ಸರಕಾರದಿಂದ ಶುದ್ದ ಕುಡಿಯುವ ನೀರು ಪೂರೈಕೆ -ಶಾಸಕ ಮೊಯ್ದಿನ್ ಬಾವಾ

Spread the love

ಸರಕಾರದಿಂದ ಶುದ್ದ ಕುಡಿಯುವ ನೀರು ಪೂರೈಕೆ -ಶಾಸಕ ಮೊಯ್ದಿನ್ ಬಾವಾ

ಮಂಗಳೂರು: ಕರ್ನಾಟಕ ಸರಕಾರ ಶುದ್ದ ಕುಡಿಯುವ ನೀರು ಪೂರೈಸಲು ಆದ್ಯತೆ ನೀಡಿದ್ದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಥಮ ಘಟಕ ಆರಂಭಿಸಲಾಗಿದೆ ಎಂದು ಶಾಸಕ ಮೊಯ್ದಿನ್ ಬಾವಾ ಹೇಳಿದರು.

ವಾಮಂಜೂರು ಬೊಂಡಂತಿಲ ನಿರಾಳ ಬಳಿ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ನಿರ್ಮಿಸಲಾದ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. 2 ರೂ. ನಾಣ್ಯ ಹಾಕಿದರೆ 20 ಲೀಟರ್ ಶುದ್ದ ಕುಡಿಯುವ ನೀರು ಸಿಗುತ್ತದೆ. ಇದರ ಸದುಪಯೋಗ ಪಡೆದು ಬೆಳೆಯುವ ಮಕ್ಕಳಿಗೆ ಶುದ್ದ ನೀರು ಕುಡಿಸುವ ಮೂಲಕ ಆರೋಗ್ಯ ಕಾಪಾಡಲು ಹೆಚ್ಚಿನ ಮುತುವರ್ಜಿ ವಹಿಸ ಬೇಕು ಎಂದರು. ನುಡಿದಂತೆ ನಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದಾರೆ. ಇದೀಗ ಪಂಚಾಯತ್ ವ್ಯಾಪ್ತಿಯಲ್ಲಿ ಶುದ್ದ ಕುಡಿಯುವ ನೀರು ಸಿಗುಂತಾಗಲು ರಾಜ್ಯದಾದ್ಯಂತ ಇಂತಹ ಘಟಕಗಳು ಹಂತ ಹಂತವಾಗಿ ನಿರ್ಮಾಣವಾಗಲಿವೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಸೀಮಾ ಮೆಲ್ವಿನ್ ಡಿಸೋಜ, ತಾಲೂಕು ಪಂಚಾಯತ್ ಸದಸ್ಯ ಶ್ರೀಧರ್, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಾಂಬ್ಳಿ, ಹಮೀದ್, ಸದಾಶಿವ ಶೆಟ್ಟಿ, ಗಾಡ್ವಿನ್, ರೋಹಿತ್, ಶಶಿಕಲಾ ಶೆಟ್ಟಿ, ಮೈಕಲ್, ಮಾಜಿ ಜಿ.ಪಂ. ಸದಸ್ಯರಾದ ಮೆಲ್ವಿನ್ ಡಿಸೋಜ, ಯಶೋಧ, ಗುತ್ತಿಗೆದಾರ ಅಶೋಕ್ ಬಾಲಿ, ಎಂಜಿನಿಯರ್ ರಕ್ಷಿತ ಮತ್ತಿತರರು ಉಪಸ್ಥಿತರಿದ್ದರು. ಚಾಲ್ರ್ಸ್ ಪಾಯಸ್ ಕಾರ್ಯಕ್ರಮ ನಿರೂಪಿಸಿದರು.

 


Spread the love