ಸಭೆಯ ನಿರ್ಣಯ ಗಾಳಿಗೆ ತೂರಿ ಸಾಸ್ತಾನದಲ್ಲಿ ಟೋಲ್ ವಸೂಲಿ; ಪ್ರತಿಭಟನೆ

Spread the love

ಸಭೆಯ ನಿರ್ಣಯ ಗಾಳಿಗೆ ತೂರಿ ಸಾಸ್ತಾನದಲ್ಲಿ ಟೋಲ್ ವಸೂಲಿ; ಪ್ರತಿಭಟನೆ

ಕೋಟ: ಕಳೆದ ಬಾರಿ ಟೋಲ್ ವಿಚಾರವಾಗಿ ಜಿಲ್ಲಾಡಳಿತದ ಸಭೆ ಮತ್ತು ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯದರ್ಶಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯರಾದ ಶ್ರೀನಿವಾಸ್ ಪೂಜಾರಿ, ಪ್ರತಾಪ್ ಚಂದ್ರ ಶೆಟ್ಟಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಚಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ರಘುಪತಿ ಭಟ್ ಇವರ ಸಮ್ಮುಖದಲಿ ನಡೆದ ಸಭೆಯ ನಿರ್ಣಯದಂತೆ ರಸ್ತೆ ಕಾಮಗಾರಿ ಪೂರ್ಣವಾಗುವವರೆಗೂ ಕೆಎ20 ವಾಹನಗಳಿಗೆ ಟೋಲ್ ವಸೂಲಿ ಮಾಡಬಾರದು ಎಂಬ ಸ್ಪಷ್ಟ ಸೂಚನೆ ಇದ್ದರೂ ಸಹ ಬಲವಂತವಾಗಿ ಟೋಲ್ ವಸೂಲಿಗೆ ಹೊರಟಿರುವುದನ್ನು ಖಂಡಿಸಿ ಗುರುವಾರದಂದು ಸಂಜೆ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಸದಸ್ಯರು ಮತ್ತು ಸಾರ್ವಜನಿಕರು ಟೋಲ್ ಕೇಂದ್ರಕ್ಕೆ ಮುತ್ತಿಗೆ ಹಾಕಿ ಟೋಲ್ ಗೇಟ್‍ಗಳನ್ನು ತೆರವುಗೊಳಿಸುವ ಮೂಲಕ ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ 66ರ ಸಾಸ್ತಾನ ಗುಂಡ್ಮಿಯಲ್ಲಿ ನಿರ್ಮಿಸಲಾದ ಟೋಲ್ ಗೇಟ್‍ನಲ್ಲಿ ಕಳೆದೆರಡು ದಿನಗಳಿಂದ ಏಕಾಏಕಿ ಸ್ಥಳೀಯ ವಾಹನಗಳಿಗೂ ಟೋಲ್ ಪಡೆಯುವುದನ್ನು ಪ್ರಾರಂಭಿಸದ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಟೋಲ್ ಪಡೆಯದಂತೆ ತಿಳಿಸಿದ್ದರೂ ಕೂಡ ಕರಪತ್ರ ಅಂಟಿಸಿ ಸ್ವಯಂ ನಿಯಮ ರೂಪಿಸಿ ಟೋಲ್ ಪಡೆಯುವ ಕ್ರಮ ನಿಲ್ಲಿಸುವವರೆಗೂ ನಾವು ಪ್ರತಿಭಟನೆ ಬಿಡುವುದಿಲ್ಲ ಎಂದು ಪ್ರತಿಭಟನಾ ನಿರತರು ಪಟ್ಟ ಹಿಡಿದ ಹಿನ್ನಲೆ ಟೋಲ್ ಕೇಂದ್ರದಲ್ಲಿ ಮಾತಿನ ಚಕುಮಕಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಕಳೆದ ಬಾರಿ ಟೋಲ್ ವಿಚಾರವಾಗಿ ಜಿಲ್ಲಾಡಳಿತದ ಸಭೆ ಮತ್ತು ಲೋಕೋಪಯೋಗಿ ಇಲಾಖೆ ಮುಖ್ಯ ಕಾರ್ಯದರ್ಶಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯರಾದ ಶ್ರೀನಿವಾಸ್ ಪೂಜಾರಿ, ಪ್ರತಾಪ್ ಚಂದ್ರ ಶೆಟ್ಟಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಚಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ರಘುಪತಿ ಭಟ್ ಇವರ ಸಮ್ಮುಖದಲಿ ನಡೆದ ಸಭೆಯ ನಿರ್ಣಯದಂತೆ ರಸ್ತೆ ಕಾಮಗಾರಿ ಪೂರ್ಣವಾಗುವವರೆಗೂ ಕೆಎ20 ವಾಹನಗಳಿಗೆ ಟೋಲ್ ವಸೂಲಿ ಮಾಡಬಾರದು ಎಂದು ತಿಳಿಸಲಾಗಿತು. ಈ ಹಿನ್ನಲೆಯಲ್ಲಿ ಆದೇಶ ಅನ್ವಯ ಕಾರ್ಯ ನಿರ್ವಹಿಸುತ್ತಿದ್ದ ಟೋಲ್ ಕೇಂದ್ರದವರು ಕಳೆದ ಎರಡು ದಿನಗಳಿಂದ 5 ಕಿಲೋ ಮೀಟರ್‍ನಿಂದ 20 ಕಿಲೋ ಮೀಟರ್‍ವರೆಗಿನ ಖಾಸಗಿ ವಾಹನಗಳಿಗೆ 235 ರೂಪಾಯಿ ನೀಡಿ ಪಾಸ್ ಪಡೆಯಬೇಕು ಮತ್ತು ವ್ಯವಹಾರಿಕ ವಾಹನಗಳಿಗೆ ಟೋಲ್ ವಿಧಿಸುವ ಕುರಿತು ಭಿತ್ತಿ ಪತ್ರ ಅಂಟಿಸಿ ಟೋಲ್ ಪಡೆಯುತ್ತಿದ್ದರು. ಅಲ್ಲದೇ ಪ್ರತಿ ವಾಹನ ಸವಾರರ ಬಳಿ ಗುರುತಿನ ಚೀಟಿ ಪಡೆದು ಬಳಿಕ ಬಿಡುತ್ತಿದ್ದರು ಎನ್ನುವ ದೂರುಗಳು ಕೇಳಿ ಬರುತ್ತಿದ್ದವು. ಇದೇ ವಿಚಾರವಾಗಿ ಚರ್ಚೆ ನಡೆಸಿದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಸದಸ್ಯರು ಗುರುವಾರ ಸಂಜೆ ಟೋಲ್ ಕೇಂದ್ರಕ್ಕೆ ಮುತ್ತಿಗೆ ಹಾಕಿದರು.

ಟೋಲ್ ಕೇಂದ್ರದಲ್ಲಿ ಹಾಕಲಾಗಿದ್ದ ಗೇಟ್‍ಗಳನ್ನು ಸರಿಸಿದ ಪ್ರತಿಭಟನಾ ನಿರತರು ಟೋಲ್ ಪಡೆಯದಂತೆ ನಿರ್ಭಂದಿಸಿ ಟೋಲ್ ನಿರ್ವಾಹಕನನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಟೋಲ್ ಮುಖ್ಯಸ್ಥರು ಸ್ಥಳಕ್ಕೆ ಬರದ ಹೊರತು ಟೋಲ್ ಕೇಂದ್ರ ಬಿಟ್ಟು ತೆರಳುವುದಿಲ್ಲ ಎಂದು ತಿಳಿಸಿದರು. ಬಳಿಕ ಕೋಟ ಪೊಲೀಸ್ ಉಪನಿರೀಕ್ಷಕ ರಾಜಗೋಪಾಲ ಮತ್ತು ಸಿಬ್ಬಂದಿಗಳು ಆಗಮಿಸಿ ಮಾತುಕತೆ ನಡೆಸಿದರು ಆದರೂ ಕೂಡ ಸಮಸ್ಯೆ ಪರಿಹಾರವಾಗದೆ ನಾವು ತೆರಳುವುದಿಲ್ಲ ಎಂದು ಪ್ರತಿಭಟನಾ ನಿರತರು ಪಟ್ಟು ಹಿಡಿದರು. ಬಳಿಕ ಟೋಲ್ ಅಧಿಕಾರಿ ರಾಘವೇಂದ್ರ ಅವರು ಸ್ಥಳಕ್ಕೆ ಆಗಮಿಸಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಮೊದಲು ನಡೆಸಿದ ತಿರ್ಮಾನದಂತೆ ಟೋಲ್ ಪಡೆಯಬಾರದು ಎನ್ನುವ ವಿಚಾರವನ್ನು ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಎತ್ತಿ ಹಿಡಿದು ನ್ಯಾಯ ನೀಡಬೇಕು ಎಂದು ಆಗ್ರಹಿಸಿದರು. ಬಳಿಕ ಪ್ರತಿಭಟನೆಗೆ ಮಣಿದ ಟೋಲ್ ಅಧಿಕಾರಿ ಮೊದಲಿನಂತೆ ಟೋಲ್ ಕಾರ್ಯ ನಿರ್ವಹಿಸಲಿದೆ ಯಾವುದೇ ಹೊಸ ಟೋಲ್ ಸೂಚನೆ ನೀಡುವುದಿಲ್ಲ ಎಂದು ತಿಳಿಸಿದ ಬಳಿಕ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಮತ್ತು ಸಾರ್ವಜನಿಕರು ಪ್ರತಿಭಟನೆಯನ್ನು ಹಿಂಪಡೆದರು.
ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಅಚ್ಚುತ್ ಪೂಜಾರಿ ಕಾರ್ಕಡ, ನ್ಯಾಯವಾದಿ ಶ್ಯಾಮ ಸುಂದರ ನಾೈರಿ, ಅಲ್ವಿನ್ ಅಂದಾದ್ರೆ ಸಂದೀಪ್ ಕೋಡಿ ಮತ್ತಿತರರು ಉಪಸ್ಥಿತರಿದ್ದರು.


Spread the love