Home Mangalorean News Kannada News ಸವಲತ್ತುಗಳನ್ನು ಕಸಿಯುವ ಕುತಂತ್ರಗಳ ವಿರುದ್ಧ ಜಾಗೃತರಾಗಲು ಎಐಟಿಯುಸಿ ಕರೆ

ಸವಲತ್ತುಗಳನ್ನು ಕಸಿಯುವ ಕುತಂತ್ರಗಳ ವಿರುದ್ಧ ಜಾಗೃತರಾಗಲು ಎಐಟಿಯುಸಿ ಕರೆ

Spread the love

ಸವಲತ್ತುಗಳನ್ನು ಕಸಿಯುವ ಕುತಂತ್ರಗಳ ವಿರುದ್ಧ ಜಾಗೃತರಾಗಲು ಎಐಟಿಯುಸಿ ಕರೆ

ಮಂಗಳೂರು: ಅಭಿವೃದ್ಧಿಯ ನೆಪ ಹೇಳಿ ಇರುವ ಕಾನೂನು ಸವಲತ್ತುಗಳನ್ನು ಕಸಿಯುವ ಸರಕಾರಗಳ ಕುತಂತ್ರಗಳ ವಿರುದ್ಧ ಕಾರ್ಮಿಕರು ಜಾಗೃತರಾಗಿ ಚಳವಳಿಗೆ ಧುಮುಕಬೇಕು ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ)ನ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಹೆಚ್. ವಿ ರಾವ್ ಕರೆ ನೀಡಿದರು.

ಎಐಟಿಯುಸಿ ವತಿಯಿಂದ ನಗರದ ಕಾಮ್ರೇಡ್ ಸಿಂಪ್ಸನ್ ಸೋನ್ಸ್ ಸಭಾಂಗಣದಲ್ಲಿ ನಡೆದ ವಿಶ್ವ ಕಾರ್ಮಿಕ ದಿನಾಚರಣೆ -2017ನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ನಕಲಿ ನೋಟುಗಳನ್ನು ನಿಲ್ಲಿಸುವುದು, ಕಪ್ಪು ಹಣವನ್ನು ಪತ್ತೆ ಹಚ್ಚುವುದು ಹಾಗೂ ಭಯೋತ್ಪಾದನೆಯನ್ನು ನಿಗ್ರಹಿಸುವ ಉದ್ದೇಶವನ್ನು ಮುಂದಿರಿಸಿ ಕೇಂದ್ರ ಸರಕಾರ ನೋಟು ಅಮಾನ್ಯ ಮಾಡಿತ್ತು. ಆದರೆ ಈ ಮೂರೂ ಉದ್ದೇಶಗಳನ್ನು ಈಡೇರಿಸುವಲ್ಲಿ ಸರಕಾರ ವಿಫಲವಾಯಿತು. ಆದರೆ ಇದರಿಂದಾಗಿ ದುಡಿಯುವ ವರ್ಗದ ದುಮ್ಮಾನ ಇಮ್ಮಡಿಯಾಯಿತು. ದುಡಿತಕ್ಕೆ ಸಂಬಳ ಪಡೆಯಲು ಪೇಚಾಡುವಂತಾಯಿತು. ದುಡಿಯುವ ಜನ ತನ್ನ ದುಡಿತಕ್ಕೆ ಸಿಕ್ಕಿದ ನೋಟುಗಳನ್ನು ಬೇಂಕಿಗೆ ಜಮಾ ಮಾಡಿರುವುದನ್ನು ಕಪ್ಪು ಹಣ ಎಂದು ಕರೆಯಲಾಯಿತು. ಎಷ್ಟು ಕಪ್ಪು ಹಣ ಸಿಕ್ಕಿದೆಯೆಂದು ಸರಕಾರ ಇದುವರೆಗೆ ಲೆಕ್ಕ ಕೊಟ್ಟಿಲ್ಲ. ರಾಜಕೀಯ ಪಕ್ಷಗಳಿಗೆ ಉಧ್ಯಮದಾರರು ತನ್ನ ಲಾಭಾಂಶದಲ್ಲಿ ಶೇಕಡಾ 7.5 ರವರೆಗೆ ದೇನಿಗೆ ನೀಡಬಹುದೆಂದು ಮೊದಲು ತಿಳಿಸಿದ್ದ ಸರಕಾರ ನಂತರ ಅದರ ಮಿತಿಯನ್ನು ತೆಗೆದು 2014 ರಿಂದ ಪೂರ್ವಾನ್ವಯವಾಗುವಂತೆ ಎಷ್ಟು ಬೇಕಾದರೂ ನೀಡಬಹುದೆಂದು ಬಿಲ್ ಮಂಡನೆಯ ನಂತರ ತಿದ್ದುಪಡಿ ಮಾಡಿತು. ಈ ವಿಚಾರ ಸಂಸದರ ಗಮನಕ್ಕೆ ತಂದಿರಲಿಲ್ಲ. ಬಿಜೆಪಿಯು ಕಳೆದ 2014ರ ಮಹಾ ಚುನಾವಣೆಯಲ್ಲಿ ಖರ್ಚು ಮಾಡಿದ ಕಪ್ಪು ಹಣವನ್ನು ಸಕ್ರಮಗೊಲಿಸಲು ಈ ತಿದ್ದಪಡಿಮಾಡಲಾಯಿತು. ಇಂತಹ ವಿಚಾರಗ ಬಗ್ಗೆ ಹಾಗೂ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕರು ಎಚ್ಚೆತ್ತುಕೊಂಡು ಚಳವಳಿಗೆ ಸನ್ನದ್ದರಾಗಬೇಕೆಂದು ಹೆಚ್. ವಿ ರಾವ್ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಎ. ಪ್ರಭಾಕರ್ ರಾವ್ ವಹಿಸಿದ್ದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ಖ್ಯಾತ ವಕೀಲರಾದ ಚಿದಾನಂದ ಕೆದಿಲಾಯ, ಎಐಟಿಯುಸಿ ನಾಯಕರಾದ ಎಂ. ಕರುಣಾಕರ್, ತಿಮ್ಮಪ್ಪ ಕೆ., ಸುಲೋಚನಾ, ದಿವ್ಯಾ ಮುಂತಾದವರು ಉಪಸ್ಥಿತರಿದ್ದರು. ವಿ. ಎಸ್ ಬೇರಿಂಜ ವಂದಿಸಿದರು.


Spread the love

Exit mobile version