ಸಮಾಜ ಕಾರ್ಯ ಕೋರ್ಸ್ ಬದುಕಿಗೆ ಅತ್ಯಂತ ಪ್ರಸ್ತುತವಾದ ಶಿಕ್ಷಣ – ಪ್ರೊ. ರಾಜಶೇಖರ್ ಹೆಬ್ಬಾರ್
ಮಂಗಳೂರು : ಲೈಂಗಿಕ ಅಲ್ಪಸಂಖ್ಯಾತರನ್ನು ಮನುಷ್ಯರಂತೆ ಕಾಣಬೇಕು. ಅವರಿಗೂ ಎಲ್ಲರಂತೆ ಮನಸ್ಸಿದೆ, ಭಾವನೆಗಳಿವೆ. ಅದನ್ನು ನಾವು ಗೌರವಿಸಬೇಕು, ಸಮಾಜಕಾರ್ಯ ಶಿಕ್ಷಣ ಇಂಥ ನಿರ್ಲಕ್ಷಿತ ಗುಂಪುಗಳ ಕುರಿತು ಭೋದಿಸುತ್ತದೆ. ಬದುಕಿಗೆ ಅತ್ಯಂತ ಪ್ರಸ್ತುತವಾದ ಶಿಕ್ಷಣ ನೀಡುವಲ್ಲಿ ಸಮಾಜಕಾರ್ಯ ಕೋರ್ಸಿಗೆ ಸರಿಸಾಟಿಯಾದ ಕೋರ್ಸ್ ಇನ್ನೊಂದಿಲ್ಲ ಎಂಬುವುದಾಗಿ ಅವರು ಡಾ.ಪಿ ದಯಾನಂದ ಪೈ -ಪಿ ಸತೀಶ್ ಪೈ ಸ.ಪ್ರ.ದ.ಕಾ. ರಥಬೀದಿ ಇದರ ಸಮಾಜ ಕಾರ್ಯ ಹಾಗೂ ಸಮಾಜಶಾಸ್ತ್ರ ವಿಭಾಗದಿಂದ ಆಗಸ್ಟ್ 18 ರಂದು ಆಯೋಜಿಸಲ್ಪಟ್ಟ ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರೇಶ್ಮಾ, ಸಂಶೋಧನಾ ವಿದ್ಯಾರ್ಥಿ ಮತ್ತು ಪತ್ರಕರ್ತೆ ಮಾತನಾಡಿ ಲೈಂಗಿಕ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವಲ್ಲಿ ನಾವೆಲ್ಲ ಪ್ರಯತ್ನಿಸಬೇಕು. ಅವರ ಹಕ್ಕುಗಳನ್ನು ರಕ್ಷಿಸುವ ಪ್ರಯತ್ನ ಸಾರ್ವಜನಿಕ ಹಾಗೂ ಸರಕಾರದ ಮಟ್ಟದಲ್ಲಿ ನಡೆಯಬೇಕು ಎಂದು ಹೇಳಿದರು.
ಲೈಂಗಿಕ ಅಲ್ಪಸಂಖ್ಯಾತರಾದ ನವಸಹಜ ಸಮುದಾಯ ಸಂಘಟನೆಯ ಅಧ್ಯಕ್ಷರಾದ ಪ್ರವೀಣ ನಿಖಿಲಾ ಸಮಾಜದಲ್ಲಿ ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯದ ಕುರಿತು ವಿವರಿಸಿದರು, ಲೈಂಗಿಕ ಅಲ್ಪಸಂಖ್ಯಾತರಾದ ರೇಖಾ ಅವರು ಮಾತನಾಡಿ, ನಮ್ಮನ್ನು ಗೌರವಿಸಿ, ಅವಹೇಳನ ಮಾಡಿದಿರಿ, ಎಂದು ಮನವಿ ಮಾಡಿದರು. ನಂತರ ವಿದ್ಯಾರ್ಥಿಗಳು ಅವರೊಂದಿಗೆ ಸಂವಾದ ನಡೆಸಿ ತಮ್ಮ ಸಂಶಯಗಳನ್ನು ಬಗೆಹರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕರ ಡಾ.ಶಿವರಾಮ ಪಿ, ಮುಖ್ಯಸ್ಥರು ಹಿಂದಿ ವಿಭಾಗ, ಡಾ. ನಾಗವೇಣಿ ಮಂಚಿ ಕನ್ನಡ ವಿಭಾಗ ಹಾಗೂ ಪ್ರೋ. ಶೇಷಪ್ಪ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ಭಾಗವಹಿಸಿದ್ದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಅರುಣ ಕುಮಾರಿ ಪ್ರಾಸ್ತಾವಿಕವಾಗಿ ಮಾತಾನಾಡಿದರು, ಎಂ ಎಸ್ ಡಬ್ಲ್ಯು ವಿದಾರ್ಥಿನಿ ಕುಮಾರಿ ಪೂಜಾ ಸ್ವಾಗತಿಸಿದರು, ರಂಜಿತ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು, ಕು. ಚೇತನ ಲಕ್ಷ್ಮಿ ವಂದಿಸಿದರು ಹಾಗೂ ಕು. ರೇಶ್ಮಾ ಕಾರ್ಯಕ್ರಮ ನಿರ್ವಹಿಸಿದರು.