Home Mangalorean News Kannada News ಸಹ್ಯಾದ್ರಿ ಕಾಲೇಜ್ ಮಂಗಳೂರಿನಲ್ಲಿ 19 ನೇ ರಾಜ್ಯ ಮಟ್ಟದ ಅಂತರ್  ಕಾಲೇಜು ಪವರ್ ಲಿಫ್ಟಿಂಗ್ ಸ್ಪರ್ಧೆ ಆಯೋಜಿಸಲಾಯಿತು

ಸಹ್ಯಾದ್ರಿ ಕಾಲೇಜ್ ಮಂಗಳೂರಿನಲ್ಲಿ 19 ನೇ ರಾಜ್ಯ ಮಟ್ಟದ ಅಂತರ್  ಕಾಲೇಜು ಪವರ್ ಲಿಫ್ಟಿಂಗ್ ಸ್ಪರ್ಧೆ ಆಯೋಜಿಸಲಾಯಿತು

Spread the love

ಸಹ್ಯಾದ್ರಿ ಕಾಲೇಜ್ ಮಂಗಳೂರಿನಲ್ಲಿ 19 ನೇ ರಾಜ್ಯ ಮಟ್ಟದ ಅಂತರ್  ಕಾಲೇಜು ಪವರ್ ಲಿಫ್ಟಿಂಗ್ ಸ್ಪರ್ಧೆ ಆಯೋಜಿಸಲಾಯಿತು

28 ನೇ ಮತ್ತು 29 ನೇ ಸೆಪ್ಟೆಂಬರ್, 2018 ರಂದು ಮಂಗಳೂರು, ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಆಯೋಜಿಸಿದ 19 ನೇ ವಿ.ಟಿ.ಯು ಸ್ಟೇಟ್ ಲೆವೆಲ್ ಅಂತರ್ ಕಾಲೇಜು ಪವರ್ ಲಿಫ್ಟಿಂಗ್ ಸ್ಪರ್ಧೆ. ನೇತ್ರಾವತಿ ಆಡಿಟೋರಿಯಂನಲ್ಲಿ 28 ಸೆಪ್ಟೆಂಬರ್ 2018 ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಭಂಡಾರಿ ಫೌಂಡೇಶನ್ ಟ್ರಸ್ಟಿ, ಶ್ರೀ ದೇವದಾಸ್ ಹೆಗ್ಡೆ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಅವರು 19 ನೇ ವಿಟಿಯು ಪವರ್ ಲಿಫ್ಟಿಂಗ್ ಸ್ಪರ್ಧೆಯನ್ನು ಚಾಲನೆಗೊಳಿಸಿದರು ಮತ್ತು ಪವರ್ ಲಿಫ್ಟಿಂಗ್ ಬಾರ್ ತೂಕವನ್ನು ಅನಾವರಣಗೊಳಿಸುವುದರ ಮೂಲಕ ಸ್ಪರ್ಧೆಯನ್ನು ಉದ್ಘಾಟಿಸಿದರು. ಅವರು ತಮ್ಮ ಅಧ್ಯಕ್ಷೀಯ ಭಾಷಣವನ್ನು ನೀಡಿ ಸ್ಪರ್ದಾಳುಗಳಿಗೆ  ಅಭಿನಂದನೆ ಹೇಳಿದರು. ತರುವಾಯ ವಿವಿಧ ವರ್ಗ ಇಂಟರ್ ಕಾಲೇಜು ಪವರ್ ಲಿಫ್ಟಿಂಗ್ ಸ್ಪರ್ಧೆಗಳು ನಡದವು.

29 ಸೆಪ್ಟೆಂಬರ್, 2018 ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಮಂಜುನಾಥ್ ಭಂಡಾರಿ ಅಧ್ಯಕ್ಷ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜ್ ಮುಖ್ಯ ಅತಿಥಿಯಾಗಿ ವಿಚೇತರಿಗೆ ಬಹುಮಾನಗಳನ್ನು ವಿತರಿಸಿದರು.

ಹುಡುಗಿಯರ ವಿಭಾಗ: ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್, ಮಂಗಳೂರು ಇವರಿಗೆ ಚಾಂಪಿಯನ್ಸ್ಶಿಪ್ ಮತ್ತು ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ (ಜಿಎಟಿ), ಬೆಂಗಳೂರು ರನ್ನರ್-ಅಪ್ ಹಾಗೂ ಜೆಎನ್ಎನ್ಸಿಇ ಶಿವಮೊಗ್ಗ  ವಿದ್ಯಾರ್ಥಿಗಳು ಮೂರನೇ ಸ್ಥಾನ ಪಡೆದುಕೊಂಡರು.

ಹುಡುಗರ ವಿಭಾಗ: NMAMIT ನಿಟ್ಟೆ ಕಾಲೇಜ್ಗೆ ಚಾಂಪಿಯನ್ಸ್ಶಿಪ್ ಹಾಗೂ ಜೆಎನ್ಎನ್ಸಿಇ, ಶಿವಮೊಗ್ಗ, ಮತ್ತು ಮಂಗಳೂರಿನ ಸೇಂಟ್ ಜೋಸೆಫ್ ಇಸಿ ಮಂಗಳೂರು, ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಮಂಗಳೂರು ಇವರುಗಳು ರನ್ನರ್-ಅಪ್ ಹಂಚಿಕೊಂಡರು. ಈ ಸ್ಪರ್ಧೆಯಲ್ಲಿ 16 ಹೊಸ ಮೀಟ್ ದಾಖಲೆಗಳನ್ನು ರಚಿಸಲಾಗಿದೆ. ಕರ್ನಾಟಕದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳಿಂದ ಈ ಪೈಪೋಟಿಯಲ್ಲಿ ಒಟ್ಟು 140 ಹುಡುಗರು ಮತ್ತು 45 ಹುಡುಗಿಯರು ಪಾಲ್ಗೊಂಡಿದ್ದರು. VTU ಇಂಟರ್ ಕಾಲೇಜು ಸ್ಪರ್ಧೆಯಲ್ಲಿ ಸಹ್ಯಾದ್ರಿ MBA ವಿದ್ಯಾರ್ಥಿ ಶ್ರೀ ಶೊಬಿತ್ ರೈ ವಿಟಿಯು ಪವರ್ ಲಿಫ್ಟಿಂಗ್ (ಸ್ಕ್ಯಾಟ್) 215.5 ಕೆಜಿಯಷ್ಟು ತೂಕವನ್ನು ಎತ್ತಿ ತಮ್ಮ ಹಿಂದಿನ ದಾಖಲೆ ಮುರಿದರು.


Spread the love

Exit mobile version