ಸರಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಪೋಲಿಸರು

Spread the love

ಸರಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಪೋಲಿಸರು

ಮಂಗಳೂರು: ಮಂಗಳೂರು ನಗರದ ಮಾಲ್ ಗಳ ಬಳಿಯಲ್ಲಿ ಓಡಾಡುವ ವಿದ್ಯಾರ್ಥಿಗಳನ್ನು ಹಾಗೂ ಯುವ ಜನಾಂಗವನ್ನು ಗುರಿಯನ್ನಾಗಿಟ್ಟುಕೊಂಡು ಚಿನ್ನ ಹಾಗೂ ಹಣವನ್ನು ಸುಲಿಗೆ ಮಾಡುತ್ತಿದ್ದ ತಂಡವನ್ನು ಪೋಲಿಸರು ಬಂಧಿಸಿದ್ದಾರೆ.

ನಗರ ಪೋಲಿಸ್ ಆಯುಕ್ತ ವಿಪುಲ್ ಕುಮಾರ್ ಅವರ ಮಾರ್ಗದರ್ಶನದಂತೆ ಹನುಮಂತರಾಯ ಪೋಲಿಸ್ ಉಪಾಯುಕ್ತ, ಉಮಾ ಪ್ರಶಾಂತ್ ಹಾಗೂ ಎಂ ಜಗದೀಶ್ ಇವರುಗಳ ನಿರ್ದೇಶನದಂತೆ ಉತ್ತರ ಪೋಲಿಸ್ ಠಾಣ ಪೋಲಿಸ್ ನಿರೀಕ್ಷಕರಾದ ಯೋಗಿಶ್ ಕುಮಾರ್ ಬಿ ಸಿ ರವರ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಿ ಉತ್ತರ ಪೋಲಿಸ್ ಠಾಣಾ ಮೊಕದ್ದಮೆಗೆ ಸಂಬಂಧಿಸಿದಂತೆ ಆಸೀಫ್ ಹುಸೈನ್ ಮತ್ತು ಅಪ್ಸರ್ ಅಹಮ್ಮದ್ ಎಂಬವರನ್ನು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

 

ಬಂಧಿತರಿಂದ ಮೂರು ಪ್ರಕರಣಗಳಲ್ಲಿ ಸುಲಿಗೆ ಮಾಡಿದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.


Spread the love