Home Mangalorean News Kannada News ಸಾಸ್ತಾನ, ಬ್ರಹ್ಮಾವರಗಳಲ್ಲಿ ಕ್ರೈಸ್ತ ಭಾಂಧವರಿಂದ ಸಂಭ್ರಮದ ತೆನೆಹಬ್ಬ

ಸಾಸ್ತಾನ, ಬ್ರಹ್ಮಾವರಗಳಲ್ಲಿ ಕ್ರೈಸ್ತ ಭಾಂಧವರಿಂದ ಸಂಭ್ರಮದ ತೆನೆಹಬ್ಬ

Spread the love

ಸಾಸ್ತಾನ, ಬ್ರಹ್ಮಾವರಗಳಲ್ಲಿ ಕ್ರೈಸ್ತ ಭಾಂಧವರಿಂದ ಸಂಭ್ರಮದ ತೆನೆಹಬ್ಬ

ಉಡುಪಿ: ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿ ಫೆಸ್ಟ್ ಅಥವಾ ಕರಾವಳಿ ಕೊಂಕಣಿಗರ ತೆನೆಹಬ್ಬವನ್ನು ಬ್ರಹ್ಮಾವರ ತಾಲೂಕಿನಾದ್ಯಂತ ಕ್ರೈಸ್ತ ಭಾಂಧವರು ಸಂಭ್ರಮ ಮತ್ತು ಸಡಗರದಿಂದ ಆಚರಿಸಿದರು.

ಮಕ್ಕಳು ಮೆರವಣಿಗೆಯಲ್ಲಿ ಮಾತೆ ಮೇರಿ ಪ್ರತಿಮೆಗೆ ಹೂಗಳನ್ನು ಅರ್ಪಿಸಿದರು. ಧರ್ಮಗುರುಗಳು ಹೊಸ ತೆನೆಯನ್ನು ಆಶೀರ್ವಚಿಸಿ ಹಬ್ಬದ ಸಂದೇವನ್ನು ಚರ್ಚುಗಳಲ್ಲಿ ನೀಡಿದ ಬಳಿಕ ಪ್ರತಿಯೊಬ್ಬರಿಗೂ ಹೊಸ ತೆನೆಯನ್ನು ವಿತರಿಸಿ ಆಶೀರ್ವದಿಸಿದರು.

ಸಾಸ್ತಾನದ ಸಂತ ಅಂತೋನಿ ದೇವಾಲಯದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ವಂ. ಜೋನ್ ವಾಲ್ಟರ್ ಮೆಂಡೋನ್ಸಾ ಅವರು ಹೊಸ ತೆನೆಯನ್ನು ಆಶೀರ್ವದಿಸಿ ಹಬ್ಬದ ಸಂದೇಶ ನೀಡಿದರು. ಈ ವೇಳೆ ಪರಿಸರ ಸಂರಕ್ಷಣೆಯ ಕುರಿತು ಪ್ರತಿಯೊಬ್ಬರು ಒತ್ತು ನೀಡುವಂತೆ ಕರೆ ನೀಡಿದರು. ಇದೇ ವೇಳೆ ಹೂ ತಂದ ಮಕ್ಕಳಿಗೆ ಕಬ್ಬನ್ನು ಕೂಡ ವಿತರಿಸಲಾಯಿತು. ಮಹಿಳಾ ಸಂಘಟನೆಯ ಆಶ್ರಯದಲ್ಲಿ ಸಾಮೂಹಿಕವಾಗಿ ಹೊಸ ತೆನೆಯನ್ನು ಸೇರಿಸಿದ ಪಾಯಸವನ್ನು ವಿತರಿಸಲಾಯಿತು.

ಚರ್ಚಿನ ಸಾಮೂಹಿಕ ಪೂಜೆಯ ಬಳಿಕ ಮನೆಗೆ ತೆರಳಿದ ಕ್ರೈಸ್ತರು ಮನೆಗಳಲ್ಲಿ ಹಬ್ಬದ ಅಂಗವಾಗಿ ವಿವಿಧ ತರಕಾರಿ ಭಕ್ಷ್ಯಗಳನ್ನು ತಯಾರಿಸಿ ಕುಟುಂಬ ಸದಸ್ಯರೊಂದಿಗೆ ಸೇರಿ ಸವಿದರು.

ಬ್ರಹ್ಮಾವರ ಹೊಲಿ ಫ್ಯಾಮಿಲಿ ಚರ್ಚ್, ಎಸ್ ಎಮ್ ಎಸ್ ಸೀರಿಯನ್ ಚರ್ಚು, ಬಾರ್ಕೂರು ಸಂತ ಪೀಟರ್ ಚರ್ಚು, ಸಾಸ್ತಾನ ಸಂತ ಥೋಮಸ್ ಚರ್ಚು ಇನ್ನಿತರ ಚರ್ಚುಗಳಲ್ಲಿ ಕೂಡ ತೆನೆಹಬ್ಬವನ್ನು ಕ್ರೈಸ್ತು ಸಂಭ್ರಮದಿಂದ ಆಚರಿಸಿದರು.


Spread the love

Exit mobile version