ಸಪ್ಟೆಂಬರ್ 6 : ಉಡುಪಿ ಜಿಲ್ಲೆಯಲ್ಲಿ 216 ಮಂದಿಗೆ ಕೊರೋನಾ ಪಾಸಿಟಿವ್ ದೃಢ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಭಾನುವಾರ ಒಟ್ಟು 216 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 12727 ಕ್ಕೆ ಏರಿಕೆಯಾಗಿದೆ.
ಸೋಂಕಿತರಲ್ಲಿ ಉಡುಪಿಯ 137, ಕುಂದಾಪುರದ 43, ಕಾರ್ಕಳದ 31 ಹಾಗೂ ಇತರೆ ಜಿಲ್ಲೆಗಳ 5 ರೋಗಿಗಳು ಇದ್ದಾರೆ. 120 ಸೋಂಕಿತರಿಗೆ ರೋಗದ ಗುಣಲಕ್ಷಣಗಳು ಕಂಡುಬಂದರೆ 96 ಮಂದಿಗೆ ಲಕ್ಷಣಗಳು ಇಲ್ಲ.
ಪ್ರಾಥಮಿಕ ಸಂಪರ್ಕದಿಂದ 74, ಐಎಲ್ಐ ಲಕ್ಷಣಗಳಿರುವ 84, ‘ಸಾರಿ’ ಲಕ್ಷಣಗಳಿರುವ 11ಹಾಗೂ ಹೊರ ಜಿಲ್ಲೆ, ಹೊರದೇಶಗಳ ಪ್ರಯಾಣ ಹಿನ್ನೆಲೆ ಹೊಂದಿರುವ 7 ಮಂದಿಗೆ ಸೋಂಕು ತಗುಲಿದ್ದು, 40 ಜನರ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.
ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಶೀತಜ್ವರ, ಉಸಿರಾಟದ ಸಮಸ್ಯೆ ಇರುವ 938 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಭಾನುವಾರ 629 ವರದಿಗಳು ನೆಗೆಟಿವ್ ಬಂದಿದ್ದು, 216 ಪಾಸಿಟಿವ್ ಬಂದಿವೆ. 350 ವರದಿಗಳು ಬರುವುದು ಬಾಕಿ ಇದೆ.
ಜಿಲ್ಲೆಯಲ್ಲಿ ಭಾನುವಾರ 270 ಮಂದಿ ಗುಣಮುಖರಾಗಿದ್ದು ಇದುವರೆಗೂ 10763 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 1852 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಜಿಲ್ಲೆಯಲ್ಲಿ ಇದುವರೆಗೆ ಕೊರೋನಾದಿಂದ ಒಟ್ಟು 112 ಮಂದಿ ಸಾವನಪ್ಪಿದ್ದಾರೆ.