ಸಾರ್ವಜನಿಕ ಕಟ್ಟಡಗಳಲ್ಲಿ ರ್ಯಾಂಪ್ ಅಳವಡಿಸಿ – ಎ.ಬಿ ಇಬ್ರಾಹಿಂ

Spread the love

ಮ0ಗಳೂರು :- ಅಂಗವಿಕಲರು ತಮ್ಮ ಕೆಲಸ ಕಾರ್ಯಗಳಿಗಾಗಿ ಸರಕಾರಿ, ಖಾಸಗಿ ಹಾಗೂ ಸಾರ್ವಜನಿಕ ಬ್ಯಾಂಕುಗಳಿಗೆ ಭೇಟಿ ನೀಡುವುದು ಸಹಜ, ಆದರೆ ಬಹುತೇಕ ಕಛೇರಿಗಳು ಬ್ಯಾಂಕುಗಳಿಗೆ ಅಂಗವಿಕಲರು ಸರಾಗವಾಗಿ ಹೋಗಿ ತಮ್ಮ ಕೆಲಸಗಳನ್ನು ಪೂರೈಸಲು ಕಷ್ಟವಾಗುತ್ತಿದೆ. ಆದ್ದರಿಂದ ಎಲ್ಲಾ ಕಛೇರಿಗಳು ಅಂಗವಿಕಲ ಸ್ನೇಹಿ ವಾತವರನ ಅಂದರೆ ರ್ಯಾಂಪ್ ಅಳವಡಿಸುವುದು, ಲಿಫ್ಟ್‍ಗಳನ್ನು ಹೊಂದುವುದು ಇವೇ ಮೊದಲಾದ ಮೂಲಭೂತ ಸೌಲಭ್ಯಗಳನ್ನು ನ್ಯಾಷನಲ್ ಟ್ರಸ್ಟ್ ಆಕ್ಟ್ 1999 ರನ್ವಯ ಹೊಂದುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.
ಅವರು ಇಂದು ತಮ್ಮ ಕಛೇರಿಯಲ್ಲಿ ನಡೆದ ನ್ಯಾಷನಲ್ ಟ್ರಸ್ಟ್ ಆಕ್ಟ್ 1999 ರ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಕಾಯ್ದೆಯಂತೆ ಯಾವುದೇ ಕಛೇರಿಗಳು ಅಂಗವಿಕಲರಿಗೆ ಸೂಕ್ತ ಸೌಲಭ್ಯ ಒದಗಿಸದಿದ್ದಲ್ಲಿ ಅಂತಹ ಕಛೇರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಎಲ್ಲಾ ಕಚೇರಿಗಳು ತಮ್ಮ ಆವರಣದಲ್ಲಿ ವಿಕಲಚೇತನ ಸ್ನೇಹಿ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ರಾಜೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಸುಂದರ ಪೂಜಾರಿ, ಮುಂತಾದವರು ಭಾಗವಹಿಸಿದ್ದರು.


Spread the love