ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ ಆಡುತ್ತಿದ್ದ ಏಳು ಮಂದಿಯನ್ನು ಬಂಧಿಸಿದ ಕಾವೂರು ಪೊಲೀಸರು
ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಜೂಜಾಟ ಆಡುತ್ತಿದ್ದ ಧಂಧೆಗೆ ಧಾಳಿ ನಡೆಸಿ ಕಾಫೂರು ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಖಾದರ್ ಬಾಷಾ (25), ಮಂಜುನಾಥ ಶೆಟ್ಟರ್ (26), ಮಂಜುನಾಥ ಯಲಬುರ್ದಿ (23), ರಂಗನಾಥ (43), ಪ್ರತಾಪ್ (36), ನಾಗಪ್ಪ (36), ಮುತ್ತಪ್ಪ (38) ಎಂದು ಗುರುತಿಸಲಾಗಿದೆ.
ಭಾನುವಾರ ಕಾಪೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಡುಶೆಡ್ಡೆ ಗ್ರಾಮದ ಮಂಜಲ್ಪಾದೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪಿಟು ಆಡುತ್ತಿದ್ದ ದಂಧೆಗೆ ಧಾಳಿ ನಡೆಸಿ ಇಸ್ಪೀಟು ಜೂಜಾಟ ಆಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಬಂಧಿತರಿಂದ ಆಟಕ್ಕೆ ಬಳಸಿದ 52 ಇಸ್ಪೀಟ್ ಎಲೆಗಳನ್ನು ಮತ್ತು ಪಣವಾಗಿಟ್ಟ ರೂ 22410 ನಗದು ಹಣ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಉತ್ತರ ವಿಭಾಗ ಪಣಂಬೂರು ಎಸಿಪಿ ರಾಜೇಂದ್ರ ಡಿ ಎಸ್ ಅವರ ಮಾರ್ಗದರ್ಶನದಂತೆ ಕಾವೂರು ಠಾಣಾ ಪೊಲೀಸ್ ನಿರೀಕ್ಷಕರಾದ ಕೆ ಆರ್ ನಾಯ್ಕ್, ಮತ್ತು ಸಿಬಂದಿಗಳಾದ ಹೆಡ್ ಕಾನ್ಸ್ ಟೇಬಲ್ ವಿಶ್ವನಾಥ, ದುರ್ಗಾಪ್ರಸಾದ್ ಶೆಟ್ಟಿ, ರಾಜಶೇಖರ್ ಗೌಡ, ಪಿಸಿಗಳಾದ ಕೇಶವ್, ವಿನಯ್ ಕುಮಾರ್ ಹೆಚ್ ಕೆ, ರಶೀದ್ ಶೇಖ್, ಸಿಖಂದರ್ ಚಿಂಚಲಿ, ಶರಣಪ್ಪ, ಕೃಷ್ಣಪ್ಪ ಶಿವರಾಜ್ ಅಸೋಡೆ, ಕಿರಣ್ ಕುರಿಮನಿ ಭಾಗವಹಿಸಿದ್ದರು.