Home Mangalorean News Kannada News ಸರಕಾರದ ಹುಳುಕನ್ನು ಬರೆಯುವವರ ವಿರುದ್ಧ ಸಿಎಂ ದ್ವೇಷ ಸಾಧನೆ – ಶಾಸಕ ಕಾಮತ್

ಸರಕಾರದ ಹುಳುಕನ್ನು ಬರೆಯುವವರ ವಿರುದ್ಧ ಸಿಎಂ ದ್ವೇಷ ಸಾಧನೆ – ಶಾಸಕ ಕಾಮತ್

Spread the love

ಸರಕಾರದ ಹುಳುಕನ್ನು ಬರೆಯುವವರ ವಿರುದ್ಧ ಸಿಎಂ ದ್ವೇಷ ಸಾಧನೆ – ಶಾಸಕ ಕಾಮತ್

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಸರಕಾರದ ದುರಾಡಳಿತದ ಬಗ್ಗೆ ಬರೆದ ತಕ್ಷಣ ಅಂಥವರನ್ನು ಬಂಧಿಸಿ ಮಾನಸಿಕವಾಗಿ ಪೀಡಿಸುವುದನ್ನು ರಾಜ್ಯ ಸರಕಾರ ಕೈ ಬಿಡಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ರಾಜ್ಯದ ಸಮ್ಮಿಶ್ರ ಸರಕಾರ ಪ್ರತಿಯೊಂದರಲ್ಲಿಯೂ ಎಡವುತ್ತಿದೆ. ಆಂತರಿಕ ಕಚ್ಚಾಟದಲ್ಲಿಯೇ ದಿನ ದೂಡುತ್ತಿದ್ದಾರೆ. ಸಿಎಂ ರೆಸಾರ್ಟ್ ನಲ್ಲಿ ಇದ್ದಾರೆ. ಮಂತ್ರಿ ರೇವಣ್ಣನವರು ಹತ್ತನೇ ತರಗತಿಯ ಫಲಿತಾಂಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿನ್ನಡೆಗೆ ಬಿಜೆಪಿಗೆ ಜನ ಮತ ಕೊಟ್ಟಿದ್ದೇ ಕಾರಣ ಎನ್ನುವ ಬಾಲಿಶ ಹೇಳಿಕೆ ಸಹಿತ ಹೀಗೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೆ ನಿರ್ಲಕ್ಷ್ಯ. ವಹಿಸಿ ಮಕ್ಕಳ ರಾಜಕೀಯ ಭವಿಷ್ಯಕ್ಕೆ ಹೆಚ್ಚು ಸಮಯ ನೀಡುವ ಮುಖ್ಯಮಂತ್ರಿಗಳು ಇತ್ತೀಚಿನ ದಿನಗಳಲ್ಲಿ ತಮ್ಮ ವಿರುದ್ಧ ಬರೆಯುವವರ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ. ಬಲಪಂಥಿಯ ಬರಹಗಾರರ ಬಗ್ಗೆ ಪೂರ್ವದ್ವೇಷ ಹೊಂದಿರುವ ಕುಮಾರಸ್ವಾಮಿ ಸರಕಾರ ತಮ್ಮ ಬಲಹೀನತೆ ಮುಚ್ಚಿಸಲು ಆಯ್ದುಕೊಂಡಿರುವ ಕ್ರಮ ಖಂಡನೀಯವಾಗಿರುವುದು. ಕುಮಾರಸ್ವಾಮಿಯವರಿಗೆ,ರೇವಣ್ಣ ಅವರಿಗೆ,ಜೆಡಿಎಸ್ ಮತ್ತು ಕಾಂಗ್ರೇಸ್ ಮುಖಂಡರಿಗೆ ತೀರ್ಥ ಕ್ಷೇತ್ರಗಳ ಭೇಟಿ ಮಾಡಿ ಹರಕೆ ತೀರಿಸಲು, ಆರೋಗ್ಯ ವರ್ಧಿಸಲು ಕರಾವಳಿ ಬೇಕು.ಆದರೆ ಕರಾವಳಿ ಜನರ ಬಗ್ಗೆ ಕುಮಾರ ಸ್ವಾಮಿಯವರು ಅಥವ ರೇವಣ್ಣ ಅವರು ನಿರ್ಲಕ್ಷ್ಯ ವಹಿಸುವ ಮೂಲಕ ನಮ್ಮ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ಹೊಂದಿದ್ದಾರೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.


Spread the love

Exit mobile version