Home Mangalorean News Kannada News ಸಮಾಜದ ಮಹಿಳೆಯರೊಂದಿಗೆ ಬೆರತು ನೋವು, ಸಂತೋಷ ಹಂಚಿಕೊಂಡು ಸಂಸ್ಮರಣಾ ದಿನವನ್ನು ಆಚರಿಸಿಕೊಂಡ ಮಂಗಳಮುಖಿಯರು

ಸಮಾಜದ ಮಹಿಳೆಯರೊಂದಿಗೆ ಬೆರತು ನೋವು, ಸಂತೋಷ ಹಂಚಿಕೊಂಡು ಸಂಸ್ಮರಣಾ ದಿನವನ್ನು ಆಚರಿಸಿಕೊಂಡ ಮಂಗಳಮುಖಿಯರು

Spread the love

ಸಮಾಜದ ಮಹಿಳೆಯರೊಂದಿಗೆ ಬೆರತು ನೋವು, ಸಂತೋಷ ಹಂಚಿಕೊಂಡು ಸಂಸ್ಮರಣಾ ದಿನವನ್ನು ಆಚರಿಸಿಕೊಂಡ ಮಂಗಳಮುಖಿಯರು

ಮಂಗಳೂರು: ಮಂಗಳಮುಖಿಯರ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಂಗಳವಾರ ಮಂಗಳಮುಖಿಯರ ಸಂಸ್ಮರಣಾ ದಿನವನ್ನು ಮಂಗಳೂರಿನ ಸಬ್ರಿನಾ ಹೊಗಾರ್ಡ್ ನಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯ 50ಕ್ಕೂ ಅಧಿಕ ಮಹಿಳೆಯರು ಸೇರಿಕೊಂಡು ನಗರದಲ್ಲಿ ಗೌರವಯುತವಾಗಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ಮಂಗಳಮುಖಿಯರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಪರಿವರ್ತನಾ ಚಾರೀಟೇಬಲ್ ಟ್ರಸ್ಟಿನ ಸದಸ್ಯರಾದ ರಮ್ಯಾ, ಭಾನುಪ್ರಿಐಆ, ಝರೀನಾ, ರೇಖಾ, ಸಂಧ್ಯಾ, ಶ್ರಿನೀಧಿ, ಸಂಜನಾ ಹಾಗೂ ಇತರ ಮಂಗಳಮುಖಿಯರು ತಮ್ಮ ಹಿಂದಿನ ಜೀವನ ಹಾಗೂ ಸಮಾಜದಲ್ಲಿ ಅವರುಗಳು ಅನುಭವಿಸಿದ ಕರಾಳ ಯಾತನೆಯನ್ನು ಸಭಿಕರೊಂದಿಗೆ ಹಂಚಿಕೊಂಡರು. ಅದಲ್ಲದೆ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಸದಸ್ಯರಾದ ಬಳಿಕ ಟ್ರಸ್ಟಿನ ಸಂಸ್ಥಾಪಕರಾದ ವಾಯ್ಲೆಟ್ ಪಿರೇರಾ ಅವರು ಮಂಗಳಮುಖಿಯರ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದು ಇದರಿಂದಾಗಿ ಇಂದು ನಾವು ಸಮಾಜದಲ್ಲಿ ಸಾಧಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಮಂಗಳಮುಖಿಯರು ತಮ್ಮ ನೋವಿನ ಕರುಣಾಜನಕ ಕಥೆಯನ್ನು ವಿವರಿಸುತ್ತಿದ್ದರೆ ಅಲ್ಲಿ ಹಾಜರಿದ್ದ ಪ್ರೇಕ್ಷಕರ ಕಣ್ಣಾಲಿಗಳು ತೇವಗೊಂಡವು.

ಮಂಗಳ ಮುಖಿಯರ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಉಷಾ ರಾವ್ ಮತ್ತು ಸಬ್ರಿನಾ ಅವರು ಮಂಗಳಮುಖಿಯರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಮತ್ತು ಬದಲಾಣೆಗಳ ಬಗ್ಗೆ ಸಭಿಕರಿಗೆ ವಿವರಿಸಿದರು. ಮಂಗಳಮುಖಿಯರು ಕೂಡ ಈ ಸಮಾಜದ ಒಂದು ಭಾಗವಾಗಿದ್ದು ಅವರಿಗೂ ಕೂಡ ನಮ್ಮ ಸಮಾಜದಲ್ಲಿ ಸ್ಥಾನಮಾನವನ್ನು ಕಲ್ಪಿಸಲಾಗಿದೆ ಅಲ್ಲದೆ ಒಂದು ಕಾಲದಲ್ಲಿ ಮೂಡನಂಬಿಕೆಯ ಮೂಲಕ ತಮ್ಮ ಅಂಗ ಬದಲಾವಣೆ ಮಾಡಿಕೊಳ್ಳುತ್ತಿದ್ದವರು ಇಂದು ತಂತ್ರಜ್ಞಾನದೊಂದಿಗೆ ಸಮಾಜದ ಮುಖ್ಯವಾಹಿನಿಯ್ಲಿ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದರು.

ಮಂಗಳಮುಖಿಯರು ಸಮಾಜದಲ್ಲಿ ಹಲವಾರು ರೀತಿಯಿಂದ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಅವರಿಗೆ ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ವ್ಯವಸ್ಥೆಯಿಂದ ವಂಚಿರನ್ನಾಗಿ ಮಾಡುವುದು ಇಂದಿಗೂ ಕೂಡ ನಡೆದುಕೊಂಡು ಬಂದಿದೆ. ಇದರ ನಡುವೆಯೂ ಕೂಡ ಮಂಗಳಮುಖಿಯರು ಟ್ರಸ್ಟಿನ ಮೂಲಕ ಈಂದು ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುವ ಚಿಕ್ಕ ಪ್ರಯತ್ನ ಸಾಗಿದೆ.

ಇಷ್ಟೆಲ್ಲಾ ಆದರೂ ಕೂಡ ಮಂಗಳಮುಖಿಯರು ಹಲವಾರು ಸಾಮಾಜಿಕ ಸೇವೆಗಳಿಂದ ವಂಚಿತರಾಗುತ್ತಿದ್ದು, ಸಮಾಜ ಕೂಡ ಅವರ ಬಗ್ಗೆ ಧನಾತ್ಮಕ ಚಿಂತನೆಯನ್ನು ಮೂಡಿಸಿಕೊಳ್ಳ ಬೇಕಾಗಿದೆ ಅವರನ್ನು ಸಮಾಜ ಗೌರವಯುತವಾಗಿ ಸ್ವೀಕರಿಸುವುದರೊಂದಿಗೆ ಅವರು ನಮ್ಮಂತೆಯೇ ಮನುಷ್ಯರು ಎಂಬ ಭಾವನೆ ಬೆಳೆಯಬೇಕಾಗಿದೆ ಮತ್ತು ಅವರೂ ಕೂಡ ಸಾಮಾನ್ಯ ಮಹಿಳೆಯರಂತೆ ನಿರ್ಭೀತಿಯಿಂದ ಬದುಕು ಕಟ್ಟಿಕೊಳ್ಳಬೇಕಾಗಿದೆ ಎಂದರು.

ನವೆಂಬರ್ 20ನ್ನು ವಿಶ್ವ ಮಂಗಳ ಮುಖಿಯರ ಸಂಸ್ಮರಣಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಕೊಲೆಯಾಗಿ ಸಾವನಪ್ಪಿದ ಮಂಗಳಮುಖಿಯರನ್ನು ಅಂದು ಸ್ಮರಿಸಲಾಗುತ್ತದೆ. ಅಲ್ಲದೆ ಅಂದಿನ ದಿನ ಮಂಗಳಮುಖಿಯರನ್ನು ಸಮಾಜ ಗೌರವದಿಂದ ನಡೆಸಿಕೊಳ್ಳಬೇಖು ಎಂದು ಜಾಗೃತಿ ಮೂಡಿಸುವ ದಿನವಾಗಿದೆ.

2018 ಅಕ್ಟೋಬರ್ 1 ರವರೆಗೆ ಸುಮಾರು 368 ಮಂಗಳಮುಖಿಯರು ಒಂದೊಂದೊ ಕಾರಣಗಳಿಗಾಗಿ ಕೊಲೆಯಾಗಿದ್ದು ಅವರನ್ನು ಸ್ಮರಿಸುವ ಸಲುವಾಗಿ ಈ ದಿನಾಚರಣೆಯನ್ನು ಆಚರಿಸಬೇಕು ಎಂದರು.

ಇದೇ ವೇಳೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆಯ ವಿಜೇತರಾದ ಸಂಜನಾ ಮತ್ತು ಶ್ರಿನಿಧಿ ಮತಾನಾಡಿ ಈ ಮೊದಲು ನಮಗೆ ಎಲ್ಲಿಯೂ ಕೂಡ ಸಮಾಜದೊಂದಿಗೆ ಬದುಕಲು ಅವಕಾಶ ಸಿಕ್ಕಿರಲಿಲ್ಲ ಆದರೆ ಇಂದು ನಾವು ಪರಿವರ್ತನಾ ಚಾರಿಟೀಬಲ್ ಟ್ರಸ್ಟಿನ ಮೂಲಕ ಆಯೋಜಿಸಿದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ನಮ್ಮ ಪ್ರತಿಭೆಗಳಿಗೆ ಒಂದು ಗೌರವವನ್ನು ನೀಡುವ ಕೆಲಸವನ್ನು ಪರಿವರ್ತನಾ ಟ್ರಸ್ಟ ಮತ್ತು ವಾಯ್ಲೆಟ್ ಪಿರೇರಾ ಮಾಡಿದ್ದು, ಇಂತಹ ಒಂದು ಅವಕಾಶವನ್ನು ಕಲ್ಪಿಸಿಕೊಟ್ಟ ಟ್ರಸ್ಟಿಗೆ ಅಭಿನಂದನೆಗಳು. ಇಷ್ಟೇ ಅಲ್ಲದೆ ಟ್ರಸ್ಟಿನ ಮೂಲಕ ಮಂಗಳಮುಖಿಯರಿಗೆ ಇಂದು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯೂಟಿಶಿಯನ್ ಕೋರ್ಸ್ ಇನ್ನಿತರ ಹಲವಾರು ಅವಕಾಶಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಿದ್ದು ಈ ಮೂಲಕ ನಾವು ಕೂಡ ಸಮಾಜದಲ್ಲಿ ಗೌರವದ ಬದುಕನ್ನು ವ್ಯಯಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.

ಇದೇ ವೇಳೆ ಮಾತನಾಡಿದ ಟ್ರಸ್ಟಿನ ಸಂಸ್ಥಾಪಕಿ ವಾಯ್ಲೆಟ್ ಪಿರೇರಾ ಅವರು 2016 ಅಗೋಸ್ತ್ 30 ರಂದು ಮಂಗಳೂರಿನ ಇತಿಹಾಸದಲ್ಲಿ ವಿಶೇಷ ದಿನವಾಗಿದ್ದು ಅಂದು ಸಮಾಜದಲ್ಲಿ ತುಳಿತಕ್ಕೊಳಗಾದ ಮಂಗಳಮುಖಿಯರ ಅಭ್ಯುದಯಕ್ಕಾಗಿ ಟ್ರಸ್ಟ್ ಆರಂಭಗೊಂಡಿತು. ಮಂಗಳಮುಖಿಯರು ಸಮಾಜದ ಮುಖ್ಯವಾಹಿನಿಗೆ ಬಂದು ಸಮಾಜದಲ್ಲಿ ಅವರಲ್ಲಿ ಬದಲಾವಣೆಯನ್ನು ಕಾಣಬೇಕು ಎಂಬ ಉದ್ದೇಶದಿಂದ ಟ್ರಸ್ಟ್ ಆರಂಭಗೊಂಡಿತು. ಸಮಾಜ ಅವರನ್ನು ಇತರರಂತೆ ಸಮಾನವಾಗಿ ಕಾಣಬೇಕು ಅಲ್ಲದೆ ಅವರುಗಳು ಕೂಡ ಸಮಾಜದಲ್ಲಿ ಸ್ವಾಭಿಮಾನಿಗಳಾಗಿ ಬದುಕು ಸಾಗಿಸುವ ನಿಟ್ಟಿನಲ್ಲಿ ಟ್ರಸ್ಟ್ ಪ್ರಯತ್ನ ಮಾಡುತ್ತಾ ಬಂದಿದೆ. ಈಗಾಗಲೇ ಟ್ರಸ್ಟಿನ ಮೂಲಕ ಆಧಾರ್ ಕಾರ್ಡ್, ರೇಶನ್ ಕಾರ್ಡ್, ಮತದಾರರ ಗುರುತಿನ ಚೀಟಿ ಮಾಡಿಕೊಟ್ಟಿರುವುದರೀಂದ ಅವರುಗಳು ಧ್ಯೇರ್ಯದಿಂದ ಸಮಾಜದಲ್ಲಿ ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತಿದೆ. ಸಮಾಜ ಕೂಡ ಈ ಮಂಗಳಮುಖಿಯರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ, ಅವರುಗಳಿಗೆ ಉದ್ಯೋಗ ಹಾಗೂ ಇತರ ಸೌಲಬ್ಯಗಳನ್ನು ಪಡೆಯುವಲ್ಲಿ ಟ್ರಸ್ಟಿನ ಜೊತೆಗೆ ಕೈಜೋಡಿಸಬೇಕಾಗಿದೆ ಎಂದರು.

ಸಂವಾದದ ಬಳಿಕ ಎಲ್ಲರೂ ಸೇರಿ ಮೇಣದ ಬತ್ತಿಗಳನ್ನು ಉರಿಸುವುದರ ಮೂಲಕ ಮಂಗಳಮುಖಿಯರ ಸಂಸ್ಮರಣಾ ದಿನವನ್ನು ಆಚರಿಸಲಾಯಿತು.


Spread the love

Exit mobile version