ಸಹ್ಯಾದ್ರಿ ಪ್ರಸ್ತುತ ಪಡಿಸುತ್ತಿದೆ ಅಂಧರ ಬಾಳಿಗೊಂದು ಬೆಳಕಿನ ಆಶಾಕಿರಣ
ವಿ. ಎಲ್ ಗ್ಲಾಸ್ ವಿಶಿಷ್ಟ ಕನ್ನಡಕದ ಮೂಲಕ ಬಹುಮುಖ ಚಲನಶೀಲತೆಯ ನೆರವು. ಅಂಧ, ದೃಷ್ಟಿಹೀನರಿಗೊಂದು ಪರಿಣಾಮಕಾರಿ ಸಂವಹನ ದೃಷ್ಟಿ ಮಾಧ್ಯಮ.
ಅಂಧರ ಬಾಳಿಗೊಂದು ಆತ್ಮವಿಶ್ವಾಸ. ಚಲನಶೀಲತೆಯ ಸ್ವಾತಂತ್ರ್ಯದ ಸಮ್ಮಾನವಿತ್ತವರು, ‘ಸಹ್ಯಾದ್ರಿ ಇನ್ನೊವೇಶನ್ ಹಬ್’ ನಿಂದ ಪ್ರಾಯೋಜಿತ ತಂತ್ರಜ್ಞಾನ ಸಂಸ್ಥೆ ಆರ್ ಡಿ ಎಲ್ ಟೆಕ್ನಾಲಜೀಸ್ ರವರ ವಿ ಎಲ್ ಸಿ ಲ್ಯಾಬ್. ಬೆಳಕಿನ ಆವರ್ತಗಳನ್ನಷ್ಟೇ ಅವಲಂಬಿಸಿ ಅಪಾಯಕಾರಿ ಆರ್ ಎಫ್ ತರಂಗಗಳ ವಿಕಿರಣಗಳನ್ನು ನಿವಾರಿಸಿ ಸಂಶೋಧಿಸಿದ ತಂತ್ರಜ್ಞಾನವೇ ಎಲ್ ಐ ಎಫ್ ಐ. ಈ ತಂತ್ರಜ್ಞಾನದಿಂದ ಆವಿಷ್ಕರಿಸಲ್ಪಟ್ಟ ಒಂದು ಅದ್ಭುತ ಕೊಡುಗೆ ‘ವಿ ಎಲ್ ಗ್ಲಾಸ್’. ದೃಷ್ಟಿಹೀನ ವ್ಯಕ್ತಿಗಳಿಗಾಗಿಯೇ ಈ ಅಪೂರ್ವ ತಂತ್ರಜ್ಞಾನ.
ಬೆಳಕಿನಿಂದಲೇ ಶಕ್ತಿ, ಬೆಳಕಿನಿಂದಲೇ ಜೀವನೋತ್ಕರ್ಷ. ಆದರೆ ಆರ್ ಡಿ ಎಲ್‍ರವರಿಗೆ ಬೆಳಕೇ ಮೂಲ ಸಂವಹನ ಮಾಧ್ಯಮ. ಬೆಳಕಿನ ಕಿರಣಗಳ ಚೈತನ್ಯಾಭಿವೃದ್ಧಿಯಿಂದಲೇ ಸಂಶೋಧಿಸಿದ ತಂತ್ರಜ್ಞಾನ ಎಲ್ ಐ ಎಫ್ ಐ. ಈ ತಂತ್ರಜ್ಞಾನವನ್ನು ಅಳವಡಿಸಿ ಸಾಮಾಜಿಕ ಹಿತಕ್ಕೋಸ್ಕರ ತನ್ನನ್ನೇ ಮುಡಿಪಾಗಿಟ್ಟ ಸಂಸ್ಥೆ ಆರ್ ಡಿ ಎಲ್ ಟೆಕ್ನಾಲಜೀಸ್. ಸಾಮಾಜಿಕ ಸ್ವಾಸ್ಥ್ಯ ಚಿಂತನೆಯಲ್ಲೇ ವೈಜ್ಞಾನಿಕ ಸಂಶೋಧನೆಯನ್ನು ಒರೆಗೆ ಹಚ್ಚಿ ಅಂಧರಿಗೋಸ್ಕರವೇ ಸಿದ್ಧಪಡಿಸಿದ ಅಪೂರ್ವ ಆವಿಷ್ಕಾರ ‘ವಿ ಎಲ್ ಗ್ಲಾಸ್’.
ಅಂಧತ್ವ ಅಥವಾ ದೃಷ್ಟಿಹೀನತೆ ಇಂದು ವಿಶ್ವದಾದ್ಯಂತ ಸವಾಲಾಗಿ ಪರಿಣಮಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯ ಪ್ರಕಾರ ವಿಶ್ವಾದ್ಯಂತ ಇಂದು ಸುಮಾರು 285 ಮಿಲಿಯನ್ ಅಂಧ ಅಥವಾ ದೃಷ್ಟಿಹೀನರಿದ್ದಾರೆ. ಇಂಥವರಿಗಾಗಿಯೇ ವಿಶ್ವದಲ್ಲಿಯೇ ಪ್ರಥಮ ಬಾರಿ ಸಂಶೋಧಿಸಿ, ಆವಿಷ್ಕರಿಸಿ ಸಿದ್ಧಪಡಿಸಿದ ಅದ್ಭುತ ಕೊಡುಗೆ ‘ವಿ ಎಲ್ ಗ್ಲಾಸ್’
‘ವಿ ಎಲ್ ಗ್ಲಾಸ್’ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಒಂದು ಸರಳ ಕನ್ನಡಕ. ಒಂದು ವಿಶೇಷವಾಗಿ ತಯಾರಿಸಲ್ಪಟ್ಟ ಕನ್ನಡಕದ ಚೌಕಟ್ಟು. ಅದರಲ್ಲಿ ಎರಡು ಗಾಜುಗಳು. ಗಾಜುಗಳ ಜೋಡಣೆಯ ಚೌಕಟ್ಟಿನ ಒಳಗಿರಿಸಿದ ಪುಟ್ಟ ಸಂವೇದಕ. ಈ ಸಂವೇದಕವನ್ನು ವಿ ಐ ಎಲ್ ಆರ್ ಎಂದು ಕರೆಯುತ್ತಾರೆ. ಈ ಸಂವೇದಕವು ಎಲ್ ಐ ಎಫ್ ಐ ತಂತ್ರಜ್ಞಾನದ ಮೂಲಕ ಬೆಳಕಿನ ಅತಿ ಕೆಂಪು ಕಿರಣಗಳನ್ನು ಪಡೆಯುತ್ತದೆ. ಈ ಸಂಕೇತಗಳು ಕನ್ನಡಕದ ಎಡ ಬಲದ ಚೌಕಟ್ಟುಗಳಲ್ಲಿ ಅಳವಡಿಸಿದ ಕಂಪನಕಾರಕ ಗಳ ಮೂಲಕ ಕನ್ನಡಕ ಧರಿಸಿದ ವ್ಯಕ್ತಿಗೆ ಎಚ್ಚರಿಕೆಯನ್ನು ನೀಡುತ್ತದೆ. ಅಲ್ಲದೆ ಕನ್ನಡಕದ ಚೌಕಟ್ಟಿನ ಕೊನೆಯಲ್ಲಿ ಕಿವಿಯೊಳಗೆ ಧರಿಸುವಂತಹ ಇಯರ್ ಫೆÇೀನ್ ಗಳ ಮೂಲಕ ಸಂದೇಶಗಳನ್ನು ನೀಡುತ್ತದೆ. ಇದು ಅಂಧ ವ್ಯಕ್ತಿಯು ಯಾವುದೇ ಅಡೆತಡೆಗಳನ್ನು ಗ್ರಹಿಸಿ, ಯಾರದೇ ಸಹಾಯವಿಲ್ಲದೆ ಎಚ್ಚರಿಕೆಯಿಂದ ಸ್ವತಂತ್ರವಾಗಿ ನಡೆದಾಡಲು ಸಹಾಯ ಮಾಡುತ್ತದೆ. ಅಂಧರ ಬಾಳಿಗೆ ವಿ ಎಲ್ ಗ್ಲಾಸ್, ಬಹುಮುಖ ಚಲನಶೀಲತೆಯ ಆಪ್ತ ಸಹಾಯಕ.
ಒಬ್ಬ ಅಂಧ ಅಥವಾ ದೃಷ್ಟಿಮಾಂಧ್ಯ ವ್ಯಕ್ತಿ ಈ ಕನ್ನಡಕವನ್ನು ಧರಿಸಿ ಮನೆಯ ಅಥವಾ ಕಛೇರಿಯ ಒಳಾಂಗಣವನ್ನು ಪ್ರವೇಶಿಸಿದಾಗ ಅಲ್ಲಿಯ ಎಲ್ ಇ ಡಿ ಬಲ್ಬುಗಳ ಕಿರಣಗಳನ್ನು ಕನ್ನಡಕದ ಚೌಕಟ್ಟಿನಲ್ಲಿ ಅಳವಡಿಸಿದ ಸಂವೇದಕವು ಗ್ರಹಿಸುತ್ತದೆ ಮತ್ತು ಅಲ್ಲಿಯ ಪರಿಸರದಲ್ಲಿರುವ ವಸ್ತುಗಳನ್ನು, ಅಡೆತಡೆಗಳನ್ನು ಗ್ರಹಿಸಿ ಕಂಪನಕಾರಕದ ಮೂಲಕ ಸಂದೇಶಗಳನ್ನು ನೀಡುತ್ತದೆ. ಇದರಿಂದಾಗಿ ಈ ವ್ಯಕ್ತಿಯು ಯಾವುದೇ ಅಡೆತಡೆಗಳಿಲ್ಲದೆ ಒಳಾಂಗಣದಲ್ಲಿ ಅಡ್ಡಾಡಬಹುದು ಅಥವಾ ವಿಶ್ರಾಂತಿ ಪಡೆಯಬಹುದು.
ಅಂಧ ವ್ಯಕ್ತಿಯು ಒಳಾಂಗಣದಲ್ಲಿ ಬೆಳಕಿನ ಕಿರಣಗಳ ಅಡಿಯಲ್ಲಿ ನಡೆಯುತ್ತಿರುವಾಗ ಆತ ನಿಂತಿರುವ ಸ್ಥಾನವನ್ನು ಅತಿ ನಿಖರವಾಗಿ ತ್ರಿಡಿ ಪೆÇಸಿಶನಿಂಗ್ ಮೂಲಕ ಗೊತ್ತುಪಡಿಸುತ್ತದೆ. ಅಲ್ಲದೆ ಆ ಪರಿಸರದಲ್ಲಿರುವ ವಸ್ತುಗಳ ಸ್ಥಾನ, ದೂರ ಇನ್ನಿತರ ಸೂಚನೆಗಳನ್ನು ಅತೀ ನಿಖರವಾಗಿ ತಿಳಿಸುತ್ತದೆ. ಅಂಧರ, ದೃಷ್ಟಿವಿಹೀನ ವ್ಯಕ್ತಿಗಳ ಆತ್ಮವಿಶ್ವಾಸ ಹಾಗೂ ಸ್ವತಂತ್ರ ಜೀವನಕ್ಕೆ ವಿ ಎಲ್ ಗ್ಲಾಸ್ ಒಂದು ಅಪೂರ್ವ ಕೊಡುಗೆ.
ಇದಲ್ಲದೆ ವಿ ಎಲ್ ಗ್ಲಾಸ್ ಇನ್ನೊಂದು ಅದ್ಭುತ ತಂತ್ರಜ್ಞಾನವನ್ನು ಒಳಗೊಂಡಿದೆ. ಅದುವೇ ರಿಯಲ್ ಟೈಮ್ ಆಕ್ಟಿವಿಟೀ ಮೊನಿಟರಿಂಗ್ ಮತ್ತು ಅಲರ್ಟ್ ಸಿಸ್ಟಮ್. ಇದು ಈ ಕನ್ನಡಕವನ್ನು ಧರಿಸಿದ ವ್ಯಕ್ತಿಯು ಯಾವುದೇ ತೊಂದರೆಗೊಳಗಾದರೆ ತಕ್ಷಣವೇ ಈ ವ್ಯಕ್ತಿಯ ಸಂಬಧಿಕರನ್ನು ಸಂಪರ್ಕಿಸುತ್ತದೆ. ಅಲ್ಲದೆ ಕೂಡಲೇ ಸಹಾಯ ದೊರಕುವಂತೆ ಮಾಡುತ್ತದೆ.
ಆರ್ ಡಿ ಎಲ್ ರವರ ವಿ ಎಲ್ ಸಿ ಪ್ರಯೋಗಶಾಲೆಯನ್ನು ಭಾರತದ ಹೆಸರಾಂತ ವಿಜ್ಞಾನಿ, ಬ್ರಹ್ಮೋಸ್ ಕ್ಷಿಪಣಿ ಸಂಶೋಧನಾ ಕೇಂದ್ರ ಡಿ ಆರ್ ಡಿ ಒ ಇದರ ಸಿಇಒ ಹಾಗೂ ಎಂ ಡಿ ಡಾ. ಸುಧೀರ್ ಕುಮಾರ್ ಮಿಶ್ರರವರು 26 ಮಾರ್ಚ್ 2018 ರಂದು ಉದ್ಘಾಟಿಸಿದರು.
ಇವರಿಂದ ಪ್ರೇರಣೆಗೊಂಡ ಯುವ ವಿಜ್ಞಾನಿಗಳ ತಂಡ ಶ್ರೀ ರಾಘವ ಶೆಟ್ಟಿಯವರ ನೇತೃತ್ವದಲ್ಲಿ ಹಗಲೂ ರಾತಿ ಶ್ರಮಿಸಿ ಕೇವಲ 3 ತಿಂಗಳ ಅವಧಿಯಲ್ಲಿ ಆವಿಷಕರಿಸಿದ ತಂತ್ರಜ್ಞಾನವೇ ವಿ ಎಲ್ ಗ್ಲಾಸ್. ಇದಕ್ಕಾಗಿ ಶ್ರಮಿಸಿದ ವಿಜ್ಞಾನಿಗಳ ತಂಡ ಹೀಗಿದೆ.
ಶ್ರೀ ರಾಘವ ಶೆಟ್ಟಿ ಆರ್‍ಡಿಎಲ್ ಟೆಕ್ನೋಲಜಿಯ ಮುಖ್ಯಸ್ಥ– ವಸ್ತು ವಿನ್ಯಾಸ ಕಲ್ಪನೆ ಹಾಗೂ ವ್ಯೂಹಾತ್ಮಕ ಪ್ರಸ್ತಾವನೆ.
ಶ್ರೀ ಕನ್ವಲ್ ಕರ್ಕೇರ – ತಾಂತ್ರಿಕ ನಿರ್ದೇಶಕರು.
ಡಾ ಅಶ್ವತ್ ರಾವ್ ಹಾಗೂ ಡಾ ಅನೂಶ್ ಬೇಕಲ್ – ಸಹ್ಯಾದ್ರಿ ಇಂಜೀನಿಯರಿಂಗ್ ಕಾಲೇಜಿನ ಬೋಧಕ ಪ್ರಾಧ್ಯಾಪಕರು ಹಾಗೂ ಸಂವೇದಕ ತಯಾರಿಕೆಯ ಮಾರ್ಗದರ್ಶಕರು.
ಶ್ರೀ ವಿಶ್ವನಾಥ್ ಆಚಾರ್ಯ – ಕ್ಯಾಡ್ ಡಿಸೈನ್ ಸಹಾಯ
ಶ್ರೀ ಗಣೇಶ್ ಐತಾಳ್ – ನಿರ್ದೇಶಕರು, ಕ್ಯಾಡ್ ಡಿಸೈನ್ ಹಾಗೂ ಪಿಸಿಬಿ.
ಶ್ರೀ ಪ್ರದೀಪ್ ಮೇಶೀನ್ ಲರ್ನಿಂಗ್
ಸ್ಟಾರ್ಟ್ ಅಪ್ ಇಂಡಿಯಾದಿಂದ ಗುರುತಿಸಲ್ಪಟ್ಟ ಸಹ್ಯಾದ್ರಿ ಎಂಜೀನಿಯರಿಂಗ್ ಕಾಲೇಜಿನಿಂದ ಪ್ರವರ್ತಿಸಲ್ಪಟ್ಟ ‘ಸಹ್ಯಾದ್ರಿ ಇನ್ನೊವೇಷನ್ ಹಬ್’ ನ ಆಶ್ರಯದಲ್ಲಿ ಆರ್ ಡಿ ಎಲ್ ಟೆಕ್ನಾಲಜೀಸ್ ರವರ ವಿ ಆರ್ ಎಲ್ ಪ್ರಯೋಗ ಶಾಲೆಯಲ್ಲಿ ಆವಿಷ್ಕರಿಸಲ್ಪಟ್ಟ ವಿ ಎಲ್ ಗ್ಲಾಸ್, ಅಂಧರ ಬಾಳಿಗೊಂದು ಆಶಾಕಿರಣ.