ಸನಾತನ ಸಂಸ್ಥೆ ನಿಷೇಧ; ದೇಶಕ್ಕೆ ಗಂಡಾಂತರ ತರುವ ‘ಪಾಪ್ಯುಲರ್ ಫಂಟ್ ಆಫ್ ಇಂಡಿಯಾ’ದ ಮೇಲಿಲ್ಲ ನಿಷೇಧ ?
ಭಾರತದಲ್ಲಿ ನ್ಯಾಯ ಸಮಾನವಾಗಿ ಸಿಗುತ್ತದೆ ಎಂದು ಹೇಳಲಾಗುತ್ತದೆ; ಆದರೆ ಪ್ರತ್ಯಕ್ಷದಲ್ಲಿ ಈಗಿನ ಜಾತ್ಯತೀತ ಸರಕಾರ ಪೊಲೀಸ್‌ರು ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು ವಿರೋಧಿ ವಿಚಾರಸರಣಿಯ ಹಿಂದುತ್ವವಾದಿಗಳನ್ನು ಮುಗಿಸುವ ಷಡ್ಯಂತ್ರದ ಆ ಮೂಲಕ ನಡೆಯುತ್ತಿದೆ. ಗೌರಿ ಲಂಕೇಶ ಹತ್ಯೆಯ ಪ್ರಕರಣದ ತನಿಖೆಯನ್ನು ಮಾಡಲು ಕರ್ನಾಟಕ ಸರಕಾರ ಕೂಡಲೇ ‘ಎಸ್‌ಐಟಿ’ಯನ್ನು ಸ್ಥಾಪಿಸಿದರು. ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಹಿಂದೂ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸುವಾಗ ನ್ಯಾಯವಾದಿಗಳನ್ನು ಆರಿಸುವ ಅಧಿಕಾರವನ್ನು ನೀಡಲಿಲ್ಲ. ಆರೋಪಿಗಳ ಮೇಲೆ ಅತ್ಯಂತ ನಿರ್ದಯವಾಗಿ ಹಲ್ಲೆಯನ್ನು ಮಾಡಿ ಅವರಿಂದ ಹೇಳಿಕೆಯನ್ನು ಪಡೆದುಕೊಂಡರು. ಅದೇ ರೀತಿ ಈ ಹಿಂದೂ ಆರೋಪಿಗಳ ಯಾವುದೇ ಅಪರಾಧದ ಹಿನ್ನಲೆ ಇಲ್ಲದಿದ್ದರೂ ತಕ್ಷಣವೇ ಅವರ ಮೇಲೆ ಸಂಘಟಿತ ಅಪರಾಧವನ್ನು ಎಸಗುವ ಕಠೋರವಾದ ‘ಕೊಕಾ’ ಕಲಂಅನ್ನು ಹೇರಲಾಯಿತು; ಆದರೆ ಪಾಪ್ಯುಲರ ಫ್ರಂಟ್ ಆಫ್ ಇಂಡಿಯಾ ದ ಮೈಸೂರಿನಲ್ಲಿಯ ಅಬಿದ ಪಾಶಾ ಮತ್ತು ಅವರ ಗುಂಪಿನವರು ರಾ.ಸ್ವ.ಸಂಘ-ಭಾಜಪ ಇತ್ಯಾದಿ ಸಂಘಟನೆಯ ೮ ಹಿಂದುತ್ವವಾದಿ ಕಾರ್ಯಕರ್ತರನ್ನು ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾದರೂ ಇಲ್ಲಿಯವರೆಗೆ ಅವರ ಮೇಲೆ ‘ಕೋಕಾ’ವನ್ನು ಏಕೆ ಹೇರಲಿಲ್ಲ ?, ಕರ್ನಾಟಕ ರಾಜ್ಯದಲ್ಲಿ ೨೩ ಕ್ಕೂ ಹೆಚ್ಚು ಹಿಂದುತ್ವವಾದಿ ಕಾರ್ಯಕರ್ತರನ್ನು ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿದ್ದರೂ ಅದರ ಬಗ್ಗೆ ಯಾರೂ ಏಕೆ ಮಾತನಾಡುತ್ತಿಲ್ಲ ?, ಅದೇ ರೀತಿ ಈ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿರುವ ಮತಾಂಧರನ್ನು ಸಹಾಯ ಮಾಡಿದ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧಿಸುವ ಬಗ್ಗೆ ಏಕೆ ಆಗ್ರಹಿಸುತ್ತಿಲ್ಲ ?’, ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾದ ನ್ಯಾಯವಾದಿ ವೀರೆಂದ್ರ ಇಚಲಕರಂಜಿಕರ ಇವರು ಈ ಸಮಯದಲ್ಲಿ ಪ್ರಶ್ನಿಸಿದರು.
ಅವರು ಬೆಂಗಳೂರಿನ ಸಾಮ್ರಟ್ ಹೋಟೆಲ್ ರೆಸ್ಟೋರೆಂಟ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತರ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಪತ್ರಕರ್ತರ ಪರಿಷತ್ತಿನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವಕ್ತಾರರಾದ ಶ್ರೀ. ಮೋಹನ ಗೌಡ, ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಉಪಾಧ್ಯಕ್ಷರಾದ ನ್ಯಾಯವಾದಿ ಅಮೃತೇಶ ಇವರು ಉಪಸ್ಥಿತರಿದ್ದರು.
ನ್ಯಾಯವಾದಿ ಇಚಲಕರಂಜಿಕರ ಇವರು ಮಾತನಾಡುತ್ತಾ, ‘ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರಗಳು ಹಿಂದೂಗಳೊಂದಿಗೆ ತಾರತಮ್ಯದಿಂದ ವರ್ತಿಸುತ್ತಾ ‘ಹಿಂದೂಗಳಿಗೆ ಕಾಯ್ದೆ ಮತ್ತು ಮುಸಲ್ಮಾನರಿಗೆ ಫಾಯಿದೆ’ ಈ ತಂತ್ರದ ಉಪಯೋಗ ಮಾಡುತ್ತಿವೆ. ಪೊಲೀಸರು ಎಲ್ಲ ರೀತಿಯ ಅಪರಾಧಗಳ ತನಿಖೆಯನ್ನು ಮಾಡುವಾಗ ಸಮಾನತೆ ಮತ್ತು ನಿಷ್ಪಕ್ಷಪಾತವನ್ನು ತೋರಬೇಕು, ಆದರೆ ದೌರ್ಭಾಗ್ಯದಿಂದ ಈ ಪ್ರಕರಣದಲ್ಲಿ ಕಂಡುಬರುತ್ತಿಲ್ಲ. ಮೈಸೂರು ಈ ಒಂದೇ ಜಿಲ್ಲೆಯಲ್ಲಿ ಕೋಮುದ್ವೇಷದಿಂದ ಮತಾಂಧರು ಅನೇಕ ಹತ್ಯೆಗಳನ್ನು ಮಾಡಿದ್ದಾರೆ. ಇದನ್ನು ಯಾರೂ ಕೇವಲ ವೈಚಾರಿಕ ಭಿನ್ನಾಭಿಪ್ರಾಯ ಎಂದು ಹೇಳಲು ಸಾಧ್ಯವಿಲ್ಲ. ತ್ಯಾಗರಾಜ ಪಿಳ್ಯೆ ಇವರನ್ನು ಕೇವಲ ‘ಮುಸಲ್ಮಾನ ಯುವತಿಯರೊಂದಿಗೆ ನಿಕಟವಾಗಿ ಇರುತ್ತಿದ್ದನು’, ಎಂಬ ಕಾರಣಕ್ಕೆ ಕೊಲ್ಲಲಾಯಿತು. ಭಾಜಪದ ನಾಯಕರಾದ ಶ್ರೀ. ಆನಂದಾ ಪೈ ಇವರ ಮೇಲೆ ಹಲ್ಲೆಯಾಯಿತು, ಆಗ ಅವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು; ಆದರೆ ಅವರ ಸಹಾಯಕ ಶ್ರೀ. ರಮೇಶ ಇವರ ಹತ್ಯೆಯನ್ನು ಮಾಡಲಾಯಿತು. ಭಾಜಪದ ಯುವಾ ಮೋರ್ಚಾದ ನಾಯಕರಾದ ವಿ. ಗಿರಿಧರ ಇವರ ಮೇಲೆ ಹಲ್ಲೆಯಾಯಿತು, ಅವರು ಸ್ವಲ್ಪದರಲ್ಲೇ ಮೃತ್ಯುಪಾಶದಿಂದ ಪಾರಾದರು. ರಾ.ಸ್ವ.ಸಂಘದ ಶ್ರೀ.ಹರಿಶ ಮತ್ತು ಶ್ರೀ. ಸತೀಶ ಈ ಸಹೋದರ ಮೇಲೆ ಆದಂತಹ ಮಾರಣಾಂತಿಕ ಹಲ್ಲೆಯಲ್ಲಿ ಶ್ರೀ. ಹರೀಶ ಇವರು ಮೃತಪಟ್ಟರು. ಈ ಪ್ರಕರಣಗಳಲ್ಲಿ ಅಬಿದ ಪಾಶಾ ಮತ್ತು ಅವನ ಗುಂಪು ಸಹಭಾಗಿಯಾಗಿದ್ದರೂ ಪೊಲೀಸರು ತನಿಖೆಯನ್ನು ಮಾಡದೇ ಕೇಸನ್ನು ಮುಚ್ಚಿದರು. ತದನಂತರ ಅವರೇ ವಿಘ್ಞೇಶ ಮತ್ತು ಸುಧೀಂದ್ರ ಈ ಸಹೋದರರನ್ನು ಅಪಹರಿಸಿ ಅವರ ಹತ್ಯೆಯನ್ನೂ ಮಾಡಿದರು. ಮಾರ್ಚ್ ೨೦೧೬ ರಲ್ಲಿ ಭಾಜಪದ ಕೆ.ರಾಜು ಇವರ ಹತ್ಯೆಯ ಪ್ರಕರಣದಲ್ಲಿ ಅಬಿದ ಪಾಶಾ ಮತ್ತು ಅವರ ಗುಂಪಿನವರನ್ನು ಬಂಧಿಸಿದ ನಂತರವೇ ಈ ಹಿಂದಿನ ಎಲ್ಲ ಹತ್ಯೆಗಳ ಹಿಂದೆ ಅಬಿದ ಪಾಶಾ ಮತ್ತು ಅವನ ಗುಂಪು ಕಾರ್ಯನಿರತ ಇತ್ತು ಎಂದು ಬಹಿರಂಗವಾಯಿತು.
ಈ ಎಲ್ಲ ಪ್ರಕರಣಗಳಲ್ಲಿ ಪೊಲೀಸರು ಉದ್ದೇಶಪೂರ್ವಕವಾಗಿ ಮಾಡಿದಂತಹ ತನಿಖೆಯ ನ್ಯೂನ್ಯತೆಯಿಂದಾಗಿ ಅಥವಾ ಸರಕಾರವು ಮಾಡಿದ ಸಹಾಯದಿಂದಾಗಿ ಅಬಿದ ಪಾಶಾ ಮತ್ತು ಆತನ ಗುಂಪಿನ ಎಲ್ಲಾ ಆರೋಪಿಗಳಿಗೆ ಒಂದೋ ಬಿಡುಗಡೆಯಾಗಿದೆ ಅಥವಾ ಅವರಿಗೆ ಜಾಮೀನಾದರೂ ಸಮ್ಮತಿಸಲಾಯಿತು. ಕೆಲವು ಪ್ರಕರಣಗಳಲ್ಲಿ ಈ ಆರೋಪಿಗಳ ಮೇಲೆ ಪೊಲೀಸರು ‘ಯುಎಐಎ’ದಂತಹ ಕಠಿಣ ಕಾನೂನನ್ನು ಹೇರಲಾಗಿತ್ತು. ಹೀಗಿರುವಾಗಲೂ ಪೊಲೀಸರು ಅವರ ಜಾಮೀನಿನನ್ನು ವಿರೋಧಿಸಲಿಲ್ಲ, ಕಾಯ್ದೆಯಲ್ಲಿನ ಏರ್ಪಾಡುಗಳನ್ನು ಪೊಲೀಸರು ಉಪಯೋಗಿಸಲಿಲ್ಲ ಮತ್ತು ಆಶ್ಚರ್ಯಕರವಾಗಿ ಆರೋಪಪತ್ರವನ್ನು ದಾಖಲಿಸುವಾಗ ‘ಯುಎಪಿಎ’ ಕಾಯ್ದೆಯ ಕಲಂಅನ್ನು ಕೈಬಿಡಲಾಯಿತು. ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯವು ಪೊಲೀಸರ ಮೇಲೆ ಚಾಟಿ ಬೀಸುತ್ತಾ ಗುಂಪಿನಲ್ಲಿಯ ಆರೋಪಿಗಳಿಗೆ ಜಾಮೀನನ್ನು ಮಂಜೂರು ಮಾಡಿತು.
ಈ ಎಲ್ಲಾ ಪ್ರಕರಣಗಳಲ್ಲಿ ಕಾಂಗ್ರೆಸ್ ರಾಜಕಾರಣಿಗಳ ದ್ವಿಮುಖನೀತಿ ಕಾಣಸಿಗುತ್ತದೆ. ೨೦೧೬ ರಲ್ಲಿ ಕಾಂಗ್ರೆಸ್ಸಿನ ಆಡಳಿತಾವಧಿಯಲ್ಲಿ ಅಬಿದ ಪಾಶಾನು ೨೫ ಜನರ ಸಹಾಯದಿಂದ ೮ ಹಿಂದೂಗಳ ಹತ್ಯೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದನು; ಆದರೆ ಮುಸಲ್ಮಾನರ ಮತಕ್ಕಾಗಿ ಕಾಂಗ್ರೆಸ್ ಸರಕಾರ ನಿಷ್ಕ್ರೀಯವಾಯಿತು ಹಾಗೂ ಪೊಲೀಸರು ಉದ್ದೇಶಪೂರ್ವಕವಾಗಿ ಮಾಡಿದ್ದ ಅಯೋಗ್ಯ ತನಿಖೆಯಿಂದ ಆರೋಪಿಗಳಿಗೆ ಲಾಭವಾಗುತ್ತಾ ಹೋಯಿತು. ಬೆಂಗಳೂರಿನಲ್ಲಿ ರಾ.ಸ್ವ.ಸಂಘದ ರುದ್ರೇಶ ಇವರ ಹತ್ಯೆಯ ಪ್ರಕರಣದಲ್ಲಿಯೂ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಕೈವಾಡ ಇರುವ ಬಗ್ಗೆ ‘ಎನ್‌ಐಎ’ ಹೇಳಿತ್ತು. ಆದರೂ ಕರ್ನಾಟಕದ ಪೊಲೀಸರಿಗೆ ಈ ಪ್ರಕರಣದಲ್ಲಿ ಪರಾರಿಯಾದ ಘೌಸ್ ಭಾಯಿ ಇವನನ್ನು ಇಲ್ಲಿಯವರೆಗೆ ಬಂಧಿಸಲು ಸಾಧ್ಯವಾಗಲಿಲ್ಲ ಅಥವಾ ‘ಪಾಪ್ಯುಲರ ಫ್ರಂಟ್ ಆಫ್ ಇಂಡಿಯಾ’ದ ಮೇಲೆ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ.
ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದುತ್ವವಾದಿ ಕಾರ್ಯಕರ್ತರ ಹತ್ಯೆಯಾದರೂ ಕರ್ನಾಟಕದಲ್ಲಿಯ ಜಾತ್ಯತೀತ ಸರಕಾರವು ‘ಎಸ್‌ಐಟಿ’ಯನ್ನು ನೇಮಿಸಲಿಲ್ಲ, ‘ಕೊಕಾ’ ಹೇರಲಿಲ್ಲ, ‘ಕಾನೂನುಬಾಹಿರ ಕ್ರಮ ತಡೆ’ (ಯುಎಪಿಎ) ಕಾಯ್ದೆಯನ್ನು ಹೇರಲಿಲ್ಲ, ಆರೋಪಿಗಳ ‘ನಾರ್ಕೊ’ ಅಥವಾ ಖಟ್ಲೆಯನ್ನು ವಿಶೇಷ ನ್ಯಾಯಾಲಯದಲ್ಲಿ ನಡೆಸಲು ಬೇಡಿಕೆಯನ್ನೂ ಇಡಲಿಲ್ಲ. ಇದೆಲ್ಲವೂ ಬೆಚ್ಚಿಬೀಳಿಸುವಂತಹದ್ದಾಗಿದೆ. ನಿಜವಾದ ಸಂಘಟಿತ ಅಪರಾಧಿಗಳನ್ನು ಶಿಕ್ಷೆ ಕೊಡುವ ಬದಲು ಅವರಿಗೆ ಮುಕ್ತವಾಗಲು ವ್ಯವಸ್ಥೆ ಮಾಡುವುದು, ಇದು ಕಾಂಗ್ರೆಸ್-ಜೆಡಿಎಸ್ ಸರಕಾರದ ದ್ವಿಮುಖ ನೀತಿಯಾಗಿದೆ. ಈಗ ಎಲ್ಲಿ ಹೋದರು ಅಸಹಿಷ್ಣುತೆಯ ಡಂಗುರವನ್ನು ಸಾರುವ ಪ್ರಕಾಶರಾಜ್, ದೊರೆಸ್ವಾಮಿ ಮತ್ತು ಇತರ ಪ್ರಗತಿಪರ ವಿಚಾರವಂತರು ? ಹಿಂದೂ ನಾಯಕರ ಹತ್ಯೆಯ ಬಗ್ಗೆ ಅಬಿದ ಪಾಶಾದ ಕುಕೃತ್ಯವನ್ನು ಒಪ್ಪಿಕೊಂಡ ನಂತರವೂ ಎಲ್ಲರು ಏಕೆ ಶಾಂತರಾಗಿದ್ದಾರೆ ? ಒಂದೇ ಒಂದೂ ದೂರು ದಾಖಲಾಗದಿರುವ ಅಮಾಯಕ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಮೇಲೆ ಸತತವಾಗಿ ನಿಷೇಧದ ಬೇಡಿಕೆಯನ್ನು ಮಾಡುವವರು ಈಗ ಅಬಿದ ಪಾಶಾ ಮತ್ತು ಅವರಂತಹ ಮತಾಂಧರನ್ನು ಸಹಾಯ ಮಾಡುವ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಈ ಮತಾಂಧ ಹಾಗೂ ದೇಶವಿರೋಧಿ ಸಂಘಟನೆಯ ಮೇಲೆ ನಿಷೇಧದ ಬಗ್ಗೆ ಚಕಾರವು ಏಕೆ ಎತ್ತುತ್ತಿಲ್ಲ ?, ಎಂಬ ಪ್ರಶ್ನೆಯನ್ನೂ ಅಮೃತೇಶ ಇವರು ಈ ಸಮಯದಲ್ಲಿ ಕೇಳಿದರು.
ಅಬಿದ ಪಾಶಾ ಮತ್ತು ಆತನ ಗುಂಪಿನ ಮೇಲೆ ಕ್ರಮ ಕೈಗೊಳ್ಳಲು ಹಿಂದೆಮುಂದೆ ನೋಡುತ್ತಿರುವ ಪೊಲೀಸ್ ಅಧಿಕಾರಿಗಳ ವಿಚಾರಣೆಯನ್ನು ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು, ಈ ಎಲ್ಲ ಹಿಂದೂಗಳ ಹತ್ಯೆಯ ಬಗ್ಗೆ ಮರುತನಿಖೆಯಾಗಬೇಕು, ಅದಕ್ಕನುಸಾರ ಸಂಬಂಧಿತರ ಮೇಲೆ ‘ಕೋಕಾ’ ಜಾರಿ ಮಾಡಿ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವರಿಗೆ ಬಹಿರಂಗವಾಗಿ ಸಹಾಯವನ್ನು ಮಾಡುವ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಈ ದೇಶಕ್ಕೆ ಗಂಡಾಂತರವಾಗಿರುವ ಸಂಘಟನೆಯ ಮೇಲೆ ನಿಷೇಧವನ್ನು ಹಾಕಬೇಕು, ಎಂಬ ಬೇಡಿಕೆಯನ್ನು ಈ ಪತ್ರಕರ್ತರ ಪರಿಷತ್ತಿನಲ್ಲಿ ಮಾಡಲಾಯಿತು.