ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಅದ್ಭುತ ಕನಸನ್ನು ನನಸಾಗಿಸುವ ಬಜೆಟ್ – ಕಾರ್ಣಿಕ್

Spread the love

ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಅದ್ಭುತ ಕನಸನ್ನು ನನಸಾಗಿಸುವ ಬಜೆಟ್ – ಕಾರ್ಣಿಕ್

ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ರವರು ಮಂಡಿಸಿರುವ ಬಜೆಟ್ ದೇಶ ಕಂಡ ಅತ್ಯುತ್ತಮ ಬಜೆಟ್ಗಳಲ್ಲಿ ಒಂದಾಗಿದ್ದು ಕಳೆದ ನಾಲ್ಕುವರೆ ವರ್ಷಗಳಲ್ಲಿ ದೇಶದ ಸರ್ವಾಂಗಿಣ ಅಭಿವೃದ್ಧಿಗೆ ಭದ್ರ ತಳಪಾಯವನ್ನು ಹಾಕಿದ ನಂತರ ಸಮಾಜದ ಎಲ್ಲಾ ವರ್ಗಗಳನ್ನು ಪರಿಗಣಿಸಿ ನಾಲ್ಕುವರೆ ವರ್ಷಗಳ ಅಭಿವೃದ್ಧಿಯ ಲಾಭವನ್ನು ದೇಶದ ಜನತೆಯೊಂದಿಗೆ ಸಮಾನವಾಗಿ ವಿತರಿಸದ ಬಜೆಟ್ ಇದಾಗಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

ನವ ಭಾರತದ ಕಲ್ಪನೆಯೊಂದಿಗೆ ಮುಂದಿನ 10 ವರ್ಷಗಳಲ್ಲಿ ಭವಿಷ್ಯದ ಭಾರತದ ನಿರ್ಮಾಣ ಸಕಾರಗೊಳಿಸುವ ನಿಟ್ಟಿನಲ್ಲಿ ಮಧ್ಯಮ ವರ್ಗ, ಉದ್ಯೋಗಿಗಳು, ರೈತರು, ಅಸಂಘಟಿತ ಕಾರ್ಮಿಕರು ಹಾಗೂ ಗ್ರಾಮಾಂತರದ ಕೃಷಿ-ಕೂಲಿ ಕಾರ್ಮಿಕರನ್ನು ಕೇಂದ್ರವಾಗಿಟ್ಟು ಅವರ ಭವಿಷ್ಯಕ್ಕೆ ಭದ್ರತೆಯನ್ನು ಒದಗಿಸಿದ ಬಜೆಟ್, 72 ವರ್ಷಗಳ ನಂತರ ಮೊದಲ ಬಾರಿಗೆ ಎಲ್ಲಾ ವರ್ಗಗಳನ್ನು ತಲುಪಿದ ಸ್ವಾಭಿಮಾನಿ ಬಜೆಟ್.

ಅದಾಯ ತೆರಿಗೆಯ ಮಿತಿಯನ್ನು ರೂ. 5 ಲಕ್ಷಕ್ಕೆ ಏರಿಸಿ ನೇರ ತೆರಿಗೆ ನೀಡುವ ಮೂರು ಕೋಟಿಗಿಂತಲು ಅಧಿಕ ತೆರಿಗೆದಾರರ ಆನೇಕ ವರ್ಷದಗಳ ಬೇಡಿಕೆಯನ್ನು ನೆರವೆರಿಸಲಾಗಿದ್ದು, ದೇಶ ರಕ್ಷಣೆಯ ಕುರಿತಾಗಿ ವಿಶೇಷ ಕಾಳಜಿವಹಿಸಿ 3 ಲಕ್ಷ ಕೋಟಿಗೂ ಮೀರಿ ನೀಡಿರುವ ಅನುದಾನ ದೇಶದ ಭದ್ರತೆಯ ದೃಷ್ಠಿಯಿಂದ ಸ್ವಾಗತರ್ಹ, ಮಿನಿಮಮ್ ಗವರ್ನಮೆಂಟ್ ಮೇಕ್ಸಿಮಮ್ ಗವರ್ನೇನ್ಸ್ (Minimum Government Maximum Governance) ಎನ್ನುವ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಮಾತನ್ನು ಸಕಾರಗೋಳಿಸಿವ ಈ ಬಜೆಟ್ ದೇಶದ ಎಲ್ಲಾ ಜನತೆಯನ್ನು ಮೋಡಿ ಮಾಡುವ ಮೂಲಕ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಅದ್ಭುತವಾದ ಕನಸನ್ನು ನನಸಾಗಿಸುವ ಬಜೆಟ್ ಇದಾಗಿದೆ ಎಂದು ತಿಳಿಸಿದ್ದಾರೆ.


Spread the love