ಸಮಸ್ಯೆ ಬಗೆಯರಿಸಲು ಸಂಘಟನೆಗಳು ಸಹಕಾರಿಯಾಗುವುದು – ಕೃಷ್ಣ ಎನ್ ಉಚ್ಚಿಲ್

Spread the love

ಸಮಸ್ಯೆ ಬಗೆಯರಿಸಲು ಸಂಘಟನೆಗಳು ಸಹಕಾರಿಯಾಗುವುದು – ಕೃಷ್ಣ ಎನ್ ಉಚ್ಚಿಲ್

ಮುಂಬಯಿ: ಶ್ರೀ ಭಗವತೀ ಕ್ಷೇತ್ರ ಉಪ್ಪಳದ ಸುತ್ತು ಗೋಪುರದ ಕಾರ್ಯವು ತೀವ್ರಗತಿಯಲ್ಲಿ ಸಾಗುತ್ತಿದ್ದು, ಇಲ್ಲಿರುವ ಹೆಚ್ಚಿನವರಿಗೆ ಈ ಬಗ್ಗೆ ತಿಳಿಯದೇ ಇದ್ದು ಇಲ್ಲಿ ವಿವಿದೆಡೆ ನೆಲೆಸಿರುವ ಶ್ರೀ ಕ್ಷೇತ್ರಕ್ಕೆ ಸಂಮಂದಿಸಿದವರನ್ನು ಸಂಘಟಿಸುವುದು ಅತೀ ಅಗತ್ಯ. ಇದರಿಂದ ಎಲ್ಲರೂ ಸಂಘಟಿತರಾಗುದರೊಂದಿಗೆ ಸಮಸ್ಯೆ ಬಗೆಯರಿಸಲು ಸಹಕಾರಿಯಾಗುವುದು ಎಂದು ಬೊಳ್ನಾಡ್ ಶ್ರೀ ಭಗವತೀ ಕ್ಷೇತ್ರದ ಜೀರ್ಣೊದ್ದಾರದ ರೂವಾರಿ, ಸಮಾಜ ಸೇವಕ, ಕೊಡುಗೈ ದಾನಿ ಕೃಷ್ಣ ಎನ್ ಉಚ್ಚಿಲ್ ನುಡಿದರು.

ಶ್ರೀ ಭಗವತೀ ಕ್ಷೇತ್ರ ಉಪ್ಪಳದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಮುಂಬಯಿಗಾಗಮಿಸಿದ್ದು ಜೂ. 30 ರಂದು ಸಂಜೆ ಅಂಧೇರಿ ಪಶ್ಚಿಮ, ಜುಹು ಸಮೀಪದ ಮೇಯರ್ಸ್ ಹಾಲ್ ನಲ್ಲಿ ಮುಂಬಯಿಯ ಸದಸ್ಯರೊಂದಿಗೆ ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಾ ಬೊಳ್ನಾಡ್ ಶ್ರೀ ಭಗವತೀ ಕ್ಷೇತ್ರಕ್ಕೂ ಉಪ್ಪಳ ಶ್ರೀ ಭಗವತೀ ಕ್ಷೇತ್ರಕ್ಕೂ ಬಹಳ ನಿಕಟ ಸಂಪರ್ಕವಿದೆ. ನನ್ನ ತರವಾಡು ಮನೆ ಉಪ್ಪಳ ಕ್ಷೇತ್ರಕ್ಕೆ ಸೇರಿದ್ದು ನಾನೂ ಈ ಕ್ಷೇತ್ರಕ್ಕೆ ಒಳಪಟ್ಟಿರುವೆನು ಎನ್ನಲು ಸಂತೋಷವಾಗುತ್ತದೆ ಎನ್ನುತ್ತ ಅವರು ಸದ್ಯ ರೂ. 2 ಲಕ್ಷ ನೀಡುದಾಗಿ ಘೋಷಿಸುತ್ತಾ ಇನ್ನು ಮುಂದೆಯೂ ಸಹಕರಿಸುದಾಗಿ ತಿಳಿಸಿದರು.

ಶ್ರೀ ಭಗವತೀ ಕ್ಷೇತ್ರ ಉಪ್ಪಳ ಇದರ ಕಾರ್ಯಾಕಾರಿ ಸಮಿತಿಯ ಅಧ್ಯಕ್ಷರಾದ ಸುಕುಮಾರ್ ಯು ಮಾತನಾಡುತ್ತಾ ಮುಂಬಯಿಯ ಸಮಿತಿಯು ಗಟ್ಟಿಯಾದಲ್ಲಿ ಊರಿನವರಿಗೆ ಎಲ್ಲವೂ ಸುಲಭವಾಗಬಹುದು. ಕೃಷ್ಣ ಎನ್ ಉಚ್ಚಿಲ್ ರಂತವರು ಸಮಾಜ ಸೇವಾ ನಿರತರಾಗಿದ್ದು ಅವರಂತವರಿಗೆ ಹಣ ಬಲಕ್ಕಿಂತ ಜನಬಲ ಮುಖ್ಯ. ಆಗ ಮಾತ್ರ ಎಲ್ಲವೂ ಸರಿಯಾಗಿ ನಡೆಯುತ್ತದೆ. ಕೃಷ್ಣ ಎನ್ ಉಚ್ಚಿಲ್ ರ ನೇತೃತ್ವದಲ್ಲಿರುವ ಮುಂಬಯಿ ಸಮಿತಿ ನಮ್ಮ ಊರಿನ ಸಮಿತಿಯ ಅಡಿಪಾಯದಂತೆ ಎನ್ನುತ್ತಾ ಮುಂಬಯಿ ಸಮಿತಿಯ ಗೌರವ ಅಧ್ಯಕ್ಷರಾಗಿ ಕೃಷ್ಣ ಎನ್ ಉಚ್ಚಿಲ್, ಅಧ್ಯಕ್ಷರಾಗಿ ಕಲಾವತಿ ಲಾಜರ್ ಕೋಟ್ಯಾನ್, ಕ್ಷೇತ್ರದ ಮುಂಬಯಿಯ ಗುರಿಕಾರರನ್ನಾಗಿ ತಿಮ್ಮಪ್ಪ ಬಂಗೇರ ಹಾಗೂ ಮೂಪತ್ತಿಯಾಗಿ ಶೀಮತಿ ಅಮೀನ್ ಇವರ ಹೆಸರನ್ನು ಘೋಷಿಸಿದರು.

ಮುಂಬಯಿ ಸಮಿತಿಯ ಪ್ರಥಮ ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಗೊಂಡ ಕಲಾವತಿ ಲಾಜರ್ ಕೋಟ್ಯಾನ್ ಅವರು ಮಾತನಾಡುತ್ತಾ ಎಲ್ಲರ ಸಹಕಾರ ಹಾಗೂ ಪ್ರೋತ್ಸಾಹದಿಂದ ಸಮಿತಿಯು ಯಶಸ್ವಿಯಾಗಿ ಕಾರ್ಯನಿರ್ವಹಿಸುವುದು. ಈಗಾಗಲೇ ಉಪ್ಪಳ ಕ್ಷೇತ್ರಕ್ಕೆ ಸಮೀಪವಿರುವ ನಮ್ಮ ತಾಯಿಯ ಹೆಸರಲ್ಲಿರುವ ಸುಮಾರು 28 ಸೆಂಟ್ಸ ಜಾಗವನ್ನು ಮಕ್ಕಳಾದ ನಾವು ಉಪ್ಪಳ, ಶ್ರೀ ಭಗವತೀ ಕ್ಷೇತ್ರಕ್ಕೆ ಉಚಿತವಾಗಿ ನೀಡಿರುತ್ತೇವೆ ಎಂದರು.

ಗಂಗಾಧರ ಕಲ್ಲಾಡಿ, ನ್ಯಾ. ಅರವಿಂದ ಕೋಟ್ಯಾನ್ ತಮ್ಮ ಅಭಿಪ್ರಾಯವನ್ನು ಮಂಡಿಸಿದರು.

ಶ್ರೀ ಭಗವತೀ ಕ್ಷೇತ್ರ ಉಪ್ಪಳ, ಮುಂಬಯಿ ಸಮಿತಿಯಲ್ಲಿ ಉಪಾಧ್ಯಕ್ಷರುಗಳನ್ನಾಗಿ ಚಂದ್ರಹಾಸ ಕೋಟ್ಯಾನ್, ವಿಜಯ ಅಂಬಾಡಿ, ಪದ್ಮನಾಭ ಸುವರ್ಣ ಮತ್ತು ಭಾಸ್ಕರ ಕರ್ಕೇರ, ಕಾರ್ಯದರ್ಶಿಯಾಗಿ ಈಶ್ವರ ಎಂ. ಐಲ್, ಜೊತೆ ಕಾರ್ಯದರ್ಶಿಗಳಾಗಿ ಶಶಿಪ್ರಭಾ ಶೈಲೇಶ್ ಬಂಗೇರ ಮತ್ತು ನ್ಯಾ. ಅರವಿಂದ್ ಕೋಟ್ಯಾನ್, ಕೋಶಾಧಿಕಾರಿಯಾಗಿ ಪ್ರಕಾಶ್ ಸುವರ್ಣ, ಸಮಿತಿಯ ಸದಸ್ಯರುಗಳಾಗಿ ಚಂದ್ರಾವತಿ ವಸಂತ್, ಗಂಗಾಧರ ಕಲ್ಲಾಡಿ, ಸತೀಷ್ ಕೋಟ್ಯಾನ್, ಸತೀಷ್ ಅಂಬಾಡಿ, ರಾಜೇಂದ್ರ ಸುವರ್ಣ, ನಾರಾಯಣ, ದಿನೇಶ್ ಸುವರ್ಣ, ಶೈಲೇಶ್ ಬಂಗೇರ, ಶೈಲಜಾ ನಾರಾಯಣ್, ತುಳಸಿ ಮತ್ತು ಲೋಕೇಶ್ ಸಾಲ್ಯಾನ್ ಇವರನ್ನು ಆಯ್ಕೆಮಾಡಲಾಯಿತು. ಶ್ರೀ ಭಗವತೀ ಕ್ಷೇತ್ರ ಉಪ್ಪಳದ ಉಪಾಧ್ಯಕ್ಷ ಮಾಧವ ಕೋಲಾರಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಕಮಲಾಕ್ಷ ಪಂಜ ಮತ್ತು ಜೊತೆ ಕಾರ್ಯದರ್ಶಿ ಶಾಜಿ ಉಪ್ಪಳ ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೊಂಡೆವೂರು ಪ್ರಸ್ತಾವಿಕ ನುಡಿಗಳನ್ನಾಡಿ ಸಭೆಯನ್ನು ನಿರ್ವಹಿಸಿದರು.


Spread the love