Home Mangalorean News Kannada News ಸಫ್ವಾನ್ ಅಪಹರಣ ಪ್ರಕರಣ ಬೇಧಿಸಿದ ಪೋಲಿಸರು; ಇಬ್ಬರ ಬಂಧನ

ಸಫ್ವಾನ್ ಅಪಹರಣ ಪ್ರಕರಣ ಬೇಧಿಸಿದ ಪೋಲಿಸರು; ಇಬ್ಬರ ಬಂಧನ

Spread the love

ಸಫ್ವಾನ್ ಅಪಹರಣ ಪ್ರಕರಣ ಬೇಧಿಸಿದ ಪೋಲಿಸರು; ಇಬ್ಬರ ಬಂಧನ

ಮಂಗಳೂರು: ಸುರತ್ಕಲ್ ಪೋಲಿಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಬಳಿಯಿಂದ ಸಫ್ವಾನ್ ಎಂಬಾತನನ್ನು ಅಪಹರಣಗೈದ ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ಭೇದಿಸಿದ್ದು, ಪ್ರಕರಣದಲ್ಲಿ ಭಾಗಿಯಾದ ಇಬ್ಬರುನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಕೃಷ್ಣಾಪುರ ನಿವಾಸಿ ಮಹಮ್ಮದ್ ಫೈಝಲ್ ಇಬ್ರಾಹಿಂ ಶೇಖ್ ಯಾನೆ ಬಾಂಬೆ ಫೈಝಲ್ (36) ಮತ್ತು ಸಾಹಿಲ್ ಇಸ್ಮಾಯಿಲ್ (22) ಎಂದು ಗುರುತಿಸಲಾಗಿದೆ.

ಅಕ್ಟೋಬರ್ 5 ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು 8 ನೇ ಬ್ಲಾಕ್ ನಿವಾಸಿ ಅಬ್ದುಲ್ ಹಮೀದ್ ಎಂಬವರ ಮಗನಾದ ಸಫ್ವಾನ್ ಎಂಬಾತನನ್ನು ಚೊಕ್ಕಬೆಟ್ಟು ಬಳಿಯಿಂದ ಮಾರುತಿ ಎರ್ಟಿಕಾ ಕಾರಿನಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಸಫ್ವಾನ್ ಮತ್ತು ಸಂಶುದ್ದೀನ್ ಹಾಗೂ ಆಚನ ಸಹಚರರು ಅಪಹರಣ ಮಾಡಿದ್ದು, ಈ ಬಗ್ಗೆ ಸಾರ್ವಜನಿಕರು ಅಬ್ದುಲ್ ಹಮೀದ್ ಅವರಿಗೆ ನೀಡಿದ ಮಾಹಿತಿ ಸುರತ್ಕಲ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು.

ಪ್ರಕರಣದಕ್ಕೆ ಒಳಗಾದ ಸಫ್ವಾನ್ ಮತ್ತು ಪ್ರಕರಣದ ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿತ್ತು.

ಅದರಂತೆ ಆರೋಪಿಗಳನ್ನು ಮುಂಬೈಯ ಬಾಂದ್ರಾ ವೆಸ್ಟ್ ಎಸ್ ವಿ ರೋಡ್ ಎಂಬಲ್ಲಿಂದ ವಶಕ್ಕೆ ಪಡೆದುಕೊಂಡು ಮಂಗಳೂರು ನಗರಕ್ಕೆ ಬಂದು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದಾಗ ಆರೋಪಿಗಳೆಲ್ಲರೂ ಸೇರಿ ಅಪಹರಣ ಮಾಡಿದ ಸಫ್ವಾನ್ ಎಂಬಾತನನ್ನು ಕಾರ್ಕಳ ಪರಿಸರದಲ್ಲಿ ಕೊಲೆ ಮಾಡಿ ನಂತರ ಆತನ ಮೃತದೇಹವನ್ನು ಆಗುಂಬೆ ಘಾಟಿಯಲ್ಲಿ ಬಿಸಾಡಿದ ಬಗ್ಗೆ ತನಿಖೆಯಲ್ಲಿ ತಿಳಿದುಬಂದಿದೆ. ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಮೂರು ಮಂದಿ ಆರೋಪಿಗಳು ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದ ಹಾಗೂ ಕೃತ್ಯದಲ್ಲಿ ಸಹಕರಿಸಿದ ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಳ್ಳಬೇಕಾಗಿದೆ.

ಪೊಲೀಸ್ ಕಮಿಷನರ್ ಟಿ ಆರ್ ಸುರೇಶ್ ಅವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿಯಾದ ಉಮಾಪ್ರಶಾಂತ್ ಮಾರ್ಗದರ್ಶನದಲ್ಲಿ ಎಸಿಪಿ ಉತ್ತರ ಉಪವಿಭಾಗ ರಾಜೇಂದ್ರ ಡಿ ಎಸ್ ಅವರ ನೇತೃತ್ವದಲ್ಲಿ ಈ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.


Spread the love

Exit mobile version