ಸಪ್ಟೆಂಬರ್ 9ರಂದು ಉಡುಪಿಯಲ್ಲಿ ವಿಶ್ವ ಬಂಟರ ಸಮ್ಮಿಲನ -2018

Spread the love

ಸಪ್ಟೆಂಬರ್ 9ರಂದು ಉಡುಪಿಯಲ್ಲಿ ವಿಶ್ವ ಬಂಟರ ಸಮ್ಮಿಲನ -2018

ಉಡುಪಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟ(ರಿ) ಹಾಗೂ ಉಡುಪಿ ಜಿಲ್ಲೆಯ ಸಮಸ್ತ ಬಂಟರ ಸಂಘಗಳ ಸಹಯೋಗದಲ್ಲಿ ವಿಶ್ವ ಮಟ್ಟದ ಸಮಸ್ತ ಬಂಟರನ್ನು ಒಗ್ಗೂಡಿಸುವ ವಿಶ್ವ ಬಂಟರ ಸಮ್ಮಿಲನ -2018 ಸಪ್ಟೆಂಬರ್ 9ರಂದು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ವಠಾರದಲ್ಲಿ ಜರುಗಲಿರುವುದು ಎಂದು ಸಮ್ಮೇಳನ ಸಮಿತಿಯ ಅಧ್ಯಕ್ಷರಾದ ಇಂದ್ರಾಳಿ ಜಯಕರ ಶೆಟ್ಟಿ ತಿಳಿಸಿದರು.

ಅವರು ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಬೆಳಿಗ್ಗೆ 8 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಕಾರ್ಯಕ್ರಮದಲ್ಲಿ ಭಜನಾ ಕಾರ್ಯಕ್ರಮ, ಭಕ್ತಿ ಗೀತಾ ಕಾರ್ಯಕ್ರಮ, ಜಾಗತಿಕ ಮಟ್ಟದ ವಿವಿಧ ಬಂಟರ ಸಂಘಗಳ ಸದಸ್ಯರಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಚಲನಚಿತ್ರ ತಾರೆಯರೆಲ್ಲಾ ಸೇರಿ ತಾರಾ ಸಮ್ಮಿಲನ ಕಾರ್ಯಕ್ರಮ ನೀಡಲಿದ್ದು, ಬಂಟ ರಾಜಕೀಯ ವ್ಯಕ್ತಿಗಳೆಲ್ಲಾ ಸೇರ ರಾಜಕೀಯ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಪರರಾಷ್ಟ್ರಗಳಿಂದ ನೂರಾರು ಸಂಖ್ಯೆಯಲ್ಲಿ ಭಾಗವಹಿಸುವ ಬಂಟರು ಅನಿವಾಸಿ ಭಾರತೀಯರು ಎಂಬ ಕಾರ್ಯಕ್ರಮ ನೀಡಲಿದ್ದಾರೆ. ವಿಷೇಷವಾಗಿ ಬಂಟರ ಸಂಸ್ಕೃತಿ, ಸಂಸ್ಕಾರವನ್ನು ಪ್ರತಿಬಿಂಬಿಸುವ ಬಂಟರು ಅಂದು, ಇಂದು ಮುಂದು ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ಏರ್ಪಡಲಿದೆ. ರಾಷ್ಟ್ರಮಟ್ಟದ ಸಾಧಕರನ್ನು ಅಭಿನಂದಿಸುವ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದ್ದು, ದೇಶ ವಿದೇಶಗಳಿಂದ ಸಾವಿರಾರು ಬಂಟರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಭಾಗವಹಿಸುವ ವಿಶ್ವಾಸ ವ್ಯಕ್ತಪಡಿಸಿದ್ದು, ಧರ್ಮಸ್ಥಳದ ಡಾ||ವೀರೆಂದ್ರ ಹೆಗ್ಗೆ ಕೂಡ ಭಾಗವಹಿಸಲಿದ್ದಾರೆ.

ಸಮ್ಮಿಲನದಲ್ಲಿ ಕನಿಷ್ಠ 15000-20000 ಜನಗರು ಭಾಗವಹಿಸಲಿದ್ದು, ವಿವಿಧ ಸಮಿತಿಗಳನ್ನು ರಚನೆ ಮಾಡಿ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದರು

ಸುದ್ದಿಗೋಷ್ಟಿಯಲ್ಲಿ ಐಕಳ ಹರೀಶ್ ಶೆಟ್ಟಿ, ಕಾಪು ಲೀಲಾಧರ ಶೆಟ್ಟಿ, ಮೋಹನ ಶೆಟ್ಟಿ ಹಾಗೂ ಇತರರು ಉಪಸ್ತಿತರಿದ್ದರು.


Spread the love