ಸರಗೂರಿನಲ್ಲಿ ಭಕ್ತಿಭಾವದ ಸತ್ಯಪ್ಪ ದೇವರ ಕೊಂಡೋತ್ಸವ

oppo_0
Spread the love

ಸರಗೂರಿನಲ್ಲಿ ಭಕ್ತಿಭಾವದ ಸತ್ಯಪ್ಪ ದೇವರ ಕೊಂಡೋತ್ಸವ

ಮೈಸೂರು: ಜಿಲ್ಲೆಯ ಸರಗೂರು ಪಟ್ಟಣದ 7ನೇ ವಾರ್ಡಿನಲ್ಲಿರುವ ಸತ್ಯಪ್ಪ ದೇವರ ಕೊಂಡೋತ್ಸವವು ಗಾಣಿಗ ಸಮಾಜದ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆದು ಭಕ್ತರು ಭಕ್ತಿ ಮೆರೆದರು.

ಕೊಂಡೋತ್ಸವದ ಅಂಗವಾಗಿ ಮೊದಲು ಸತ್ಯಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮುಂಭಾಗದಲ್ಲಿ ಕೊಂಡಕ್ಕೆ ಸೌದೆಗಳನ್ನು ಹಾಕಿ ಬೆಂಕಿಯನ್ನು ಹೊತ್ತಿಸಿ ಸೌದೆಯೆಲ್ಲ ಕೆಂಡವಾದ ನಂತರ ಗಾಣಿಗ ಸಮಾಜದ ಎಲ್ಲಾ ಮುಖಂಡರುಗಳು ಸಮೀಪದ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿದರು.

ಈ ವೇಳೆ ಸರಗೂರಿನ ನಾಡು ದೇಶದ ಯಜಮಾನರಾದ ಎಸ್.ಎಸ್ ಗಣೇಶ, ಶ್ರೀಕಂಠಸ್ವಾಮಿ ಇತರರು ದೇವಸ್ಥಾನದಲ್ಲಿರುವ ಚಂದ್ರಮೌಳೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಗಾಣಿಗ ಸಮಾಜದ ಸಮಾಜದ ಮುಖಂಡರಿಗೆ ನೀಡಿದ ನಂತರ ಉತ್ಸವ ಮೂರ್ತಿಯೊಂದಿಗೆ ಕಪಿಲ ನದಿಗೆ ತೆರಳಿ ಹೊಳೆಯಲ್ಲಿ ಗಂಗೆಗೆ ವಿಶೇಷ ಪೂಜೆ ಸಲ್ಲಿಸಿದರು.

ಆ ನಂತರ ತಮಡಪ್ಪರವರಾದ ಮಹದೇವಪ್ಪ ಕಳಸ ಹೊತ್ತು ಮಂಗಳ ವಾದ್ಯಗಳ ಮುಖೇನ, ಮೆರವಣಿಗೆ ಮೂಲಕ ಸತ್ಯಪ್ಪ ದೇವಾಲಯದ ಹತ್ತಿರ ಬಂದು ಪೂಜೆ ಸಲ್ಲಿಸಿ ಉತ್ಸವ ಮೂರ್ತಿಯನ್ನು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಮಾಡಿ ನಂತರ ಮೊದಲು ಕೊಂಡವನ್ನು ಅವರು ಹಾಯ್ದರೆ ಅವರೊಂದಿಗೆ ಹರಕೆ ಹೊತ್ತ ಇನ್ನಿತರರು ಕೊಂಡವನ್ನು ಹಾಯ್ದು ಭಕ್ತಿಯನ್ನು ಸಮರ್ಪಿಸಿದರು.

ಈ ಸಂದರ್ಭದಲ್ಲಿ ಗಾಣಿಗ ಸಮಾಜದ ಯಜಮಾನರಾದ ಸೋಮಶೆಟ್ಟಿ, ಮಾದೇವಶೆಟ್ಟಿ, ಗಾಣಿಗ ಸಮಾಜದ ಅಧ್ಯಕ್ಷ ವೆಂಕಟರಾಮು, ಶಿವಲಿಂಗಶೆಟ್ಟಿ, ಗುತ್ತಿಗೆದಾರರಾದ ಶಿವಣ್ಣ, ನಂಜುಂಡ, ಬಿ.ಎಸ್.ಎನ್.ಎಲ್.ನಾಗರಾಜು, ಖಜಾಂಚಿ ಕೆಂಡಗಣ್ಣ, ನಾಗಶೆಟ್ಟಿ, ಜೈರಾಮ್, ಬಸವರಾಜು, ಹುಚ್ಚಪ್ಪ, ಸಮಾಜದ ಯಜಮಾನರು ಹಾಗೂ ಯುವ ಮುಖಂಡರು ಹಾಗೂ ಇನ್ನಿತರ ಸಮಾಜದವರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.


Spread the love
Subscribe
Notify of

0 Comments
Inline Feedbacks
View all comments