ಸಪ್ಟೆಂಬರ್ 24 : ಮಂಗಳೂರು ಮಹಾನಗರಪಾಲಿಕೆ ನೀರು ಸರಬರಾಜು ಸ್ಥಗಿತ

Spread the love

ಸಪ್ಟೆಂಬರ್ 24 : ಮಂಗಳೂರು ಮಹಾನಗರಪಾಲಿಕೆ ನೀರು ಸರಬರಾಜು ಸ್ಥಗಿತ

ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ರೇಚಕ ಸ್ಥಾವರಕ್ಕೆ ವಿದ್ಯುತ್ ಸರಬರಾಜು ಮಾಡುವ 33 ಕೆವಿ ವಿದ್ಯುತ್ ತಂತಿಗಳನ್ನು ಮೆಸ್ಕಾಂ ವತಿಯಿಂದ ಬದಲಾಯಿಸಿ ಹೊಸ ಕೇಬಲ್ ಅಳವಡಿಸುವ ಕಾರ್ಯವನ್ನು ಸಪ್ಟೆಂಬರ್ 24 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.

ಈ ಅವಧಿಯಲ್ಲಿ ತುಂಬೆ ಎಚ್.ಎಲ್.ಪಿ.ಎಸ್-2 ಹಾಗೂ ಎಲ್.ಎಲ್.ಪಿ,ಎಸ್-2 ಸ್ಥಾವರಗಳಿಗೆ ವಿದ್ಯುತ್ ನಿಲುಗಡೆಗೊಳ್ಳುವುದರಿಂದ ನೀರು ಸರಬರಾಜು ನಿಲುಗಡೆಗೊಳಿಸಿರುವುದು. ಇದರಿಂದ ಮಂಗಳೂರು ನಗರದ ಭಾಗಶಃ ಪ್ರದೇಶ, ಮಂಗಳಾದೇವಿ, ಬಜಾಲ್, ಮೇರಿಹಿಲ್, ಪಚ್ಚನಾಡಿ, ಜಪ್ಪಿನಮೊಗರು, ವಾಮಾಂಜೂರು, ನೀರ್‍ಮಾರ್ಗ, ಶಕ್ತಿನಗರ, ಕಣ್ಣೂರು, ಇತ್ಯಾದಿ ಪ್ರದೇಶಗಳಲ್ಲಿ ನೀರು ಸರಬರಾಜು ಸಪ್ಟೆಂಬರ್ 24 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂಪೂರ್ಣ ನಿಲುಗಡೆಗೊಳ್ಳುವುದು ಎಂದು ಕಾರ್ಯಪಾಲಕ ಅಭಿಯಂತರರ ಮಹಾನಗರಪಾಲಿಕೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Spread the love