Home Mangalorean News Kannada News ಸದಭಿರುಚಿ ಚಿತ್ರಗಳಿಂದ ಸಮಾಜಕ್ಕೆ ಉತ್ತಮ ಸಂದೇಶ – ಅಪರ ಜಿಲ್ಲಾಧಿಕಾರಿ

ಸದಭಿರುಚಿ ಚಿತ್ರಗಳಿಂದ ಸಮಾಜಕ್ಕೆ ಉತ್ತಮ ಸಂದೇಶ – ಅಪರ ಜಿಲ್ಲಾಧಿಕಾರಿ

Spread the love

ಸದಭಿರುಚಿ ಚಿತ್ರಗಳಿಂದ ಸಮಾಜಕ್ಕೆ ಉತ್ತಮ ಸಂದೇಶ – ಅಪರ ಜಿಲ್ಲಾಧಿಕಾರಿ

ಉಡುಪಿ: ಸದಭಿರುಚಿ ಚಿತ್ರಗಳಿಂದ ಜನರಿಗೆ ಮನರಂಜನೆಯ ಜೊತೆಗೆ ಉತ್ತಮ ಸಂದೇಶ ರವಾನಿಸಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಹೇಳಿದ್ದಾರೆ.

ಅವರು ಶುಕ್ರವಾರ ಡಯಾನ ಚಿತ್ರ ಮಂದಿರದಲ್ಲಿ, ವಾರ್ತಾ ಮತ್ತು ಸಾರ್ವಾಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ಚಲನ ಚಿತ್ರ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.

ಸದಭಿರುಚಿ, ಸಮಾಜಮುಖಿ ಚಿತ್ರಗಳನ್ನು ಸಮಾಜದ ಅಭಿವೃದ್ದಿಯ ದೃಷ್ಟಿಯಿಂದ ಸಾರ್ವಾಜನಿಕರು ವೀಕ್ಷಣೆ ಮಾಡಿ ಪ್ರೋತ್ಸಾಹಿಸಬೇಕು.ಚಲನಚಿತ್ರಗಳಿಂದ ಮನೋರಂಜನೆ, ಕಲಿಕೆ ಸಾಧ್ಯವಿದೆ; ಆದ್ದರಿಂದ ಉತ್ತಮ ಚಿತ್ರಗಳ ನಿರ್ಮಾಣ ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕು. ಕನ್ನಡ ಚಲನಚಿತ್ರಗಳಿಗೆ ಸರ್ಕಾರ ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.

ಕಾರ್ಯಕ್ರಮದಲ್ಲಿ ಡಯಾನ ಥಿಯೇಟರ್ ಮಾಲೀಕರಾದ ಸುಲಕ್ಷಣ ಪೈ, ಅಲಂಕಾರ್ ಥಿಯೇಟರ್ ವ್ಯವಸ್ಥಪಕ ಜಗದೀಶ್ ಕುಡ್ವಾ, ಡಯಾನ ಥಿಯೇಟರ್ ವ್ಯವಸ್ಥಾಪಕ ಸುಗಂಧರ್ ಉಪಸ್ಥಿತರಿದ್ದರು.

ಜಿ ಲ್ಲಾ ವಾರ್ತಾಧಿಕಾರಿ ರೋಹಿಣೆ ಸ್ವಾಗತಿಸಿದರು, ಪ್ರಕಾಶ್ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಶುಕ್ರವಾರದಿಂದ ಆರಂಭಗೊಂಡಿರುವ ಈ ಚಲನಚಿತ್ರೋತ್ಸವ ಸಪ್ತಾಹದಲ್ಲಿ ಪ್ರತಿ ದಿನ ಬೆಳಗ್ಗೆ 10 ಗಂಟೆಗೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಚಲನ ಚಿತ್ರಗಳ ಪ್ರದರ್ಶನ ನಡೆಯಲಿದ್ದು ಸಾರ್ವಾಜನಿಕರಿಗೆ ಉಚಿತ ಪ್ರವೇಶವಿದೆ.


Spread the love

Exit mobile version