ಸರ್ವೆಗಳೇನಿದ್ದರೂ ಕೂಡ ಭಾರತ ಮಹಿಳೆಯರಿಗೆ ಸುರಕ್ಷಿತ ; ವಿಶ್ವಸುಂದರಿ ಮಾನುಷಿ ಚಿಲ್ಲರ್

Spread the love

ಸರ್ವೆಗಳೇನಿದ್ದರೂ ಕೂಡ ಭಾರತ ಮಹಿಳೆಯರಿಗೆ ಸುರಕ್ಷಿತ ; ವಿಶ್ವಸುಂದರಿ ಮಾನುಷಿ ಚಿಲ್ಲರ್

ಉಡುಪಿ: ಇಂದು ಯಾರಿಗೂ ಯಾವುದೇ ಸ್ಥಳ ಸುರಕ್ಷಿತವಲ್ಲ. ಸರ್ವೇ ಏನು ಹೇಳಿದರೂ ಭಾರತದಲ್ಲಿ ನಾನು ಹೆಣ್ಣಾಗಿ ಹುಟ್ಟಿದ್ದಕ್ಕೆ ನನಗೆ ಹೆಮ್ಮೆ ಇದೆ. ನನಗೆ ಈ ಸ್ವಾತಂತ್ರ್ಯ ಸಿಗದಿದ್ದರೆ ನಾನು ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಡೆತಡೆಗಳು ಎಂಬುದು ಎಲ್ಲರ ಜೀವನದಲ್ಲಿ ಸಾಮಾನ್ಯ ಆದರೂ ಭಾರತ ಮಹಿಳೆಯರಿಗೆ ಸುರಕ್ಷಿತ ಪ್ರದೇಶ ಎಂದು ವಿಶ್ವಸುಂದರಿ ಮಾನುಷಿ ಚಿಲ್ಲರ್ ಹೇಳಿದ್ದಾರೆ. ಶನಿವಾರ ಉಡುಪಿಯಲ್ಲಿ ಸ್ಥಳಾಂತರಗೊಂಡ ಮಲಬಾರ್ ಚಿನ್ನಾಭರಣಗಳ ಮಳಿಗೆಯನ್ನು ಉದ್ಘಾಟಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ನಾನು ಕರಾವಳಿ ಜಿಲ್ಲೆಗೆ ಬರುತ್ತಿದ್ದಂತೆ ಮಳೆ ನನ್ನನ್ನು ಸ್ವಾಗತ ಮಾಡಿದೆ. ಮೊದಲ ಬಾರಿ ನಾನು ಮಂಗಳೂರು ಮತ್ತು ಉಡುಪಿಗೆ ಭೇಟಿ ನೀಡುತ್ತಿದ್ದು ಇಲ್ಲಿನ ಹಸಿರು ಪರಿಸರ ನನ್ನನ್ನು ಸಾಕಷ್ಟು ಸಂತೋಷ ನೀಡಿದೆ. ಯಾವತ್ತೂ ದೆಹಲಿ, ಮುಂಬೈನ ಸೆಕೆಯ ವಾತಾವರಣ ಇರುತ್ತದೆ. ಏರ್ ಪೋರ್ಟಿನಿಂದ ಉಡುಪಿಯ ವರೆಗೆ ಬರುವ ಮಳೆ ನನಗೆ ತಂಪಾದ ವಾತಾವರಣ ನಿಜಕ್ಕೂ ಖುಷಿ ನೀಡಿದೆ.

ನನ್ನ 18 ನೇ ವಯಸ್ಸಿನಿಂದ ಜನರಲ್ಲಿ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಇದೇ ಕಾರಣಕ್ಕಾಗಿ ನನಗೆ ಬ್ಯೂಟಿ ವಿದ್ ತ ಪರ್ಪಸ್ ಅವಾರ್ಡ್ ಸಿಕ್ಕಿದೆ. ಮುಂದೆ ಸ್ವಚ್ಚತೆಯ ಪ್ರೋಜೆಕ್ಟನ್ನು ದಕ್ಷಿಣ ಆಫ್ರಿಕಾ ಮತ್ತು ಕೀನ್ಯಾ ದೇಶಗಳಿಗೂ ವಿಸ್ತರಿಸಲಾಗುವುದು ಎಂದರು.

ವಿಶ್ವದಲ್ಲಿ ಶೇ 23ರಷ್ಟು ಹೆಣ್ಣುಮಕ್ಕಳು ಶಿಕ್ಷಣದ ಅವಕಾಶದಿಂದ ವಂಚಿತರಾಗಿದ್ದಾರೆ. ಮಹಿಳೆಯ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ನಾನು ವಿಶ್ವಸುಂದರ ಸ್ಥಾನದಿಂದ ಸಂದೇಶ ನೀಡುವುದಕ್ಕೆ ಪ್ರಯತ್ನಿಸುತ್ತಿದ್ದೇನೆ ಎಂದರು.

ಎಲ್ಲೆಲ್ಲಿಯೂ ಕಾಂಕ್ರೀಟ್ ಕಾಡು ನೋಡಿದ ಅನುಭವ ಇತ್ತು, ಆದರೇ ಮಂಗಳೂರಿಗೆ ಕಾಲಿಡುತ್ತಿದ್ದಂತೆ ಹಚ್ಚಹಸಿರನ್ನು ನೋಡಿ ಸಂತೋಷವಾಯಿತು. ಮಳೆಯ ಸ್ವಾಗತ ಖುಷಿ ನೀಡಿತು ಎಂದವರು ಹೇಳಿದರು.

ಚಿನ್ನಾಭರಣಗಳು ಕೌಟುಂಬಿಕ ಪರಂಪರೆಯನ್ನು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಮುಂದವರಿಸುತ್ತವೆ. ನಾನೀದ ಧರಿಸಿರುವ ನೆಕ್ಲೆಸ್ ನನ್ನ ಅಜ್ಜಿ ನನ್ನ ತಾಯಿಗೆ ನೀಡಿದ್ದರು, ತಾಯಿ ನನಗೆ ನೀಡಿದ್ದಾರೆ. ಇದು ಸಂಬಂಧವನ್ನು ಗಟ್ಟಿಗೊಳಿತ್ತದೆ ಎಂದವರು ಅಭಿಪ್ರಾಯಪಟ್ಟರು.


Spread the love