Home Mangalorean News Kannada News ಸಾಸ್ತಾನ ಟೋಲ್ ಗೇಟ್ : ಸ್ಥಳೀಯರಿಗೆ ವಿನಾಯಿತಿ, ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ ಪ್ರತಿಭಟನೆ

ಸಾಸ್ತಾನ ಟೋಲ್ ಗೇಟ್ : ಸ್ಥಳೀಯರಿಗೆ ವಿನಾಯಿತಿ, ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ ಪ್ರತಿಭಟನೆ

Spread the love

ಸಾಸ್ತಾನ ಟೋಲ್ ಗೇಟ್ : ಸ್ಥಳೀಯರಿಗೆ ವಿನಾಯಿತಿ, ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ ಪ್ರತಿಭಟನೆ

ಉಡುಪಿ: ಸಾಸ್ತಾನ ಟೋಲ್ ಸಂಗ್ರಹಣಾ ಕೇಂದ್ರದಲ್ಲಿ ಉಡುಪಿ ಜಿಲ್ಲಾ ನೋಂದಣಿ ಸಂಖ್ಯೆಯ ವಾಹನಗಳಿಗೆ ವಿನಾಯಿತಿ ನೀಡಬೇಕು ಮತ್ತು ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಾಗಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಟೋಲ್ ಗೇಟ್‌ಗೆ ಸಾರ್ವಜನಿಕರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ ಅವರು ಅಂಬಲಪಾಡಿ, ಬಸ್ರೂರು ಮೂರಕೈ ಮತ್ತು ನಾನಾಕಡೆ ಫ್ಲೈಒವರ್ ಮಾಡಬೇಕೆಂಬ ಬೇಡಿಕೆ ಈಡೇರಿಲ್ಲ. ಸರ್ವಿಸ್ ರಸ್ತೆ, ಚರಂಡಿ ದಾರಿದೀಪ ವ್ಯವಸ್ಥೆಯನ್ನು ಮಾಡಿಲ್ಲ. ಪಡುಬಿದ್ರೆಯಲ್ಲಿ ರಸ್ತೆ ಕಾಮಾಗಾರಿ ಇನ್ನೂ ಕೂಡ ಆರಂಭಿಸಿಲ್ಲ. ಕೋಟ ಸಾಲಿಗ್ರಾಮ, ಸಾಸ್ತಾನ ಬ್ರಹ್ಮಾವರ, ಸಂತೆಕಟ್ಟೆ, ಕಟಪಾಡಿ ಹಾಗೂ ಪೇಟೆ ಭಾಗದಲ್ಲಿ ಯೂ ತರ್ನ ನೀಡಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಇದ್ದು ಅಫಘಾತಗಳು ಸಂಭವಿಸುತ್ತವೆ.

ಹೆದ್ದಾರಿ ಅಗಲಿಕರಣ ಹೆಸರಿನಲ್ಲಿ ಹತ್ತಾರು ಬಸ್ಸು ತಂಗುದಾಣ, ತೆರವುಗೊಳಿಸಲಾಗಿದೆ. ಅಟೋರಿಕ್ಷಾ, ಗೂಡ್ಸ್ ಮತ್ತು ಟೂರಿಸ್ಟ್ ವಾಹನಗಳ ತಂಗುದಾಣಕ್ಕೆ ವ್ಯವಸ್ಥೆಯನ್ನು ಮಾಡಿಲ್ಲ ಈ ಎಲ್ಲಾ ಸಮಸ್ಯೆಗಳ ಹೊರತಾಗಿಯೂ ಡಿಸೆಂಬರ್ 2 ರಿಂದ ಟೋಲ್ ಸಂಗ್ರಹಕ್ಕೆ ಹೊರಟಿರುವುದು ಸರಿಯಲ್ಲ. ಈ ಎಲ್ಲಾ ಸಮಸ್ಯೆಗಳು ಸರಿಯಾಗುವು ತನಕ ಟೋಲ್ ವಸೂಲಿಗೆ ಅವಕಾಶ ನೀಡುವುದಿಲ್ಲ ಅಲ್ಲದೆ ಕೆ ಎ 20 ನೋಂದಣಿಯ ಎಲ್ಲಾ ವಾಹನಗಳಿಗೆ ಶುಲ್ಕ ವಿನಾಯಿತಿ ನೀಡಬೇಕು ಎಂದರು.

image001protest-against-toll-collection-sastan-20161130

ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ರಾಜೇಶ್ ಕಾವೇರಿ, ರಾ.ಹೆದ್ದಾರಿ ಅಗಲೀಕರಣ ಕಾಮಗಾರಿ ಆರಂಭಗೊಂಡಂದಿನಿಂದಲೂ ಸ್ಥಳೀಯರಿಗೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಸಮಸ್ಯೆಗಳಿದ್ದರೂ ವಾಹನ ಸವಾರರು ತಾಳ್ಮೆ ವಹಿಸಿಕೊಂಡಿದ್ದರು. ಆದರೆ ನಮ್ಮ ಈ ತಾಳ್ಮೆಯನ್ನು ದುರುಪಯೋಗಪಡಿಸಿಕೊಂಡಿರುವ ಇಲಾಖೆ ನಮ್ಮ ಜೊತೆ ಆಟವಾಡುತ್ತಿದೆ. ಇಂದು ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಬೇಡಿಕೆ ಈಡೇರಿಸದೆ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್, ಪತ್ರಕರ್ತ ರಾಮಕೃಷ್ಣ ಹೇರ್ಳೆ, ಕರ್ನಾಟಕ ಕಾರ್ಮಿಕ ವೇದಿಕೆ ಅಧ್ಯಕ್ಷ ರವಿ ಶೆಟ್ಟಿ, ಗ್ರಾಮಪಂಚಾಯತ್ ಅಧ್ಯಕ್ಷರಾದ ಮೊಸೆಸ್ ರೊಡ್ರಿಗಸ್, ಗೋವಿಂದ ಪೂಜಾರಿ, ಪಟ್ಟಣ ಪಂಚಾಯತ್ ಅಧ್ಯಕ್ಷೆ ವಸುಮತಿ ನಾಯರಿ, ರಾಜು ಪೂಜಾರಿ, ಕಿಶೋರ್ ಕುಮಾರ್, ಪ್ರಕಾಶ್ ಟೆಲ್ಲಿಸ್, ಆಲ್ವಿನ್ ಅಂದ್ರಾದೆ, ಬನ್ನಾಡಿ ಸೋಮನಾಥ್ ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.

ನಂತರ ಸಾರ್ವಜನಿಕರು ಟೋಲ್ ಘಟಕಕ್ಕೆ ಮುತ್ತಿಗೆ ಹಾಕಿ ಕೆಲ ಕಾಲ ರಸ್ತೆ ತಡೆ ನಡೆಸಿದರು. ಕೆ.ಎ 20 ವಾಹನಗಳಿಗೆ ವಿನಾಯಿತಿ ನೀಡಬೇಕು, ರಸ್ತೆ ನಿರ್ಮಾಣ ಸಂದರ್ಭ ನಡೆದ ಅವ್ಯವಸ್ಥೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.


Spread the love

Exit mobile version