೈರು
11:18 AM: ಕಲಾಪಕ್ಕೆ ಇಬ್ಬರು ಶಾಸಕರು ಮಾತ್ರ ಗೈರು: ಉಳಿದಂತೆ ಎಲ್ಲ ಶಾಸಕರು ಹಾಜರು
11:17 AM: ಸದನದ ಹಿರಿಯ ಸದಸ್ಯರಿಂದ ಪ್ರತಿಜ್ಞಾವಿಧಿ ಸ್ವೀಕಾರ
11:15 AM: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪ್ರಮಾಣವಚನ ಸ್ವೀಕಾರ
CM BS Yeddyurappa & Siddaramaiah take oath as MLAs at Vidhana Soudha. #Karnataka pic.twitter.com/WpqdEuT5OW
— ANI (@ANI) May 19, 2018
11:14 AM: ವಿಧಾನಸಭೆ ಕಾರ್ಯದರ್ಶಿ ಕಲಾಪದ ವಿಡಿಯೊ ಚಿತ್ರೀಕರಣ ಮಾಡಬೇಕು: ಸುಪ್ರೀಂ ಕೋರ್ಟ್
11:12 AM: ಬೋಪಯ್ಯ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ತ್ರಿಸದಸ್ಯ ನ್ಯಾಯಪೀಠ
11:11 AM: ವಿಶ್ವಾಸಮತ ಯಾಚನೆಯ ನೇರ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ
11:10 AM: ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ಮುಂದುವರಿಯಲಿದ್ದಾರೆ: ಸುಪ್ರೀಂ ಕೋರ್ಟ್
11:05 AM: ವಿಧಾನಸಭೆ ಕಲಾಪ ಆರಂಭ
11:01 AM: ಬೋಪಯ್ಯ ಅವರ ವಾದ ಆಲಿಸದೇ ತೀರ್ಪು ನೀಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
10:57 AM: ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಂಡ ಬಿ.ಎಸ್. ಯಡಿಯೂರಪ್ಪ
10:55 AM: ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿರುವ ಕಲಾಪ: ಶಾಸಕರ ಪ್ರಮಾಣವಚನಕ್ಕೆ ಕ್ಷಣಗಣನೆ
10:54 AM: ಬಿಜೆಪಿ ಶಾಸಕರ ಜತೆ ಬಸ್ನಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
10:53 AM: ವಿಧಾನಸೌಧ ತಲುಪಿದ ಬಿಜೆಪಿ ಶಾಸಕರು
10:51 AM: ಶಾಸಕರ ಪ್ರಮಾಣವಚನಕ್ಕೆ ಕ್ಷಣಗಣನೆ
10:51 AM: ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತುಕೊಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
10:47 AM: ಮೆಟ್ಟಿಲಿಗೆ ನಮಿಸಿ ವಿಧಾನಸೌಧದ ಒಳ ಪ್ರವೇಶಿದಿದ ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ ಹಾಗೂ ಇತರ ಕಾಂಗ್ರೆಸ್ ನಾಯಕರು
10:44 AM: ಹಂಗಾಮಿ ಸ್ಪೀಕರ್ ಬೋಪಯ್ಯ ಅವರು ವಿಶ್ವಾಸಮತ ಯಾಚನೆ ಮೇಲ್ವಿಚಾರಣೆ ನಡೆಸುವುದಕ್ಕೆ ಕಾಂಗ್ರೆಸ್ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ವಕೀಲ ಕಪಿಲ್ ಸಿಬಲ್ ಆಕ್ಷೇಪ
10:42 AM: ವಿಧಾನಸೌಧದ ಒಳ ಪ್ರವೇಶಿಸಿದ ಕಾಂಗ್ರೆಸ್ ಶಾಸಕರು
10:42 AM: ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ನೇಮಕಕ್ಕೆ ಕಾಂಗ್ರೆಸ್ ಆಕ್ಷೇಪ: ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಆರಂಭ
10:39 AM: ವಿಧಾನಸೌಧದ ಆವರಣ ತಲುಪಿದ ಕಾಂಗ್ರೆಸ್ ಶಾಸಕರು
10:29 AM: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕುತಂತ್ರ ಇಲ್ಲಿ ನಡೆಯದು: ರಾಮಲಿಂಗಾ ರೆಡ್ಡಿ
Physically he is not with us but he is in contact with our leaders. He has to come to Vidhana Soudha today. He will definitely vote for us. He is with us. He will come back: Ramalinga Reddy on Congress MLA Anand Singh pic.twitter.com/8Et15LVq0i
— ANI (@ANI) May 19, 2018
10:27 AM: ವಿಶ್ವಾಸಮತ ಯಾಚನೆಯಲ್ಲಿ ನಾವು ಗೆಲ್ಲುವುದು ಖಚಿತ: ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿಕೆ
10:25 AM: ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ವಿಧಾನಸೌಧದ ಆವರಣದಲ್ಲಿ ಬಿಗಿ ಭದ್ರತೆ
10:22 AM: ಕಾಂಗ್ರೆಸ್ನವರೂ ಒಗ್ಗಟ್ಟಾಗಿದ್ದಾರೆ: ಎಚ್ಡಿಕೆ
10:21 AM: ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ, ಎಲ್ಲರೂ ಒಟ್ಟಾಗಿದ್ದೇವೆ: ಕುಮಾರಸ್ವಾಮಿ
10:20 AM: ಜೆಡಿಎಸ್ ಶಾಸಕರ ಜತೆ ಸಭೆ ನಡೆಸಲು ಹೊರಟ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ
10:18 AM: ಹೋಟೆಲ್ನಿಂದ ವಿಧಾನಸೌಧಕ್ಕೆ ಹೊರಟ ಕಾಂಗ್ರೆಸ್ ಶಾಸಕರು
10:17 AM: ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ವಿಧಾನಸೌಧಕ್ಕೆ ಆಗಮನ
10:16 AM: ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ವಿಧಾನಸೌಧಕ್ಕೆ ಆಗಮನ
10:13 AM: ವಿಧಾನಸೌಧಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
10:13 AM: ಬಿಜೆಪಿ ಶಾಸಕರಿಂದಲೂ ವಿಧಾನಸೌಧಕ್ಕೆ ತೆರಳಲು ಸಿದ್ಧತೆ
10:12 AM: ಕೆಲವೇ ಕ್ಷಣಗಳಲ್ಲಿ ಹೋಟೆಲ್ನಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಲಿರುವ ಕಾಂಗ್ರೆಸ್, ಜೆಡಿಎಸ್ ಶಾಸಕರು
10:08 AM: ವಿಧಾನಸೌಧಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕರು
10:08 AM: ಇಂದು ಸಂಜೆ 4ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ವಿಶ್ವಾಸಮತ ಯಾಚನೆ
ಕೃಪೆ: ಪ್ರಜಾವಾಣಿ