Home Mangalorean News Kannada News ಸಾವಿನ ಬಳಿಕ ಮೃತದೇಹ ಆಸ್ಪತ್ರೆಗೆ ದಾನ ಮಾಡಿದ ಹಿರಿಯ ನಾಗರಿಕ

ಸಾವಿನ ಬಳಿಕ ಮೃತದೇಹ ಆಸ್ಪತ್ರೆಗೆ ದಾನ ಮಾಡಿದ ಹಿರಿಯ ನಾಗರಿಕ

Spread the love

ಸಾವಿನ ಬಳಿಕ ಮೃತದೇಹ ಆಸ್ಪತ್ರೆಗೆ ದಾನ ಮಾಡಿದ ಹಿರಿಯ ನಾಗರಿಕ

ಉಡುಪಿ: ವಯೋಸಹಜವಾಗಿ ಮೃತರಾದ ಬ್ರಹ್ಮಾವರ ವ್ಯಕ್ತಿಯೋರ್ವರು ತಮ್ಮ ಮೃತದೇಹವನ್ನು ಮಣಿಪಾಲ ಆಸ್ಪತ್ರೆಗೆ ದಾನ ಮಾಡಿದ್ದಾರೆ.

ಶ್ರೀ ಶ್ರೀನಿವಾಸ ಶೆಟ್ಟಿಯವರು ಅಗಸ್ಟ್ 24ನೇ ತಾರೀಕು ಈ ದಿನ ರಾತ್ರಿ 7.45 ಕ್ಕೆ ನಿಧನರಾಗಿರುವರು ಮೃತರಿಗೆ 87 ವರ್ಷ ವಯಸ್ಸಾಗಿತ್ತು.

ತಮ್ಮ ಸ್ವ ಇಚ್ಛೆಯಂತೆ ತಮ್ಮ ಮೃತದೇಹವನ್ನು ಮಣಿಪಾಲ ಮೆಡಿಕಲ್ ಆಸ್ಪತ್ರೆಗೆ ದಾನ ನೀಡುವ ಸಲುವಾಗಿ ಈ ಮೊದಲೇ ನೋಂದಣಿ ಮಾಡಿಸಿ ಕೊಂಡಿದ್ದರು.

ಅವರ ಮರಣದ ನಂತರದ ಬ್ರಹ್ಮಾವರದ ಸರ್ಕಾರಿ ಆಸ್ಪತ್ರೆಯಲ್ಲಿ ಕೊವಿಡ್ ಟೆಸ್ಟ್ ಮಾಡಿಸಿ ನೆಗೆಟಿವ್ ದೃಡೀಕರಣ ಸರ್ಟಿಫಿಕೇಟ್ ನೊಂದಿಗೆ ಇಚ್ಛೆಯಂತೆ ಮಣಿಪಾಲ ಆಸ್ಪತ್ರೆಗೆ ಮೃತ ದೇಹವನ್ನು ಈ ದಿನ ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆದು ಅಸ್ಪತ್ರೆಗೆ ಕಳುಹಿಸಲಾಗಿದೆ.

ತನ್ನ ಮೃತ ದೇಹವನ್ನು ದಾನಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಮಹಾದಾನ ನೀಡಿರುವ ಶ್ರೀನಿವಾಸ್ ಶೆಟ್ಟಿಯವರು ಉಡುಪಿ ಜಿಲ್ಲೆಯ ಬ್ರಹ್ಮಾವರದ ಹೆರೂರು ನಿವಾಸಿಯಾಗಿದ್ದರು.

ಶ್ರೀನಿವಾಸ್ ಶೆಟ್ಟಿಯವರು ಪತ್ನಿ ಶ್ರೀಮತಿ ಸರೋಜ ಶೆಟ್ಟಿ. ಮಗ ಶಿವಶಂಕರ್ ಶೆಟ್ಟಿ, ಶಶಿಧರ ಶೆಟ್ಟಿ ಮತ್ತು ದುಬಾಯಿಯಲ್ಲಿ ನೆಲೆಸಿರುವ ಮಂಜುಳಾ ಗಣೇಶ್ ರೈ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ದುಬಾಯಿಯಲ್ಲಿ ನೆಲೆಸಿರುವ ಮಗಳು ಮಂಜುಳಾ ಗಣೇಶ್ ರೈ ಕುಟುಂಬದವರು ಕೋವಿಡ್ ಕಾನೂನು ಕಟ್ಟಪಾಡಿನ ಕಾರಣ ವಿಮಾನ ಯಾನ ಸೌಲಭ್ಯ ದೊರೆಯದ ಕಾರಣ ದುಬಾಯಿ ಯಿಂದ ಊರಿಗೆ ಬರಲು ಸಾಧ್ಯವಾಗದೆ ವೀಡಿಯೋ ಕಾಲ್ ಮೂಲಕ ಮೃತರ ಅಂತಿಮ ದರ್ಶನ ಪಡೆದರು.


Spread the love
1 Comment
Inline Feedbacks
View all comments
VITTAL SHETTY
4 years ago

A big salute to the great person for his dedication and also to his family members.

wpDiscuz
Exit mobile version