ಸಾಫಲ್ಯ ಸೇವಾ ಸಂಘ ಮುಂಬಯಿಯ 84ನೇ ವಾರ್ಷಿಕೋತ್ಸವ
ಮುಂಬಯಿ: ಯಾವುದೇ ಸಮಾಜಪರ ಸಂಘಟನೆಯು ಕಷ್ಟದಲ್ಲಿರುವ ತಮ್ಮ ಸಮಾಜ ಬಾಂಧವರ ಕೆಲವರಾದರೂ ಕಣ್ಣೀರು ಒರಸುವ ಕಾರ್ಯ ಮಾಡಬೇಕು. ಸಾಫಲ್ಯ ಸೇವಾ ಸಂಘ ಮುಂಬಯಿ ಎಲ್ಲಾ ವಿಷಯದಲ್ಲಿ ಸಫಲತೆಯನ್ನು ಕಾಣುತಿದ್ದು ನಾವು ಈಗಾಗಲೇ ಹಮ್ಮಿಕೊಂಡ ಸಮಾಜಪರ ಯೋಜನೆಗಳ ಮೂಲಕ ಸಂಘವು ಅಸಾಯಕರ ಕಣ್ಣೀರೊರೆಸುವಲ್ಲಿ ಯಶಸ್ಸಿಯಾಗಿದೆ ಎಂದು ಸಾಫಲ್ಯ ಸೇವಾ ಸಂಘ ಮುಂಬಯಿಯ ಅಧ್ಯಕ್ಷ ಶ್ರೀನಿವಾಸ ಪಿ. ಸಾಫಲ್ಯ ನುಡಿದರು.
ಸುಮಾರು 84 ವರ್ಷಗಳ ಹಿಂದೆ ಕರ್ನಾಟಕ ಹಾಗೂ ಗಡಿನಾಡಿನ ಕರಾವಳಿಯ ಸಾಫಲ್ಯ ಸಮಾಜದ ಅಂದಿನ ಹಿರಿಯರು ಸ್ಥಾಪಿಸಿದ ಸಾಪಲ್ಯ ಸೇವಾ ಸಂಘ (ರಿ.) ಮುಂಬಯಿ ಇದರ 84ನೇ ವಾರ್ಷಿಕ ಸಮಾರಂಭವು ಜ. 5 ರಂದು ಕುರ್ಲಾ ಪೂರ್ವ ಬಂಟರ ಭವನದಲ್ಲಿ ಅದ್ದೂರಿಯಾಗಿ ಜರಗಿದ್ದು, ದಿನಪೂರ್ತಿ ನಡೆದ ಈ ಸಮಾರಂಭದ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭವು ಅಧ್ಯಕ್ಷರಾದ ಶ್ರೀನಿವಾಸ ಪಿ. ಸಾಫಲ್ಯ ಇವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಮಾತನಾಡುತ್ತಾ ನಮ್ಮ ಸಂಘದ ಮೂಲಕ ಎಲ್ಲರ ಸಹಕಾರದಿಂದ ಸರಕಾರ ಮಾಡುವ ಕಾರ್ಯವನ್ನು ನಾವು ಮಾಡುತ್ತಿದ್ದು, ಮುಂದೆಯೂ ಸಮಾಜ ಬಾಂಧವರೆಲ್ಲರೂ ನಮ್ಮೊಂದಿಗೆ ಕೈಜೋಡಿಸಿ ಸಂಘವನ್ನು ಇನ್ನೂ ಬಲಿಷ್ಠಗೊಳಿಸಬೇಕು. ಇಂದಿನ ವೇದಿಕೆಯು ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ದರಾಗಿರುವ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಅತ್ಯಮೂಲ್ಯವಾಗಿದೆ. ನಮ್ಮ ಸಂಸ್ಥೆಯ ಮೂಲಕ ನಮ್ಮ ಹಿರಿಯರು ಸಾಫಲ್ಯರ, ಗಾಣಿಗರ ಏಳಿಗೆಗೆ ಪ್ರಯತ್ನಿಸಿದ್ದಾರೆ. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಲ್ಲ ಹಿರಿಯರು ಸಂಘದ ಪ್ರಗತಿಗೆ ದುಡಿದವರು. ಇವರೆಲ್ಲರ ಆಶೀರ್ವಾದದಿಂದ ಸಂಘ ಇನ್ನೂ ಉನ್ನತ ಮಟ್ಟಕ್ಕೇರುದರಲ್ಲಿ ಸಂದೇಹವಿಲ್ಲ. ಸಂಘದ ಪ್ರತಿಯೊಂದು ಕಾರ್ಯಕ್ರಮದ ಯಶಸ್ಸಿಗೆ ಸಮಿತಿಯ ಹಾಗೂ ಉಪಸಮಿತಿಗಳ ಸದಸ್ಯರು ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಘದ ಸದಸ್ಯರಾಗದವರು ಸದಸ್ಯರಾಗಿ ಸಂಘಕ್ಕೆ ನೀಡುದರೊಂದಿಗೆ ಇತರರಿಗೂ ಸಹಕರಿಸೋಣ ಎಂದರು.
ಸಂಘದ ಮಾಜಿ ಅಧ್ಯಕ್ಷ ಓಂಪ್ರಕಾಶ್ ರಾವ್, ಅಭಿಮಾನಿ ಹಾಗೂ ಹಿರಿಯ ಸದಸ್ಯ , ರಘುವೀರ್ ಅತ್ತಾವರ್, ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಕೋಶಾಧಿಕಾರಿ ಕಿರಣ್ ಮೂಲ್ಕಿ, ಅಭಿಮಾನಿ ಹಾಗೂ ಹಿರಿಯ ಸದಸ್ಯರುಗಳಾದ ಮೀರಾ ಕರ್ಕೇರ ಮತ್ತು ಶ್ರೀಮತಿ ಶಾರದಾ ಯಜ್ಮಾಡಿ, ಅಭಿಮಾನಿ, ತುಳು ಸಂಘ ಬೊರಿವಲಿಯ ಸ್ಥಾಪಕ ಅಧ್ಯಕ್ಷ ವಾಸು ಪುತ್ರನ್, ಮಾಜಿ ಕೋಶಾಧಿಕಾರಿ ಸತೀಶ್ ತಿಲಕ್, ಮಾಜಿ ಉಪಾಧ್ಯಕ್ಷ ವಿಠಲ್ ಸಫಲಿಗ, ಅಭಿಮಾನಿ ಹಾಗೂ ಹಿರಿಯ ಸದಸ್ಯರುಗಳಾದ ಸತೀಶ್ ಸಾಲ್ಯಾನ್, ಶಂಕರ್ ಸಫಲಿಗ ಮತ್ತು ಶ್ರೀಮತಿ ಲಕ್ಷ್ಮಿ ಡಿ. ಸಾಫಲ್ಯ ಇವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದು ದೀಪ ಬೆಳಗಿಸಿ ಹಿಂಗಾರ ಅರಳಿಸಿ ಸಾಫಲ್ಯ ಗೀತೆಯೊಂದಿಗೆ ಸಮಾರಂಭಕ್ಕೆ ಚಾಲನೆಯಿತ್ತರು.
ಸಾಫಲ್ಯ ದೀಪಾವಳಿ ಸ್ಪರ್ಧೆ ಹಾಗೂ ಪ್ರತಿಭಾ ಅನ್ವೇಷಣೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಮಾಜದ ಕಿರಿಯ ಸಾಧಕರುಗಳಾದ ಪ್ರಭಾವಿ ವ್ಯಕ್ತಿ ಕು. ಮಾಲಿನಿ ಸುಧಾಕರ ಸಫಲಿಗ, ಜನಪ್ರಿಯ ಬರಹಗಾರ ಸತೀಶ್ ಪುತ್ರನ್ ಮತ್ತು ಕು. ಅಥಿತಿ ಗಾಣಿಗ ಇವರನ್ನು ಅವರ ಪಾಲಕರೊಂದಿಗೆ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಸನ್ಮಾನಿತರು ಸಾಫಲ್ಯ ಸೇವಾ ಸಂಘ ಕ್ಕೆ ಅಭಾರ ವ್ಯಕ್ತಪಡಿಸಿದರು.
ಜೊತೆ ಕಾರ್ಯದರ್ಶಿಗಳಾದ ರಾಜೇಶ್ ಕುಮಾರ್ ಪುತ್ರನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಟಿ ಸಫಲಿಗ ಧನ್ಯವಾದ ಸಮರ್ಪಿಸಿದರು.
ಶ್ರೀನಿವಾಸ ಪಿ. ಸಾಫಲ್ಯರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಉಷಾ ಸಫಲಿಗ ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ಶೋಭಾ ಬಂಗೇರ ಇವರು ಸನಾತನ ಧರ್ಮದ ಬಗ್ಗೆ ಮಾಹಿತಿಯಿತ್ತರು.
ವೇದಿಕೆಯಲ್ಲಿ ಮುಖ್ಯ ಅತಿಥಿ ಎ.ಕೆ. ಜೀವನ್ ಮತ್ತು ಅಖಿಲ ಕರ್ನಾಟಕ ಗಾಣಿಗ ಸಂಘ ಬೆಂಗಳೂರು ಅಧ್ಯಕ್ಷ ರಾಜಶೇಖರ್ ಗಾಣಿಗ ಎಂ. ಆರ್., ಗೌರವ ಅತಿಥಿ ರಾಜಕಾರಣಿ, ಉದ್ಯಮಿ ಮಾಧವ ಮಾವೆ ಸಾಲೆತ್ತೂರು, ಸುಮಂಗಳ ಕ್ರೆಡಿಟ್ ಸೊಸೈಟಿ ಯ ಅಧ್ಯಕ್ಷ ಕೆ. ನಾಗೇಶ್ ಕಲ್ಲಡ್ಕ , ಸಿಂಡಿಕೇಟ್ ಬ್ಯಾಂಕಿನ ಮಾಜಿ ಪ್ರಭಂಧಕ ನರಸಿಂಹ ಮೂರ್ತಿ, ಜ್ಯೋತಿ ಬೀಡಿಯ ಭುವನೇಶ್ವರ್ ಸಾಫಲ್ಯ, ಮುಂಬಯಿಯ ಹೋಟೇಲು ಉದ್ಯಮಿ ಮನೋಜ್ ಆರ್ ಬಂಗೇರ, ಮಂಗಳೂರಿನ ಉದ್ಯಮಿ ಉಮೇಶ್ ಬೊಳಂತೂರು, ಕೀರ್ತೇಶ್ವರ ದೇವಸ್ಥಾನದ ಅಧ್ಯಕ್ಷ ಹರೀಶ್ಚಂದ್ರ ಮಂಜೇಶ್ವರ, ಸಾಪಲ್ಯ ಸೇವಾ ಸಂಘ ಮುಂಬಯಿ ಉಪಾಧ್ಯಕ್ಷರುಗಳಾದ ಕೃಷ್ಣಕುಮಾರ್ ಬಂಗೇರ ಮತ್ತು ಜೀವನ್ ಸಿರಿಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಟಿ ಸಫಲಿಗ, ಜೊತೆ ಕಾರ್ಯದರ್ಶಿಗಳಾದ ರಾಜೇಶ್ ಕುಮಾರ್ ಪುತ್ರನ್ ಮತ್ತು ಕಿರಣ್ ಕುಮಾರ್ ಸಾಫಲ್ಯ , ಗೌರವ ಕೋಶಾಧಿಕಾರಿ ಹೇಮಂತ್ ಸಫಲಿಗ, ಜೊತೆ ಕೋಶಾಧಿಕಾರಿ, ಸತೀಶ್ ಕುಮಾರ್ ಕುಂದರ್, ಮಹಿಳಾ ಕಾರ್ಯಾಧ್ಯಕ್ಷೆ ಲಕ್ಷ್ಮಿ ಮೆಂಡನ್ , ಯುವ ವಿಭಾಗದ ಕಾರ್ಯಧ್ಯಕ್ಷೆ ಕು.ಸಂಧ್ಯಾ ಪುತ್ರನ್, ಉಪಸ್ಥಿತರಿದ್ದರು.
ಸಮಾಜದ ಸಾಧಕರಾದ ಅಂತರಾಷ್ಟ್ರೀಯ ಜಂಪ್ ರೋಪ್ ಚಾಂಪಿಯನ್ ಮಾ. ಇಷಾನ್ ಚಂದ್ರಶೇಖರ್ ಪುತ್ರನ್, ಸಂಘದ ಜೊತೆ ಕೋಶಾಧಿಕಾರಿ ಸತೀಶ್ ಕುಮಾರ್ ಕುಂದರ್, ಮಹಿಳಾ ವಿಭಾಗದ ಸದಸ್ಯೆ ಶ್ರೀಮತಿ ಉಷಾ ಸಫಲಿಗ, ಯುವ ವಿಭಾಗದ ಸದಸ್ಯ ಸಂತೋಷ್ ಕುಂದರ್ ಇವರನ್ನು ವೇದಿಕೆಯಲ್ಲಿ ಗಣ್ಯರು ಗೌರವಿಸಿದರು. ಗೌರವ ಸ್ವೀಕರಿಸಿ ಮಾತನಾಡಿದ ಅವರು ಸಂಘಕ್ಕೆ ಕೃತಜ್ಞತೆ ಸಲ್ಲಿಸುತ್ತಾ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ಮಾಧವ ಮಾವೆ ಸಾಲೆತ್ತೂರು, ಕೆ. ನಾಗೇಶ್ ಕಲ್ಲಡ್ಕ ದಂಪತಿ, ಸಂಘದ ಸಮಿತಿ ಸದಸ್ಯ ಮಹೇಶ್ ಬಂಗೇರ ದಂಪತಿ ಮತ್ತು ಭಾಸ್ಕರ್ ಬಿ ಸಫಲಿಗ ದಂಪತಿ, ಸಂಘದ ಗೌ. ಕೋಶಾಧಿಕಾರಿ ಹೇಮಂತ್ ಸಫಲಿಗ ದಂಪತಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಕಲಾ ಎಲ್. ಬಂಗೇರ, ಮಹಿಳಾ ವಿಭಾಗದ ಸದಸ್ಯೆಯರಾದ ಶ್ರೀಮತಿ ಶಾಂತ ಸುವರ್ಣ ಮತ್ತು ಶ್ರೀಮತಿ ವಿಮಲಾ ಬಂಗೇರ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಕು. ಸಂಧ್ಯಾ ಪುತ್ರನ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಕುಸುಮಾ ಬಂಗೇರ, ವಾಣಿ ರಘುನಾಥ್, ಸುಲೋಚನಾ ಸಫಲಿಗ, ರಾಜೇಶ್ ಪುತ್ರನ್, ವಾಣಿ ರಘುನಾಥ್, ಪ್ರಮೀಳ ಶೇರಿಗಾರ್, ಲೋಲಾಕ್ಷಿ ಬಂಗೇರ ಮತ್ತು ಪ್ರತಿಭಾ ಸಫಲಿಗ ವಾಚಿಸಿದರು.
ಶ್ರೀಮತಿ ರತಿಕ ಮತ್ತು ಶ್ರೀನಿವಾಸ ಸಾಫಲ್ಯ ಅವರ ಸ್ಥಾಪಿಸಿದ ದತ್ತಿ ನಿಧಿ ಪ್ರಶಸ್ತಿ “ಸಾಫಲ್ಯ ಸಿರಿ 2025” ನ್ನು ಗಿರಿಜಾ ವೆಲ್ಪೇರ್ ನ ಅಧ್ಯಕ್ಷರಾದ ವಸಂತ್ ಜಿ. ಸಾಫಲ್ಯ ಇವರಿಗೆ ಪ್ರಧಾನಿಸಲಾಯಿತು. ದತ್ತಿ ನಿಧಿ ಪ್ರಶಸ್ತಿ ಬಗ್ಗೆ ಡಾ. ಜಿ. ಪಿ. ಕುಸುಮ ಮಾಹಿತಿಯಿತ್ತರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಮಾರಿ ಅಧಿತಿ ಗಾಣಿಗ ಕುಡುಪು ಮಂಗಳೂರು ಇವರಿಂದ, ಭಕ್ತಿ ಗಾನ ವೈಭವ, ಮಹಿಳಾ ಸದಸ್ಯರಿಂದ ಸಮೂಹ ನೃತ್ಯ, ಪ್ರತಿಭಾ ಅನ್ವೇಷಣೆ, ನೃತ್ಯ ವೈಭವ, ಸಂಗೀತ ಇತ್ಯಾದಿ, ಕಾರ್ಯಕ್ರಮಗಳು ನಡೆಯಿತು. ಮುಂಬಯಿಯ ಕು. ಅಂಕಿತ ನಾಯಕ್ ತಂಡದವರಿಂದ ಭಸ್ಮಾಸುರ ಮೋಹಿನಿ ಯಕ್ಷ ನೃತ್ಯ ವೈಭವ, ಶೈಲೇಶ್ ಪುತ್ರನ್ ಮತ್ತು ಕಿರಣ್ ಕುಮಾರ್ ಸಾಫಲ್ಯಇವರ ನಿರ್ದೇಶನದ ಸಾಫಲ್ಯ ಸೇವಾ ಸಂಘದ ಸದಸ್ಯರಿಂದ ತುಳು ಸಾಮಾಜಿಕ ನಾಟಕ “ಏರೆಗ್ಲ ಪನೋಡ್ಚಿ ಪ್ರದರ್ಶನವಿತ್ತು.
ಹಲವು ವರ್ಷಗಳಿಂದ ಸಂಘದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ ಮತ್ತು ಪರಿವಾರಕ್ಕೆ ಸಂಘದ ವತಿಯಿಂದ ವಿಶೇಷ ಸನ್ಮಾನ ನಡೆಯಿತು.
ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು, ಮಹಿಳಾ ಭಾಗ ಮತ್ತು ಯುವ ವಿಭಾಗ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ದೀಪಕ್ ಅಡ್ಯಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು.