ಸಾಸ್ತಾನ ಮಿತ್ರರ ಸಹಯೋಗದೊಂದಿಗೆ ಆರ್.ಸಿ.ಫ಼್ರೇಂಡ್ಸ್ ವಿಶ್ವ ಪರಿಸರ ದಿನಾಚರಣೆ
ಉಡುಪಿ: ಈ ಭೂಮಿ ಮನುಷ್ಯರಿಗೆ ಜೀವಿಸಲು ಏನೇಲ್ಲ ಅಗತ್ಯವಿದೆಯೋ ಅದೆಲ್ಲವನ್ನು ನೀಡಿ ನಮ್ಮೆಲ್ಲರನ್ನು ಪೋಷಿಸಿ ಬೆಳೆಸುತ್ತಿದೆ.. ನಾವು ನೀವೆಲ್ಲ ಇದನ್ನು ಸದ್ಬಳಕೆ ಮಾಡುವುದಕ್ಕಿಂತ ದುರ್ಬಳಕೆ ಮಾಡಿದ್ದೆ ಹೆಚ್ಚು ಎಂದು ಹೇಳಿದರೆ ತಪ್ಪಾಗಲಾರದು.
ಬದುಕಲು ಫ಼ಲವತ್ತಾದ ಭೂಮಿ, ಕುಡಿಯಲು ಶುದ್ದವಾದ ನೀರು , ಸೇವಿಸಲು ಪರಿಶುದ್ದ ಗಾಳಿ, ಸಮಯಕ್ಕೆ ಸರಿಯಾಗಿ ಮಳೆ ಬೆಳೆ, ದಟ್ಟವಾದ ಕಾಡುಗಳು ಇವೆಲ್ಲವು ನಮ್ಮ ಪೂರ್ವಜರ ಕಾಲದಲ್ಲಿ ಇದ್ದದ್ದನ್ನು ನಾವು ನಮ್ಮ ಪಠ್ಯ ಪುಸ್ತಕದಲ್ಲಿ ಓದಿ ತಿಳಿದಿದ್ದೇವೆ.. ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ನಾವು ಹುಟ್ಟುವಾಗ ಇವೆಲ್ಲವು ಆಗಲೇ ಕಲುಷಿತಗೊಂಡಾಗಿತ್ತು, ಈಗಲಂತೂ ಇದೂ ಬಹಳಷ್ಟು ಕಲಿಷಿತಗೊಂಡು ಮನುಷ್ಯನ ಜೀವಕ್ಕೆ ಅಪಾಯ ತಂದೊಡ್ಡುವ ಹಂತಕ್ಕೆ ಬಂದು ತಲುಪಿದೆ.
ಇನ್ನಾದರೂ ನಾವು ನೀವು ಎಚ್ಚೆತ್ತುಕೊಳ್ಳದೆ ಹೊದರೆ ಈ ಕಲಿಯುಗದ ಅಂತ್ಯ ಅತ್ಯಂತ ಸಮೀಪದಲ್ಲಿದೆ ಎಂದುಕೊಳ್ಳಬಹುದು.
ಅನಿಯಮಿತ ಮಳೆ, ಚಳಿ ಬಿಸಿಲು, ಕಲುಷಿತಗೊಂಡಿರುವ ಗಾಳಿ,ನೀರು ಇವೆಲ್ಲವುದನ್ನು ನಿಯಂತ್ರಣದಲ್ಲಿಡಲು ಗಿಡ ಮರಗಳ ಪಾತ್ರ ಬಹಳ ದೊಡ್ಡದು.. ಶಾಲೆಯಲ್ಲಿ ನಾವು ಕಲಿತದ್ದು ಕೇವಲ ಪರೀಕ್ಷೇಯಲ್ಲಿ ಸಾಧನೆ ಮಾಡಲು ಮಾತ್ರವಲ್ಲದೇ ಜೀವನಲ್ಲಿ ಏಳಿಗೆ ಪಡೆಯಲು ಎಂದು ನಾವು ಮೊದಲು ಅರಿಯಬೇಕು.
ಪರಿಸರ ರಕ್ಷಣೆಗೆ ಛಲಬಿಡದ ತ್ರಿವಿಕ್ರಮರಂತೆ ಸಾಸ್ತಾನ ಮಿತ್ರರು ಬಹಳಷ್ಟು ವರ್ಷಗಳಿಂದ ಗಿಡ ಮರಗಳನ್ನು ನೆಟ್ಟು ಪೋಷಿಸುತ್ತಿರುವ ಇವರಿಂದ ಪ್ರೇರೆಪಿತರಾಗಿ ಆರ್.ಸಿ.ಫ಼್ರೇಂಡ್ಸ್(ರಾಜೀವ ನಗರ,80ನೇ ಬಡಗಬೆಟ್ಟು ಗ್ರಾಮ) ನ ಸದಸ್ಯರ ನೇತ್ರತ್ವದಲ್ಲಿ ಬೀಜದುಂಡೆ(ಮರವಾಗಿ ಬೆಳೆಯುವ ಮೋಳಕೆ ಬಂದ ಬೀಜ) ಗಳನ್ನು ಆರ್ ಸಿ ಗ್ರೌಂಡ್ ನ ಸುತ್ತ ಹಾಗು ಮಂಚಿಕೆರೆ ವಾಸುಕೀ ನಾಗಯಕ್ಷೀ ನಾಗ ಸನ್ನಿದಾನ ದ ಬಳಿ ನೇಡುವ ಮೂಲಕ ಪರಿಸರ ರಕ್ಷಣೆಗೆ ಮೊದಲ ಹೆಜ್ಜೆಯನ್ನು ಇಟ್ಟಿತು.
ಆರ್ ಸಿ ಫ಼್ರೇಂಡ್ಸ್ ಬಹಳ ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಶೈಕ್ಷಣಿಕ, ಸಾಮಾಜಿಕ , ಧಾರ್ಮಿಕ,ವೈದ್ಯಕೀಯ ಹಾಗು ಕ್ರೀಡಾ ಕ್ಷೇತ್ರಗಳಿಗೆ ತನ್ನ ಸಹಕಾರವನ್ನು ನೀಡುತ್ತಾ ಬರುತ್ತಿದ್ದು ಪರಿಸರ ರಕ್ಷಣೆಗೆ ಮೊದಲ ಬಾರಿ ಹೆಜ್ಜೆಯನ್ನಿಟ್ಟಿದೆ.
80 ನೇ ಬಡಗಬೆಟ್ಟು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶಾಂತರಾಮ್ ಶೆಟ್ಟಿ ಇವರು ಬೀಜದುಂಡೆಗಳನ್ನು ನೆಡುವ ಮೂಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉಡುಪಿ ಆರ್ಗಾನಿಕ್ ಕ್ಲಬ್ ನ್ನು ಮುನ್ನಡೆಸುತ್ತಿರುವ ಮಹೇಶ್ ಶೆಣೈ,ಕಟಪಾಡಿ ಇವರು ಮುಖ್ಯ ಅತಿಥಿಯಾಗಿ ಆಗಮಿಸಿ ಪರಿಸರ ಸಂರಕ್ಷಣೆ, ಸಾವಯವ ಕೃಷಿ ಹಾಗು ಮನೆಯ ತಾರಸಿಯ ಮೇಲೆ ಸಾವಯವ ರೀತಿಯಲ್ಲಿ ತರಕಾರಿ ಬೆಳೆಸುವ ಅನಿವಾರ್ಯತೆಯ ಬಗ್ಗೆ ಮಾಹಿತಿ ನೀಡಿದರು.
ಆರ್ ಸಿ ಫ಼್ರೆಂಡ್ಸ್ ನ ಸುನೀಲ್ ಸೇರಿಗಾರ್, ರಾಜ , ಸುಧೀರ್ ನಾಯಕ್, ಸುಧೀರ್ ಪೂಜಾರಿ, ಕಲ್ಫನ್, ಧನಂಜಯ, ಶಿವ ಪ್ರಸಾದ್,ಸಮಿತ್, ಶಶಿ ಕುಮಾರ್,ಅರುಣ್,ಗಂಪೂ ಮತ್ತಿತರರು ಉಪಸ್ಥಿತರಿದ್ದರು.