ಸರಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾದ ಲೋಬೊ- ಯೆನಪೋಯ ಆಸ್ಪತ್ರೆಯಲ್ಲಿ ಕೋವಿಡ್ – 19 ಪ್ರಯೋಗಾಲಯಕ್ಕೆ ಮಾನ್ಯತೆ

Spread the love

ಸರಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾದ ಲೋಬೊ- ಯೆನಪೋಯ ಆಸ್ಪತ್ರೆಯಲ್ಲಿ ಕೋವಿಡ್ – 19 ಪ್ರಯೋಗಾಲಯಕ್ಕೆ ಮಾನ್ಯತೆ

ಮಂಗಳೂರು: ಮಾಜಿ ಶಾಸಕರಾದ ಜೆ.ಆರ್.ಲೋಬೊರವರು ಮಂಗಳೂರಿನ ಇತರ ಆಸ್ಪತ್ರೆಗಳನ್ನು ಕೋವಿಡ್ ಪರೀಕ್ಷಾ ಕೇಂದ್ರಗಳನ್ನಾಗಿ ಮಾಡಲು ಅವಕಾಶ ನೀಡಬೇಕು ಎಂದು ತಮ್ಮ ಬೇಡಿಕೆಯನ್ನು ಪತ್ರಿಕಾ ಗೋಷ್ಠಿ ನಡೆಸುವ ಮೂಲಕ ಸರಕಾರದ ಗಮನಕ್ಕೆ ತಂದಿದ್ದರು.

ಅವರ ಬೇಡಿಕೆಯಂತೆ ಇಂದು ಮೇ 9 ರಂದು ಸಾಕಷ್ಟು ಮುಂದುವರಿದ ತಂತ್ರಜ್ಞಾನದ ಪ್ರಯೋಗಾಲಯವುಳ್ಳ ಮಂಗಳೂರಿನ ಹೆಸರಾಂತ ಆಸ್ಪತ್ರೆ “ಯೇನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ”ಗೆ “ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ” ನಿಂದ “ಕೋವಿಡ್ -19” ನ ಪ್ರಯೋಗ ಕೇಂದ್ರವಾಗಿ ಕಾರ್ಯ ನಿರ್ವಹಿಸಲು ಮಾನ್ಯತೆ ದೊರಕಿದೆ

ಅದೇ ರೀತಿ ಮಾಜಿ ಶಾಸಕ ಜೆ.ಆರ್ .ಲೋಬೋರವರ ದೂರದೃಷ್ಟಿಯ ಚಿಂತನೆಯಂತೆ ಮಂಗಳೂರಿನ ಇನ್ನೂ ಕೆಲವು ಆಸ್ಪತ್ರೆಗಳ ಪ್ರಯೋಗಾಲಯಗಳನ್ನು ಸರಕಾರವು ಕೋವಿಡ್ ಪರೀಕ್ಷಾ ಕೇಂದ್ರವನ್ನಾಗಿ ಪರಿವರ್ತಿಸಿದರೆ ದಕ್ಷಿಣ ಕನ್ನಡ ಆಸುಪಾಸಿನ ಎಲ್ಲಾ ಜಿಲ್ಲೆಗಳಿಗೂ ತುಂಬಾ ಅನುಕೂಲವಾಗಲಿದೆ ಎಂದು ಮಾಜಿ ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.


Spread the love