ಸರಣಿ ಅಫಘಾತಕ್ಕೆ ಕಾರಣವಾದ ಮರಳನ್ನು ತೆರವುಗೊಳಿಸಿದ ಟ್ರಾಫಿಕ್ ಪೊಲೀಸರು
ಮಂಗಳೂರು: ರಸ್ತೆಯಲ್ಲಿ ಮರಳು ಬಿದ್ದು ಸರಣಿ ಅಫಘಾತಕ್ಕೆ ಕಾರಣವಾದ ಮರಳನ್ನು ಟ್ರಾಫಿಕ್ ಪೊಲೀಸರೇ ತೆರವುಗೊಳಿಸಿ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಘಟನೆ ನಗರದ ಎಜೆ ಹಾಸ್ಪಿಟಲ್ ಬಳಿ ನಡೆದಿದೆ.
ಬುಧವಾರ ಮರಳು ಸಾಗಿಸುತ್ತಿದ್ದ ಟಿಪ್ಪರೊಂದು ತಿರುವಿನ್ಲಲಿ ಚಾಲಕನ ನಿಯಂತ್ರಣ ತಪ್ಪಿ ಇನ್ನೊಂದು ಟಿಪ್ಪರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಮತ್ತೊಂದು ಟಿಪ್ಪರಿಗೆ ಕೂಡ ಡಿಕ್ಕಿ ಹೊಡೆದಿದೆ. ಈ ವೇಳೆ ಟಿಪ್ಪರೊಂದರ ಬಾಗಿಲು ತೆರೆದುಕೊಂಡ ಪರಿಣಾಮ ಅದರಲ್ಲಿದ್ದ ಮರಳು ಸಂಪೂರ್ಣವಾಗಿ ರಸ್ತೆಗೆ ಚೆಲ್ಲಲ್ಪಟಿದೆ. ಘಟನೆಯಿಂದ ಮುಂದೆ ಅಫಘಾತಗಳನ್ನು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ ಪೊಲೀಸರು ರಸ್ತೆಯಲ್ಲಿದ್ದ ಸಂಪೂರ್ಣ ಮರಳನ್ನು ಸ್ವತಃ ತೆರವುಗೊಳಿಸಿದ್ದಾರೆ.
ಈ ವೇಳೆ ಸ್ಥಳದಲ್ಲಿ ನೂರಾರು ಜನರು ಸೇರಿದ್ದು, ಪೊಲೀಸರು ತಮ್ಮಸ್ಟಕ್ಕೆ ರಸ್ತೆಯಲ್ಲಿನ ಮರಳನ್ನು ತೆರವುಗೊಳಿಸುವುದರ ಮೂಲಕ ನಡೆಯುವ ಅಫಘಾತಗಳನ್ನು ತಡೆದಿದ್ದಾರೆ.