ಸಮಾಜದಲ್ಲಿ ಬದಲಾವಣೆಗಳಾಬೇಕಾದರೆ ಪ್ರತಿಯೋರ್ವ ನಾಗರಿಕನೂ ಶಿಕ್ಷಿತನಾಗಬೇಕು: ಜೆ.ಆರ್.ಲೋಬೋ

Spread the love

ಸಮಾಜದಲ್ಲಿ ಬದಲಾವಣೆಗಳಾಬೇಕಾದರೆ ಪ್ರತಿಯೋರ್ವ ನಾಗರಿಕನೂ ಶಿಕ್ಷಿತನಾಗಬೇಕು: ಜೆ.ಆರ್.ಲೋಬೋ

ಮಂಗಳೂರು: ಸಮಾಜದಲ್ಲಿ ಬದಲಾವಣೆ ನಡೆಯಬೇಕಿದ್ದರೆ ಪ್ರತಿಯೋರ್ವ ನಾಗರಿಕನೂ ಶಿಕ್ಷಿತನಾಗಬೇಕಾದ ಅವಶ್ಯಕತೆ ಇದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್.ಲೋಬೋ ಹೇಳಿದರು.

ಅವರು ನಗರದ ಬಜಾಲ್ ಪಕ್ಕಲಡ್ಕದಲ್ಲಿರುವ ಸ್ನೇಹ ಪಬ್ಲಿಕ್ ಸ್ಕೂಲ್ ನ ದಶಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

image001mla-jr-lobo-mangalorean-com-20161229-001 image002mla-jr-lobo-mangalorean-com-20161229-002 image003mla-jr-lobo-mangalorean-com-20161229-003 image004mla-jr-lobo-mangalorean-com-20161229-004 image005mla-jr-lobo-mangalorean-com-20161229-005 image006mla-jr-lobo-mangalorean-com-20161229-006 image007mla-jr-lobo-mangalorean-com-20161229-007

ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕೆ.ಹರಿನಾಥ್, ಯಾವುದೇ ಲಾಭ ಗಳಿಕೆಯ ಉದ್ದೇಶವಿಲ್ಲದೆ ನಗರದ ಹೊರವಲಯದಲ್ಲಿ ಸ್ನೇಹ ಪಬ್ಲಿಕ್ ಶಾಲೆ ನಿರ್ಮಿಸಿ, ಶೈಕ್ಷಣಿಕ ರಂಗದಲ್ಲಿ ತಮ್ಮದೇ ಸೇವೆ ನೀಡುವ ಮೂಲಕ ಸ್ಥಳೀಯವಾಗಿ ತುಂಬಾ ಬದಲಾವಣೆ ತರಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಮಂಗಳೂರು ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷರಾದ ಮುಹಮ್ಮದ್ ಕುಂಞ ‘ಇಬ್ರಾಹೀಂ ಸಈದ್ ಮೆಮೋರಿಯಲ್’ ನೂತನ ಸಭಾಂಗಣವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮನಪಾ ಕಾರ್ಪೋರೇಟರ್‍ಗಳಾದ ಪ್ರವೀಣ್‍ಚಂದ್ರ ಆಳ್ವ, ಸುಮಯ್ಯಾ ಅಶ್ರಫ್, ನಝೀರ್ ಅಹ್ಮದ್, ಶಾಲಾ ಸಂಚಾಲಕ ಯೂಸುಫ್ ಪಕ್ಕಲಡ್ಕ, ಶಿಕ್ಷಕ-ರಕ್ಷಕರ ಸಂಘದ ಅಧ್ಯಕ್ಷ ಪಿ.ಬಿ.ಮುಹಮ್ಮದ್, ಉಪಾಧ್ಯಕ್ಷ ಅಬ್ದುಸ್ಸಲಾಂ ಸಿ.ಎಚ್., ಹ್ಯೂಮನ್ ವೆಲ್ಫೇರ್ ಟ್ರಸ್ಟ್‍ನ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love