Home Mangalorean News Kannada News ಸಾಮಾಜಿಕ ಜಾಲತಾಣದಲ್ಲಿ ಬೆಳ್ಳಾರೆ ಪೊಲೀಸರ ವಿರುದ್ದ ಸುಳ್ಳು ಮಾಹಿತಿ- ಎಚ್ಚರಿಕೆ ನೀಡಿದ ದಕ ಜಿಲ್ಲಾ ಎಸ್ಪಿ

ಸಾಮಾಜಿಕ ಜಾಲತಾಣದಲ್ಲಿ ಬೆಳ್ಳಾರೆ ಪೊಲೀಸರ ವಿರುದ್ದ ಸುಳ್ಳು ಮಾಹಿತಿ- ಎಚ್ಚರಿಕೆ ನೀಡಿದ ದಕ ಜಿಲ್ಲಾ ಎಸ್ಪಿ

Spread the love

ಸಾಮಾಜಿಕ ಜಾಲತಾಣದಲ್ಲಿ ಬೆಳ್ಳಾರೆ ಪೊಲೀಸರ ವಿರುದ್ದ ಸುಳ್ಳು ಮಾಹಿತಿ- ಎಚ್ಚರಿಕೆ ನೀಡಿದ ದಕ ಜಿಲ್ಲಾ ಎಸ್ಪಿ

ಮಂಗಳೂರು: ದೃಶ್ಯ ಮಾಧ್ಯಮದಲ್ಲಿ ಬಡವರನ್ನು ದೋಚುತ್ತಿರುವ ಬೆಳ್ಳಾರೆ ಪೊಲೀಸರು ಎಂಬ ಸುದ್ದಿ ಸಂಪೂರ್ಣ ಸತ್ಯಕ್ಕೆ ದೂರವಾಗಿದೆ ಎಂದು ದಕ ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಏಪ್ರಿಲ್ 18ರಂದ ದೃಶ್ಯ ಮಾಧ್ಯಮದಲ್ಲಿ ಬಡವರನ್ನು ದೋಚುತ್ತಿರುವ ಬೆಳ್ಳಾರೆ ಪೊಲೀಸರು, ಆಸ್ಪತ್ರೆಗೆ ಹೋಗಬೇಕಾದ್ರೂ ಬಿಲ್ ತೋರಿಸಿದರೂ ಈ ಪೊಲೀಸಪ್ಪನಿಗೆ 1000 ಕೊಟ್ಟು ಊರ ಕೋಳಿ ಕೊಡ್ಬೇಕಂತೆ. ನಿಷ್ಠಾವಂತ ಅಧಿಕಾರಿಗಳ ಮಾನ ಹರಾಜು ಹಾಕುತ್ತಿದ್ದಾನೆ. ಬೆಳ್ಳಾರೆ ಪೊಲೀಸ್ ಠಾಣೆಯ ಪೊಲೀಸ್ ಬಾಲಕೃಷ್ಣ ಅಮಾಯಕನ ಕಣ್ಣೀರ ಕಥೆ ಎಂದು ವರದಿ ಮಾಡಿದ್ದು ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಎಸ್ಪಿ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಿಂದ ವಿಚಾರಣೆ ನಡೆಸಿದ್ದು ವಿಚಾರಣಾ ವರದಿಯಲ್ಲಿ ಯಾವುದೇ ಸತ್ಯಾಂಶ ಕಂಡು ಬಂದಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಕೋವಿಡ್ -19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಳ್ಳಾರೆ ಪಿ ಎಸ್ ಐ ಹಾಗೂ ಸಿಬಂದಿಯವರು ಕಟ್ಟುನಿಟ್ಟಿನ ಕ್ರಮ ನಿರ್ವಹಿಸುತ್ತಿದ್ದಾಗ ಏಪ್ರಿಲ್ 17ರಂದು ನಿಂತಿಕಲ್ಲಿನಲ್ಲಿ ಕರ್ತವ್ಯದಲ್ಲಿರುವಾಗ ಮಾರುತ ಒಮಿನಿ ಕಾರೊಂದಕ್ಕೆ ಖಾಸಗಿ ವಾಹನ ಸಂಚಾರಕ್ಕೆ ನಿಷೇಧ ಇದ್ದಿದ್ದರಿಂದ ವಾಹನನದ ಮಾಲಕನಿಗೆ ದಂಡ ವಿಧಿಸಿ ಕಳುಹಿಸಲಾಗಿದ್ದು, ಈ ಸಂದರ್ಭ ಹೆಚ್ ಸಿ ಬಾಲಕೃಷ್ಣ ಪಿ ಎಸ್ ಐ ಅವರಿಗೆ ಸಹಕರಿಸಿದ್ದರು. ಈ ವಿಚಾರವನ್ನು ತಿಳಿದ ಯಾರೋ ಕೀಡಿಗೇಡಿಗಳು ಸದ್ರಿ ವಾಹನದ ಚಾಲಕ ಪ್ರದೀಪ ಹಾಗೂ ಸುಂದರ್ ರವರನ್ನು ಬಳಸಿಕೊಂಡು ಪೊಲೀಸರ ಮೇಲೆ ಸುಳ್ಳು ಆಪಾದನೆ ಮಾಡುವ ಮೂಲಕ ಸಾರ್ವಜನಿಕ ದೃಷ್ಟಿಯಿಂದ ಕಾರ್ಯ ನಿರ್ವಹಿಸುವ ಪೊಲೀಸರಿಗೆ ಕಳಂಕ ತರುವ ಪ್ರಯತ್ನ ಮಾಡಿರುವುದು ಕಂಡು ಬಂದಿದೆ. ಈ ಘಟನೆಯ ಬಗ್ಗೆ ಟಿವಿ ಮಾಧ್ಯಮದಲ್ಲಿ ಬಂದಿರುವ ವರದಿ ಸಂಪೂರ್ಣ ಸುಳ್ಳೂ ಎಂದು ಪೊಲೀಸ್ ಇಲಾಖೆ ತಿಳಿಸಿದೆ


Spread the love

Exit mobile version