ಸಾರ್ವಜನಿಕರ ಸಹಕಾರದಿಂದ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ – ಜೆ.ಆರ್. ಲೋಬೋ

Spread the love

ಸಾರ್ವಜನಿಕರ ಸಹಕಾರದಿಂದ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ –  ಜೆ.ಆರ್. ಲೋಬೋ

ಮಂಗಳೂರು:  ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಜೆ.ಆರ್. ಲೋಬೋರವರು ಮಂಗಳೂರು ಮಹಾನಗರಪಾಲಿಕಾ ಅಧಿಕಾರಿಗಳೊಂದಿಗೆ ಕದ್ರಿ ಕಂಬಳ ಮುಖ್ಯ ರಸ್ತೆಯ ಎಡ ಪಾಶ್ರ್ವದಲ್ಲಿರುವ ಕದ್ರಿ ಪಾದೆ ಎಂಬ ಸ್ಥಳಕ್ಕೆ ಭೇಟಿ ನೀಡಿ ಪ್ರಮುಖವಾದ ತೆರೆದ ಚರಂಡಿಯ ದುಸ್ಥಿತಿಯನ್ನು ಪರಿಶೀಲಿಸಿ, ಅದರಿಂದ ಉತ್ಪತ್ತಿಯಾಗುವ ಸೊಳ್ಳೆ ಮತ್ತು ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಸ್ಥಳೀಯ ನಿವಾಸಿಗಳಲ್ಲಿ ಚರ್ಚಿಸಿ, ಅಹವಾಲುಗಳನ್ನು  ಸ್ವೀಕರಿಸಿ, ಮಂಗಳೂರು ಮಹಾನಗರಪಾಲಿಕಾ ಮುಖೇನವಾಗಿ ಶೀಘ್ರವಾಗಿ ಪರಿಹಾರ ಕಲ್ಪಿಸುವುದಾಗಿ ಭರವಸೆಯನ್ನಿತ್ತರು.

jr-lobo-20160629

ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡುತ್ತಾ, ಯಾವುದೇ ಅಭಿವೃದ್ಧಿ ಕಾರ್ಯಗಳು ಯಶಸ್ವಿ ಕಾಣಬೇಕಾದರೆ ಪ್ರಮುಖವಾಗಿ ಸಾರ್ವಜನಿಕರ ಸಹಕಾರ ಪ್ರಮುಖವೆಂದರು. ಮಂಗಳೂರನ್ನು ಕಾಡುತ್ತಿರುವ ಒಳಚರಂಡಿ ಅವ್ಯವಸ್ಥೆ ತನ್ನ ಅಧಿಕಾರಾವಧಿಯಲ್ಲಿ ಸರಿಪಡಿಸುವ ದಿಟ್ಟ ಹೆಜ್ಜೆಯನ್ನಟ್ಟಿದ್ದು ಯಶಸ್ಸು ಕಾಣುತ್ತಿದೆ ಎಂದರು.

ಸ್ಥಳೀಯ ಮಂಗಳೂರು ಮಹಾನಗರಪಾಲಿಕಾ ಸದಸ್ಯರಾದ ಶ್ರೀ ಡಿ.ಕೆ. ಅಶೋಕ್ ಕುಮಾರ್‍ರವರು ಕದ್ರಿ ಪರಿಸರದಲ್ಲಿರುವ ಎಲ್ಲಾ ಸಮಸ್ಯೆಗಳ ಬಗ್ಗೆ ಸಂಕ್ಷಿಪ್ತವಾದ ವಿವರಣೆ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಂಗ್ರೆಸ್ ಪಕ್ಷದ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷರಾದ ವಿಶ್ವಾಸ್‍ದಾಸ್ ರವರು ಮಂಗಳೂರು ಮಹಾನಗರ ಸದಸ್ಯರಾಗುವುದು ಪ್ರಮುಖವಲ್ಲ, ಸಮಾಜಮುಖಿಯಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯೋನ್ಮುಖರಾಗುವುದು ಪ್ರಮುಖ ಎಂದರು. ಸಮಗ್ರ ಅಭಿವೃದ್ಧಿಯಲ್ಲಿ ಆಯ್ಕೆಗೊಂಡ ಸದಸ್ಯರು ಪಕ್ಷಬೇಧ ಮರೆತು ಅಭಿವೃದ್ಧಿಗಾಗಿ ಉತ್ಸುಕರಾಗಬೇಕೆಂದರು. ಸಭಾವೇದಿಕೆಯಲ್ಲಿ ಮೋಹನ್ ಪಿ.ವಿ., ರಘುಪಾಲ್, ಪ್ರಕಾಶ್ ಸಾಲಿಯಾನ್, ಪುಷ್ಪರಾಜ್, ಶಶಿಕಲಾ ಉಪಸ್ಥಿತರಿದ್ದರು.

ಸ್ಥಳೀಯ ಪ್ರತಿನಿಧಿಗಳಾಗಿ ಸುರೇಶ್ ಕುಮಾರ್ ಕದ್ರಿ, ವಿನ್ಸೆಂಟ್ ಗೋವಿಯಸ್, ವಸಂತ್ ಕುಮಾರ್, ರಮೇಶ್ ಕುಮಾರ್‍ರವರು ಕಾರ್ಯಕ್ರಮದ ಸಂಪೂರ್ಣ ವ್ಯವಸ್ಥೆಯಲ್ಲಿ ಪ್ರಧಾನರೆನಿಸಿದರು. ಈ ಸಂದರ್ಭದಲ್ಲಿ ಕದ್ರಿ ಪಾದೆಯ ಎಲ್ಲಾ ನಿವಾಸಿಗಳು ಉಪಸ್ಥಿತರಿದ್ದು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.


Spread the love