ಸರಸ್ವತಿ ನದಿಯ ಹರಿಯುವಿಕೆ ಮತ್ತು ನಾಗರಿಕತೆ ಕಿರು ಚಿತ್ರ ಪ್ರಾತ್ಯಕ್ಷಿಕೆ – ದರ್ಶನ
ಭಾರತೀಯ ಪರಂಪರೆ ಮತ್ತು ಸಂಸ್ಕøತಿಯಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆದ ಸರಸ್ವತಿ ನದಿಯ ಉಗಮ, ಹರಿಯುವಿಕೆ ಹಾಗೂ ಇತ್ತೀಚಿಗಿನ ಸೆಟ್‍ಲೈಟ್ ತಂತ್ರ ವಿಜ್ಞಾನದಿಂದ ದಾಖಲಿಸಿರುವ ಭೂಮಿಯಡಿಯ ಹರಿವುಗಳ ವೈಜ್ಞಾನಿಕ ಬಗ್ಗೆ ಸುಮಾರು 55 ವರ್ಷಗಳಿಂದ ಸಂಶೋಧನೆ ನಡೆಸಿದ ಮುಂಬಯಿಯ ಶ್ರೀ ಜಗದೀಶ ಗಾಂಧಿ ಇವರಿಂದ ನದಿಯ ಬಗ್ಗೆ, ಉಪನ್ಯಾಸ ಸಂವಾದ ಹಾಗೂ ಸರಸ್ವತಿ ನದಿಯ ಹರಿವಿನ ಬಗ್ಗೆ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯಿತು.
ವಿಶ್ವ ಕೊಂಕಣಿ ಸ್ಥಾಪಕ ಅಧ್ಯಕ್ಷ, ವಿಶ್ವ ಕೊಂಕಣಿ ಸರದಾರ ಬಸ್ತಿ ವಾಮನ ಶೆಣೈ, ಶಾಲೆಯಲ್ಲಿ ಕೊಂಕಣಿ ಕಲಿಕೆ ಯೋಜನಾ ಸಂಚಾಲಕ ಡಾ. ಕೆ. ಮೋಹನ ಪೈ, ಖ್ಯಾತ ಉಡುಪಿಯ ಕೃಷಿಕ ಶ್ರೀ ಆರ್. ಪಿ. ಕಾಮತ್, ಕೊಂಕಣಿ ಸಾಂಸ್ಕøತಿಕ ಸಂಘ ಅಧ್ಯಕ್ಷ ಶ್ರೀ ಅರುಣ ಜಿ. ಶೇಠ್, ಕೊಂಕಣಿ ಅಧ್ಯಯನ ಪೀಠ ಸಂಚಾಲಕ ಡಾ. ಜಯವಂತ ನಾಯಕ್, ಶ್ರೀಮತಿ ವಸಂತಿ ಆರ್. ನಾಯಕ್, ಶ್ರೀ ಎಮ್. ಆರ್. ಕಾಮತ್, ಶ್ರೀ ವಿಠ್ಠಲ ಕುಡ್ವಾ, ಶ್ರೀ ಸಂತೋಷ್ ಶೆಣೈ, ಶ್ರೀ ರತ್ನಾಕರ ಕುಡ್ವ, ವಿಶ್ವ ಕೊಂಕಣಿ ಭಾಷಾ ಸಂಸ್ಥಾನ ಸಹಾಯಕ ನಿರ್ದೇಶಕ ಶ್ರೀ ಗುರುದತ್ತ ಬಂಟ್ವಾಳಕರ ಮೊದಲಾದವರು ಉಪಸ್ಥಿತರಿದ್ದು ಕಿರು ಪ್ರಾತ್ಯಕ್ಷಿಕೆ ವೀಕ್ಷಿಸಿದರು.