ಸಾಮಾಜಿಕ ಜಾಲತಾಣಗಳಲ್ಲಿ ಡಾ. ವಿಶ್ವಸಂತೋಷ ಭಾರತೀ ಶ್ರೀಪಾದರ ವಿರುದ್ದ ಮಾನಹಾನಿ : ದೂರು ದಾಖಲು
ಬ್ರಹ್ಮಾವರ: ಸಾಮಾಜಿಕ ಜಾಲತಾಣಗಳಲ್ಲಿ ಇವರು ಶ್ರೀ ಬಾರ್ಕೂರು ಮಹಾ ಸಂಸ್ಧಾನದ ಡಾ. ವಿಶ್ವಸಂತೋಷ ಭಾರತೀ ಶ್ರೀಪಾದರ ವಿರುದ್ದ ಮಾನಹಾನಿಕರವಾಗಿ ನಿಂದಿಸಿದ ಕುರಿತು ಐದು ಮಂದಿಯ ವಿರುದ್ದ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀ ಬಾರ್ಕೂರು ಮಹಾ ಸಂಸ್ಧಾನದ ಆಡಳಿತಾಧಿಕಾರಿ ಅನಿಲ್ ಕುಮಾರ್ ಶೆಟ್ಟಿ (52) ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಶ್ರೀ ಡಾ. ವಿಶ್ವಸಂತೋಷ ಭಾರತೀ ಶ್ರೀಪಾದ ( ಡಾ. ಸಂತೋಷ ಗುರೂಜಿ) ರವರು ಧಾರ್ಮಿಕ ಮಾರ್ಗದರ್ಶಕ ಗುರುಗಳಾಗಿದ್ದು, ಎ ಎನ್‌ಶೆಟ್ಟಿ, ಪ್ರಮೋದ ಚಂದ್ರ ಭಂಡಾರಿ, ವಸಂತ ಗಿಳಿಯಾರು, ಅಜಿತ್ ಕುಮಾರ ಶೆಟ್ಟಿ, ಗಣೇಶ ಶೆಟ್ಟಿ ಶಿರಿಯಾರ ಹಾಗೂ ಮತ್ತಿತರರು ಶ್ರೀ ಸಂಸ್ಧಾನ ಹಾಗೂ ಗುರುಗಳನ್ನು ವಿರೋಧಿಸಿ ಮಾನ ಹಾನಿ ಮತ್ತು ಅವಹೇಳನಕಾರಿ ರೀತಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುತ್ತಿದ್ದು, ಎಪ್ರಿಲ್ 29 ರಂದು ಬೆಳಿಗ್ಗೆ 9:00 ಗಂಟೆಗೆ 4 ಜನ ಅಪರಿಚಿತರು ಹಳೆಯ ಕೆಂಪು ಬಣ್ಣದ KA-20-528 ನೇ ಸ್ಯಾಂಟ್ರೋ ಕಾರಿನಲ್ಲಿ ಮಠದ ವಠಾರದಲ್ಲಿ ಅಕ್ರಮವಾಗಿ ಸಂಚರಿಸಿ ಮಠದ ಒಳಗೆ ಅಕ್ರಮವಾಗಿ ಪ್ರವೇಶಿಸಿ ಕಾರನ್ನು ತಡೆದು ವಿಚಾರಿಸಿದಾಗ ತಪ್ಪಿಸಿಕೊಂಡು ವೇಗವಾಗಿ ಪಲಾಯನ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಅನಿಲ್ ಕುಮಾರ್ ಶೆಟ್ಟಿ ನೀಡಿದ ದೂರಿನಂತೆ ಬ್ರಹ್ಮಾವರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.