ಸರಕಾರ ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಿಸಬೇಕು: ಪ್ರಖ್ಯಾತ್ ಶೆಟ್ಟಿ

Spread the love

ಸರಕಾರ ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಿಸಬೇಕು: ಪ್ರಖ್ಯಾತ್ ಶೆಟ್ಟಿ

ಉಡುಪಿ: ಕಳೆದ ಒಂದು ತಿಂಗಳಿನಿಂದ ಲಾಕ್ಡೌನ್ ಹಿನ್ನೆಲೆಯಲ್ಲಿ ಜನ ಮನೆಯಲ್ಲಿದ್ದರೆ ಆಶಾ ಕಾರ್ಯಕರ್ತೆಯರು ಬೀದಿಯಲ್ಲಿದ್ದಾರೆ. ಪ್ರತಿ ಗ್ರಾಮದಲ್ಲಿಯೂ ಸುಡು ಬಿಸಿಲಿನಲ್ಲಿಯೂ ಕೊರೊವಾ ವೈರಸ್ ವಿರುದ್ದ ಹೋರಾಟದಲ್ಲಿ ಸಮಗ್ರವಾಗಿ ತೊಡಗಿಸಿಕೊಂಡು, ಜಾಗೃತಿ ಮೂಡಿಸುತ್ತಿರುವ ಅಶಾ ಕಾರ್ಯಕರ್ತೆಯರಿಗೆ ಸರಕಾರ ಮಾಸಿಕ ವೇತನವನ್ನು ಹೆಚ್ಚಿಸಿ ಅವರಿಗೆ ಇನ್ನಷ್ಟು ಪ್ರೋತ್ಸಾಹವನ್ನು ನೀಡಬೇಕಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷಪ್ರಖ್ಯಾತ್ ಶೆಟ್ಟಿ ಅಗ್ರಹಿಸಿದ್ದಾರೆ.

ಗುರುವಾರ ಅವರು ತೆಂಕನಿಡಿಯೂರಿನಲ್ಲಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ತೆಂಕನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ ಮಾಡಿ, ಆಹಾರ ಕಿಟ್ಗಳನ್ನು ವಿತರಿಸಿ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಮಾಸ್ಕ್ ವಿತರಿಸಿದರು. ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಯತೀಶ್ ಕರ್ಕೇರ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗೋಪಾಲ ಕೃಷ್ಣ ಶೆಟ್ಟಿ ಉದ್ಯಮಿ ರಮೇಶ್, ತಾಪಂ ಸದಸ್ಯ ಧನಂಜಯ ಕುಂದರ್, ಪಂಚಾಯತ್ ಸದಸ್ಯ ಸತೀಶ್ ನಾಯ್ಕ್, ಕಲ್ಪನಾ ಸುರೇಶ್ ,ವೆಂಕಟೇಶ್ ಕುಲಾಲ್, ಮೆರೀಟಾ ಡಿಸೋಜಾ, ನಾರಾಯಣ ಅಂಚನ್, ರಾಜೇಶ್ ನಾಯಕ್, ಮಧು ಸೂದನ್ ಪೂಜಾರಿ, ಸುಮಿತ್, ಉದಯ, ವಿಶ್ವನಾಥ್ ಶೆಟ್ಟಿ ಸುರೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.


Spread the love