ಸರ್ವಿಸ್ ರಸ್ತೆಯಲ್ಲಿ ರುವ ವಾಹನ ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಿ : ಕಿರಣ್ ಕುಮಾರ್ ಉದ್ಯಾವರ
ಉಡುಪಿ: ಈಗಾಗಲೇ ಹಲವಾರು ಸಮಸ್ಯೆ ಗಳನ್ನು ಎದುರಿಸಿ ಅಂಬಲ್ಪಾಡಿ ರಾಷ್ಟ್ರೀಯ ಹೆದ್ದಾರಿಯ ಕೆಲಸವು ಪ್ರಾರಂಭಗೊಂಡಿದ್ದು ಸುಗಮ ಸಂಚಾರದ ದೃಷ್ಠಿಯಿಂದ ಪೊಲೀಸ್ ಇಲಾಖೆ ಸರ್ವಿಸ್ ರಸ್ತೆಯಲ್ಲಿರುವ ವಾಹನಗಳನ್ನು ತೆರವುಗೊಳಿಸುವಂತೆ ಮಾಜಿ ತಾಲೂಕು ಪಂಚಾಯತ್ ಸದಸ್ಯ ಕಿರಣ್ ಕುಮಾರ್ ಉದ್ಯಾವರ ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕೆಲಸವು ಪೂರ್ಣಗೊಳ್ಳಲು ಸರಿಸುಮಾರು ಎರಡು ವರ್ಷಗಳು ತಗಲುಬಹುದೆಂದು ಅಂದಾಜಿಸಲಾಗಿದ್ದು ಈಗಾಗಲೇ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಜಾಸ್ತಿಯಾಗಿದೆ. ಮುಂಬರುವ ಏಪ್ರಿಲ್ – ಮೇ ತಿಂಗಳಲ್ಲಿ ಇನ್ನೂ ಹೆಚ್ಚಾಗಲಿದೆ. ಈಗಾಗಲೇ ಕಾಮಗಾರಿ ವಾಹನಗಳು ಕಿನ್ನಿಮುಲ್ಕಿ ಯಿಂದ ಮುಂದೆ ಬರುವಾಗ ರಾಷ್ಟ್ರೀಯ ಹೆದ್ದಾರಿ ಪಥ ಬದಲಾಯಿಸಿ ಸರ್ವಿಸ್ ರಸ್ತೆಗೆ ಹೋಗಲು ಅನುವು ಮಾಡಿ ಕೊಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಎಲ್ಲಾ ವಾಹನ ಗಳು ಹಾಗೂ ಕಿದಿಯೂರ್. ಅಂಬಲ್ಪಾಡಿಯಿಂದ ಬರುವ ವಾಹನಗಳು ಕೂಡಾ ಸರ್ವಿಸ್ ರಸ್ತೆಯನ್ನೇ ಬಳಸಬೇಕಾಗಿದೆ. ಮುಂದೆ ಕರಾವಳಿಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ಹಾಗೂ ಉಡುಪಿ ನಗರದ ವಾಹನಗಳು ಇನ್ನೊಂದು ಬದಿಯ ಸರ್ವಿಸ್ ರಸ್ತೆಯನ್ನು ಅವಲಂಬಿಸಬೇಕಾಗಿದೆ.
ಕಿನ್ನಿಮೂಲ್ಕಿಯಿಂದ ಕರಾವಳಿ ಜಂಕ್ಷನ್ ತನಕ ಹೆದ್ದಾರಿಯ ಎರಡೂ ಕಡೆ ಇರುವ ಸರ್ವಿಸ್ ರಸ್ತೆಯಲ್ಲಿ ಯಾವುದೇ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ಹಾಗೂ ಇನ್ನಿತರ ಘನ ಹಾಗೂ ಮಧ್ಯಮ ಗಾತ್ರದ ಯಾವುದೇ ವಾಹನಗಳನ್ನು ನಿಲ್ಲಿಸದ ಹಾಗೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಗಮನ ಹರಿಸಬೇಕು. ಇದರಿಂದ ಮುಂದಕ್ಕೆ ರಸ್ತೆಯಲ್ಲಿ ಬ್ಲಾಕ್ ಆಗದೇ ಆಂಬುಲೆನ್ಸ್, ಶಾಲಾ ವಾಹನ, ಅಲ್ಲದೆ ಇನ್ನಿತರ ಅಗತ್ಯ ವಸ್ತುಗಳ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ಇದಕ್ಕಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕಾಗಿ ಮಾಧ್ಯಮ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.